"ನಾನು ಆ ಹುಡುಗನಿಗೆ ಬೇಕು ಅಂತ ಹೊಡೀಲಿಲ್ಲ: ಆದ್ರು ತಪ್ಪಾಯ್ತು ಕ್ಷಮಿಸಿ": ನಾನಾ ಪಾಟೇಕರ್

ಬಾಲಿವುಡ್ ನಟ ನಾನಾ ಪಾಟೇಕರ್ ಅಭಿಮಾನಿಯೊಬ್ಬನ ಕೆನ್ನೆಗೆ ಬಾರಿಸಿದ್ದ ವಿಡಿಯೋ ವೈರಲ್ ಆಗ್ತಿದೆ. ಸೆಲ್ಫಿ ಕೇಳುವುದಕ್ಕೆ ಹೋದ ಹುಡುಗನ ಮೇಲೆ ಗರಂ ಆಗಿ ಹಿರಿಯ ನಟ ಕೈ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕೊನೆಗೂ ನಾನಾ ಪಾಟೇಕರ್ ಮೌನ ಮುರಿದಿದ್ದಾರೆ. ಅಸಲಿಗೆ ಆ ಸಂದರ್ಭದಲ್ಲಿ ಏನಾಯ್ತು? ಎಂದು ವಿವರಿಸಿದ್ದಾರೆ.

ಪ್ರತಿಭಾನ್ವಿತ ನಟ ನಾನಾ ಪಾಟೇಕರ್‌ಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಆರೋಪದಲ್ಲಿ ಸಿಲುಕಿದ್ದರು. ಆದರೆ ಈಗ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. 'ಜರ್ನಿ' ಸಿನಿಮಾದಲ್ಲಿ ನಾನಾ ಪಾಟೇಕರ್ ನಟಿಸುತ್ತಿದ್ದಾರೆ. ಸದ್ಯ ವಾರಣಾಸಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಬ್ಯುಸಿಯಾಗಿರುವಾಗಲೇ ಅಭಿಮಾನಿಯೊಬ್ಬ ನಾನಾ ಪಾಟೇಕರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ನಾನಾ ಪಾಟೇಕರ್ ಕೋಪಗೊಂಡು ಸೆಲ್ಫಿ ಕೇಳಲು ಬಂದ ಹುಡುಗನ ತಲೆಗೆ ಹೊಡೆದಿದ್ದರು. ಸೆಟ್ ನಲ್ಲಿದ್ದ ಸಿಬ್ಬಂದಿ ಬಾಲಕನ ಕತ್ತು ಹಿಡಿದು ಹೊರಗೆ ತಳ್ಳಿದ್ದರು.

Nana-Patekar-pologizes-for-hitting-fan

ಖ್ಯಾತ ನಟ ಈ ರೀತಿ ಅಭಿಮಾನಿ ಮೇಲೆ ಕೈ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವಿಡಿಯೋ ಮಾಡಿ ನಾನಾ ಪಾಟೇಕರ್ ಕ್ಷಮೆ ಕೇಳಿದ್ದಾರೆ. "ಈವರೆಗೆ ನಾನು ಫೋಟೊ ಕೊಡಲ್ಲ ಎಂದು ಯಾರಿಗೂ ಹೇಳಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ. ನನ್ನನ್ನು ಕ್ಷಮಿಸಿ. ನಾನು ಅಲ್ಲೇ ನೇರವಾಗಿ ಆ ಹುಡುಗನ ಕ್ಷಮೆ ಕೇಳಿದೆ. ಆದರೆ ಆತ ಭಯದಿಂದ ಓಡಿಹೋದ" ಎಂದು ನಾನಾ ಪಾಟೇಕರ್ ಹೇಳಿದ್ದಾರೆ.

"ನಾನು ಒಂದು ಹುಡುಗನಿಗೆ ಹೊಡೆದ ವಿಡಿಯೋ ವೈರಲ್ ಆಗುತ್ತಿದೆ. ಈ ಸೀಕ್ವೆನ್ಸ್ ನಮ್ಮ ಸಿನಿಮಾ ಭಾಗವೇ ಆಗಿದೆ. ನಾವು ರಿಹರ್ಸಲ್ ಮಾಡುತ್ತಿದ್ದೆವು. ಮತ್ತೊಮ್ಮೆ ರಿಹರ್ಸಲ್ ಮಾಡಲು ಮುಂದಾಗಿದ್ದೆವು. ನಿರ್ದೇಶಕರು ಸ್ಟಾರ್ಟ್ ಎನ್ನುತ್ತಿದ್ದಂತೆ ವೀಡಿಯೋದಲ್ಲಿ ಕಾಣಿಸುವ ಹುಡುಗ ಬಂದ. ಆಗ ಕ್ಯಾಮರಾ ಮುಂದೆ ನಟಿಸಲು ನಾವು ಸಿದ್ಧರಾಗಿದ್ದೆವು. ಆತ ಯಾರೋ ನನಗೆ ಗೊತ್ತಿಲ್ಲ. ಆತ ನಮ್ಮ ಸಿಬ್ಬಂದಿಯಲ್ಲೇ ಒಬ್ಬ ಎಂದು ಭಾವಿಸಿ ನಾನು ತಲೆಗೆ ಹೊಡೆದೆ"

"ಸೀನ್ ಪ್ರಕಾರ ಆತನನ್ನು ಹೊರಟು ಹೋಗುವಂತೆಯೂ ಹೇಳಿದೆ. ಬಳಿಕ ಆತ ನಮ್ಮ ಸಿಬ್ಬಂದಿ ಅಲ್ಲ ಎನ್ನುವುದು ಗೊತ್ತಾಯಿತು. ಬಳಿಕ ನಾನು ಕೂಡಲೇ ಆತನನ್ನು ಕರೆದೆ. ಆದರೆ ಆತ ಅಷ್ಟೊತ್ತಿಗೆ ಹೊರಟು ಹೋಗಿದ್ದ. ಬಹುಶಃ ಆತನ ಸ್ನೇಹಿತ ಈ ವಿಡಿಯೋ ಸೆರೆ ಹಿಡಿದಿರಬಹುದು. ನಾನು ಯಾರಿಗೂ ಫೋಟೊ ಕೊಡಲ್ಲ ಎಂದು ಹೇಳಿಲ್ಲ. ನಾನು ಈ ರೀತಿ ಮಾಡುವ ವ್ಯಕ್ತಿಯಲ್ಲ. ಆಕಸ್ಮಿಕವಾಗಿ ಈ ಘಟನೆ ನಡೀತು. ನಾನು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪಾಯಿತು. ನನ್ನನ್ನು ಕ್ಷಮಿಸಿ. ಮತ್ತೆ ಈ ರೀತಿ ಮಾಡಲ್ಲ" ಎಂದಿದ್ದಾರೆ.

ಈ ವಿವಾದದ ಬಗ್ಗೆ 'ಜರ್ನಿ' ಸಿನಿಮಾ ನಿರ್ದೇಶಕ ಅನಿಲ್ ಶರ್ಮಾ ಪ್ರತಿಕ್ರಿಯಿಸಿದ್ದರು. "ಸಿನಿಮಾದಲ್ಲಿ ನಾನಾ ಪಾಟೇಕರ್ ಮಾನಸಿಕ ಸ್ಥಿತಿ ಸರಿಯಿಲ್ಲದ ವ್ಯಕ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುಂಪಿನಲ್ಲಿರುವ ಒಬ್ಬ ವ್ಯಕ್ತಿ ಬರೋದು ಸೆಲ್ಫಿ ಕೇಳುವುದು ಎಲ್ಲವೂ ಸಿನಿಮಾ ಚಿತ್ರೀಕರಣದ ಭಾಗವೇ ಆಗಿತ್ತು" ಎಂದಿದ್ದರು.

More from Filmibeat

English summary
Nana Patekar finally apologizes for hitting fan incident;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X