For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

  |

  ಇದ್ದಕ್ಕಿದ್ದಂತೆ ಬಾಲಿವುಡ್ ಗೆ ಗುಡ್ ಬೈ ಹೇಳಿ ವಿದೇಶಕ್ಕೆ ಹೋಗಿ ಸೆಟಲ್ ಆಗಿದ್ದ ತನುಶ್ರೀ ದತ್ತಾ ಇದೀಗ ವಾಪಸ್ ಭಾರತಕ್ಕೆ ಬಂದಿದ್ದಾರೆ. ಎಂಟು ವರ್ಷಗಳಿಂದ ಯಾವುದೇ ಸುದ್ದಿ ಮಾಡದ ತನುಶ್ರೀ ದತ್ತಾ ಇದೀಗ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

  ''ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ದೌರ್ಜನ್ಯ ಎಸಗಿದ್ದಾರೆ'' ಅಂತ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಹೇಳಿದ್ದರು.

  ಸಾಲದಕ್ಕೆ, ''ನಾನಾ ಪಾಟೇಕರ್ ರನ್ನ ಎ-ಲಿಸ್ಟ್ ತಾರೆಯರು ಬ್ಯಾನ್ ಮಾಡಬೇಕು'' ಎಂದು ಒತ್ತಾಯಿಸಿದ್ದರು. ಇದರಿಂದ ನಾನಾ ಪಾಟೇಕರ್ ವರ್ತನೆ ಬಗ್ಗೆ ಬಾಲಿವುಡ್ ನಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ತನುಶ್ರೀ ದತ್ತಾ ಕೊಟ್ಟ ಹೇಳಿಕೆ ನೋಡಿದ್ಮೇಲೆ, ನಾನಾ ಪಾಟೇಕರ್ ಸುಮ್ಮನೆ ಕೂತಿಲ್ಲ. ದಿನಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಲೈಂಗಿಕ ಕಿರುಕುಳ ಅಂದ್ರೇನು.?

  ಲೈಂಗಿಕ ಕಿರುಕುಳ ಅಂದ್ರೇನು.?

  ''ಆಕೆಯ ಪ್ರಕಾರ ಲೈಂಗಿಕ ಕಿರುಕುಳ ಅಂದ್ರೆ ಏನು.? 200 ಜನರಿದ್ದ ಸೆಟ್ ನಲ್ಲಿ ನಾವು ಇದ್ವಿ'' ಎಂದು ನಗುತ್ತಾ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ದಿನಪತ್ರಿಕೆಯೊಂದಕ್ಕೆ ನಾನಾ ಪಾಟೇಕರ್ ಪ್ರತಿಕ್ರಿಯಿಸಿದ್ದಾರೆ.

  ಕಾನೂನು ಕ್ರಮ ಕೈಗೊಳ್ಳುವೆ

  ಕಾನೂನು ಕ್ರಮ ಕೈಗೊಳ್ಳುವೆ

  ''ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೋ, ಅದನ್ನ ಮಾಡುವೆ. ಯಾರು ಏನ್ನನ್ನ ಬೇಕಾದರೂ ಹೇಳಲಿ. ನಾನು ಮಾತ್ರ ನನ್ನ ಕೆಲಸ ಮಾಡುವೆ'' ಎಂದಿದ್ದಾರೆ ನಾನಾ ಪಾಟೇಕರ್.

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ತನುಶ್ರೀ ದತ್ತಾ ಮಾಡಿದ ಆರೋಪ ಏನು.?

  ತನುಶ್ರೀ ದತ್ತಾ ಮಾಡಿದ ಆರೋಪ ಏನು.?

  ''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು.

  ಒಂದ್ಕಾಲದಲ್ಲಿ ಬಳಕುವ ಬಳ್ಳಿಯಂತಿದ್ದ ಈಕೆ ಯಾರು ಅಂತ ಗುರುತಿಸಿ ನೋಡೋಣ..ಒಂದ್ಕಾಲದಲ್ಲಿ ಬಳಕುವ ಬಳ್ಳಿಯಂತಿದ್ದ ಈಕೆ ಯಾರು ಅಂತ ಗುರುತಿಸಿ ನೋಡೋಣ..

  ದೊಡ್ಡ ನಟರು ಇಂಥವರನ್ನ ದೂರ ಇಡಬೇಕು

  ದೊಡ್ಡ ನಟರು ಇಂಥವರನ್ನ ದೂರ ಇಡಬೇಕು

  ''ಅಕ್ಷಯ್ ಕುಮಾರ್ ಜೊತೆಗೆ ನಾನಾ ಪಾಟೇಕರ್ ಕಳೆದ ಎಂಟು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆಗೂ ನಾನಾ ಪಾಟೇಕರ್ ಕೆಲಸ ಮಾಡಿದ್ದಾರೆ. ದೊಡ್ಡ ನಟರು ಇಂಥವರನ್ನ ದೂರ ಇಡುವವರೆಗೂ ಭಾರತದಲ್ಲಿ #MeToo ಅಭಿಯಾನ ಸಾಧ್ಯವಿಲ್ಲ'' ಅಂತ ತನುಶ್ರೀ ದತ್ತಾ ಹೇಳಿದ್ದರು.

  English summary
  Bollywood Actor Nana Patekar reacts on Tanushree Dutta's sexual harassment claim.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X