ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡದ ನಾನಾ ಪಾಟೇಕರ್

ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ ನಾನಾ ಪಾಟೇಕರ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಕಾರಣ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತ ಮಾಡಿರುವ ಲೈಂಗಿಕ ಕಿರುಕುಳ ಆರೋಪ.

ತನುಶ್ರೀ ದತ್ತ ಆರೋಪಕ್ಕೆ ಅನೇಕ ಬಾಲಿವುಡ್ ನಟಿಯರು ತಮ್ಮ ಸಾಥ್ ನೀಡಿದ್ದರು. ಆದರೆ, ತನ್ನ ಮೇಲೆ ಇದ್ದ ಲೈಂಗಿಕ ಕಿರುಕುಳ ಆರೋಪ ಬಗ್ಗೆ ಮೌನವಾಗಿದ್ದ ನಾನಾ ಪಾಟೇಕರ್ ಇಂದು ಮಾಧ್ಯಮಗಳು ಮಾತನಾಡುವುದಾಗಿ ಹೇಳಿದ್ದರು. ಇಂದು ಪ್ರೆಸ್ ಮೀಟ್ ಮಾಡಿದ ಅವರು ಏನು ಹೇಳುತ್ತಾರೋ ಎಂಬ ಕುತೂಹಲ ಎಲ್ಲರಿಗೆ ಇತ್ತು.

ಆದರೆ, ಮಾಧ್ಯಮಗಳ ಮುಂದೆ ಹೆಚ್ಚೇನು ಹೇಳಿಕೊಳ್ಳದ ನಾನಾ ಪಾಟೇಕರ್ ''ನನ್ನ ವಕೀಲರು ಮಾಧ್ಯಮಗಳ ಮುಂದೆ ಮಾತನಾಡಬೇಡಿ ಎಂದಿದ್ದಾರೆ. 10 ವರ್ಷಗಳ ಹಿಂದೆಯೇ ಈ ಘಟನೆ ಬಗ್ಗೆ ಮಾತನಾಡಿದ್ದೆ. ಸತ್ಯ ಎಂದಿಗೂ ಬದಲಾಗುವುದಿಲ್ಲ.'' ಎಂದು ಒಂದೇ ಮಾತಿನಲ್ಲಿ ಮಾತು ಮುಗಿಸಿದರು.

Nana Patekar reaction about Tanushree Duttas sexual harassment claim

ತನು ಶ್ರೀ ದತ್ತ ಆರೋಪ ಏನು?
''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು.

More from Filmibeat

English summary
Bollywood Actor Nana Patekar reaction about Tanushree Dutta's sexual harassment claim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X