'ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಔಟ್.!
Recommended Video

ದಿನೇ ದಿನೇ #ಮೀಟೂ ಕಾವು ಬಾಲಿವುಡ್ ನಲ್ಲಿ ಏರುತ್ತಿದ್ದಂತೆಯೇ, ಎ-ಲಿಸ್ಟ್ ಕಲಾವಿದರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದ್ಮೇಲೆ, ಹೃತಿಕ್ ರೋಷನ್ ಗುಡುಗಿದರು.
'ಮೊಘಲ್' ಚಿತ್ರದ ನಿರ್ದೇಶಕನ ಅವಾಂತರದಿಂದಾಗಿ, ಚಿತ್ರಕ್ಕೆ ನಟ ಆಮೀರ್ ಖಾನ್ ಗುಡ್ ಬೈ ಹೇಳಿದರು. ಇನ್ನೂ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿದೆದ್ದಿದ್ದು ನಿಮಗೆಲ್ಲ ಗೊತ್ತೇ ಇದೆ. ಹಾಗೇ, ಸಾಜಿದ್ ಖಾನ್ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಯಾಗಿದೆ.
ಇದನ್ನೆಲ್ಲ ಕೇಳಿದ್ಮೇಲೆ, 'ಹೌಸ್ ಫುಲ್-4' ಚಿತ್ರದ ಚಿತ್ರೀಕರಣವನ್ನು ಅಕ್ಷಯ್ ಕುಮಾರ್ ಕ್ಯಾನ್ಸಲ್ ಮಾಡಿದರು. ಹೀಗಾಗಿ, ಬೇರೆ ದಾರಿ ಇಲ್ಲದೆ ನೈತಿಕ ಹೊಣೆ ಹೊತ್ತು ನಿರ್ದೇಶಕ ಸಾಜಿದ್ ಖಾನ್ 'ಡೈರೆಕ್ಟರ್' ಪೋಸ್ಟ್ ನಿಂದ ಕೆಳಕ್ಕೆ ಇಳಿದರು. ಇದೀಗ ನಾನಾ ಪಾಟೇಕರ್ ಕೂಡ 'ಹೌಸ್ ಫುಲ್-4' ಚಿತ್ರದಿಂದ ಹೊರಕ್ಕೆ ಬಂದಿದ್ದಾರೆ. ಮುಂದೆ ಓದಿರಿ...

ನಾನಾ ಪಾಟೇಕರ್ ವಿರುದ್ಧ ಆರೋಪ
'ಹಾರ್ನ್ ಓಕೆ ಪ್ಲೀಸ್' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಇದರ ಪರಿಣಾಮ, 'ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಹೊರಕ್ಕೆ ಬಂದಿದ್ದಾರೆ.

ನಿರ್ಮಾಪಕರಿಗೆ ತೊಂದರೆ ಆಗಬಾರದು
ಅಕ್ಷಯ್ ಕುಮಾರ್ ಶೂಟಿಂಗ್ ಕ್ಯಾನ್ಸಲ್ ಮಾಡಿರುವುದರಿಂದ ಚಿತ್ರದ ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 'ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಹೊರಗೆ ಬಂದಿದ್ದಾರೆ ಎಂದು ಪುತ್ರ ಮಲ್ಹಾರ್ ತಿಳಿಸಿದ್ದಾರೆ.
ಟ್ವೀಟ್ ಮಾಡಿದ ಅಕ್ಷಯ್ ಕುಮಾರ್
''ನಿನ್ನೆ ರಾತ್ರಿಯಷ್ಟೇ ನಾನು ಭಾರತಕ್ಕೆ ವಾಪಸ್ ಮರಳಿದೆ. ಎಲ್ಲ ಸುದ್ದಿಗಳನ್ನು ಓದಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ತನಿಖೆ ಆಗುವವರೆಗೂ 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡುವಂತೆ ನಾನು ನಿರ್ಮಾಪಕರ ಬಳಿ ಮನವಿ ಮಾಡಿದ್ದೇನೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ತಪ್ಪಿತಸ್ಥರ ಜೊತೆಗೆ ನಾನು ಕೆಲಸ ಮಾಡುವುದಿಲ್ಲ. ನೊಂದವರಿಗೆ ನ್ಯಾಯ ಸಿಗಲೇಬೇಕು'' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.

#ಮೀಟೂ ಅಭಿಯಾನಕ್ಕೆ ಜಯ
ಅಕ್ಷಯ್ ಕುಮಾರ್ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ, ಚಿತ್ರದಿಂದ ನಿರ್ದೇಶಕ ಸಾಜಿದ್ ಖಾನ್ ಹಿಂದಕ್ಕೆ ಸರಿದರು. ಇದೀಗ ನಾನಾ ಪಾಟೇಕರ್ ಕೂಡ ಹೊರಕ್ಕೆ ಬಂದಿದ್ದಾರೆ. #ಮೀಟೂ ಅಭಿಯಾನಕ್ಕೆ ಲಭಿಸಿರುವ ಜಯ ಇದು.


Click it and Unblock the Notifications











