₹60 ಕೋಟಿ 'ದಸರಾ' ಎದುರು ಮುಗ್ಗರಿಸಿದ ₹100 ಕೋಟಿ 'ಭೋಳಾ': ಬಾಕ್ಸಾಫೀಸ್‌ನಲ್ಲಿ ನಡೀತ್ತಿಲ್ಲ 'ಕೈದಿ' ಮ್ಯಾಜಿಕ್

ಅಜಯ್ ದೇವಗನ್ ನಟನೆಯ 'ಭೋಳಾ' ಸಿನಿಮಾ ವಿಶ್ವದಾದ್ಯಂತ ಈ ವಾರ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಇದು ತಮಿಳಿನ 'ಕೈದಿ' ಸಿನಿಮಾ ರೀಮೆಕ್ ಆಗಿದ್ದು ಸ್ವತಃ ಅಜಯ್ ದೇವಗನ್ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣಿ ಮಾಡಿಕೊಂಡು ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಅಜಯ್ ದೇವಗನ್ ಕಟ್ಟಿಕೊಟ್ಟಿದ್ದಾರೆ.

ಭಾರೀ ನಿರೀಕ್ಷೆ ಮೂಡಿಸಿದ್ದ 'ಭೋಳಾ' ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. 2D ಜೊತೆಗೆ 3D, ಐಮ್ಯಾಕ್ಸ್ 3D, 4DX ವರ್ಷನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. 'ಭೋಳಾ' ಜೊತೆಗೆ ತೆಲುಗಿನ 'ದಸರಾ' ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿದೆ. ನಾನಿ ನಟನೆಯ 'ದಸರಾ' ಸಿನಿಮಾ ಕಲೆಕ್ಷನ್‌ಗೆ ಹೋಲಿಸಿದರೆ 'ಭೋಳಾ' ಕಲೆಕ್ಷನ್ ಏನೇನು ಅಲ್ಲ ಎನಿಸುತ್ತಿದೆ.

Nanis Dasara earns 17 Cr on opening day whereas Ajay Devgns Bholaa earns 10 Cr on day 1

ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಅಜಯ್ ದೇವಗನ್ 'ಭೋಳಾ' ಸಿನಿಮಾ ನಿರ್ಮಿಸಿದ್ದಾರೆ. ತಮಿಳಿನಲ್ಲಿ ಕಾರ್ತಿ ಮಾಡಿದ್ದ 'ಕೈದಿ' ಪಾತ್ರವನ್ನು ದೇವಗನ್ ಮಾಡಿದ್ರೆ ಪೊಲೀಸ್ ಆಫೀಸರ್‌ ಪಾತ್ರದಲ್ಲಿ ತಬು ಮಿಂಚಿದ್ದಾರೆ. ಕನ್ನಡಿಗ ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅಂದಾಜು 3500 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾ 15ರಿಂದ 20 ಕೋಟಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೆದಿತ್ತು. ಆದರೆ ಸಿನಿಮಾ 11.20 ಕೋಟಿ ರೂ. ಮಾತ್ರ ಗಳಿಸಿದೆ.

ಐಮ್ಯಾಕ್ಸ್ 3D, 4DX ವರ್ಷನ್‌ಗಳ ಟಿಕೆಟ್ ದರ ಹೆಚ್ಚಿಸಿರುವುದು ಕೂಡ 'ಭೋಳಾ' ಮೊದಲ ದಿನದ ಕಲೆಕ್ಷನ್ ಕಮ್ಮಿ ಆಗಲು ಕಾರಣ ಎನ್ನಲಾಗ್ತಿದೆ. ಮತ್ತೊಂದು ಕಡೆ ಶ್ರೀಕಾಂತ್ ಒದೇಲ ನಿರ್ದೇಶನದ 'ದಸರಾ' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಮೊದಲ ದಿನವೇ ಸಿನಿಮಾ 38 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ನಾನಿ 'ದಸರಾ' ಎದುರು 'ಭೋಳಾ' ಸೈಲೆಂಟ್ ಆಗಿಬಿಟ್ಟಿದೆ.

'ಭೋಳಾ' ಚಿತ್ರಕ್ಕೆ ಕೆಲವೆಡೆ ಒಳ್ಳೆ ಒಪನಿಂಗ್ಸ್ ಸಿಕ್ಕಿದೆ. ಆದರೆ ಮುಂಬೈ, ದೆಹಲಿ ಹಾಗೂ ದಕ್ಷಿಣ ಭಾರತದ ಹಲವೆಡೆ ಸಿನಿಮಾ ಮಂಕಾಗಿದೆ. ಸತತ ಸೋಲುಗಳಿಂದ ಕಂಗೆಟ್ಟ ಬಿಟೌನ್ ಸ್ಟಾರ್‌ಗಳು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೆಲವರು ಸಕ್ಸಸ್ ಆಗುತ್ತಿದ್ದಾರೆ. ಉಳಿದವರು ಸರ್ಕಸ್ ಮಾಡುತ್ತಲೇ ಇದ್ದಾರೆ. ಇನ್ನು ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ 'ಭೋಳಾ'ಗೆ ಅಜಯ್ ತುಸು ಹೆಚ್ಚೇ ಪ್ರಚಾರ ಮಾಡಿದ್ದರು. ಆದರೆ ಅದು ಪ್ರಯೋಜನವಾದಂತೆ ಕಾಣುತ್ತಿಲ್ಲ.

Nanis Dasara earns 17 Cr on opening day whereas Ajay Devgns Bholaa earns 10 Cr on day 1

ಸ್ವತಃ ಅಜಯ್ ದೇವಗನ್ ನಟನೆಯ 'ದೃಶ್ಯಂ- 2' ಸಿನಿಮಾ ಕೂಡ ಮೊದಲ ದಿನ 15 ಕೋಟಿ ರೂ.ಗೂ ಅಧಿಕ ಎಲೆಕ್ಷನ್ ಮಾಡಿತ್ತು. ಅದು ಕೂಡ ರೀಮೆಕ್ ಆಗಿತ್ತು. ಅದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆದ್ರೆ, ಇದು ಮಾಸ್ ಮಸಾಲಾ ಎಂಟರ್‌ಟೈನರ್. ಒಟ್ನಲ್ಲಿ ತಮ್ಮದೇ ಹಿಂದಿನ ಸಿನಿಮಾ ಕಲೆಕ್ಷನ್ ಮೀರಿಸಲು 'ಭೋಳಾ'ಗೆ ಸಾಧ್ಯವಾಗಿಲ್ಲ. ನಾನಿ ನಟನೆಯ 'ದಸರಾ' ಸಿನಿಮಾ ಬಗ್ಗೆ ಒಳ್ಳೆ ಟಾಕ್ ಇದೆ. ಹಳೇ ಕಥೆಯನ್ನೇ ಹೊಸ ರೀತಿಯಲ್ಲಿ ಹೇಳಿ ತಂಡ ಗೆದ್ದಿದೆ. ಕನ್ನಡ ನಟ ದೀಕ್ಷಿತ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ನಾಯಕಿಯಾಗಿ ಕೀರ್ತಿ ಸುರೇಶ್ ಮಿಂಚಿದ್ದಾರೆ.

ಸತತ ಸೋಲುಗಳಿಂದ ಬಾಲಿವುಡ್ ಕಂಗೆಟ್ಟಿದೆ. 'ಪಠಾಣ್' ಬಿಟ್ಟರೆ ಇತ್ತೀಚೆಗೆ ಯಾವುದೇ ಹಿಂದಿ ಸಿನಿಮಾ ದೊಡ್ಡದಾಗಿ ಸದ್ದು ಮಾಡ್ತಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ 'ಭೋಳಾ' ಮೊದಲ ದಿನ ನಿರೀಕ್ಷಿಸಿದಷ್ಟು ಕಲೆಕ್ಷನ್ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಗುರುವಾರ ಆದ್ದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಬಂದಿದ್ದು ಕಮ್ಮಿ ಎನ್ನಲಾಗ್ತಿದೆ. ಆದರೆ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿಬರ್ತಿದೆ. ಹಾಗಾಗಿ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಹೆಚ್ಚಾಗುವ ನಿರೀಕ್ಷೆಯಿದೆ.

More from Filmibeat

English summary
Nani's Dasara earns 17 Cr on opening day whereas Ajay Devgn's Bholaa earns 10 Cr at Box office on day 1. It is the Hindi remake of the 2019 Tamil hit Kaithi, which starred Karthi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X