ಹೃದಯಾಘಾತದಿಂದ ಮೃತಪಟ್ಟ ಬಾಲಿವುಡ್ ನಟ ನರೇಂದ್ರ ಝಾ

By Harshitha

2018... ಬಾಲಿವುಡ್ ಪಾಲಿಗೆ ಕರಾಳ ವರ್ಷ ಅಂತ ಕರೆದರೂ ತಪ್ಪಾಗಲ್ಲ. ಯಾಕಂದ್ರೆ, ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಹಾಗೂ ಶಮ್ಮಿ ಆಂಟಿ ಕೊನೆಯುಸಿರೆಳೆದಿದ್ದು ಇದೇ ವರ್ಷ.

ಎರಡು ಅನರ್ಘ್ಯ ರತ್ನಗಳನ್ನು ಕಳೆದುಕೊಂಡ ಬಾಲಿವುಡ್ ಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ನಟ ನರೇಂದ್ರ ಝಾ ಇಹಲೋಕ ತ್ಯಜಿಸಿದ್ದಾರೆ. 55 ವರ್ಷದ ನರೇಂದ್ರ ಝಾ ಇಂದು ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

Narendra Jha passes away due to Heart Attack

ವಾಡಾದಲ್ಲಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ ನರೇಂದ್ರ ಝಾ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನರೇಂದ್ರ ಝಾ ಅವರಿಗೆ ಅದಾಗಲೇ ಎರಡು ಬಾರಿ ಹೃದಯಾಘಾತವಾಗಿತ್ತು. ಸೂಕ್ತ ಚಿಕಿತ್ಸೆ ಪಡೆದು ಎರಡು ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದ ನರೇಂದ್ರ ಝಾ ಇಂದು ವಿಧಿವಶರಾದರು.

ಹೃತಿಕ್ ರೋಷನ್ ಅಭಿನಯದ 'ಕಾಬಿಲ್', 'ರಯೀಸ್', 'ಮೊಹೆಂಜೋ ದಾರೋ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳನ್ನು ನರೇಂದ್ರ ಝಾ ಪೋಷಿಸಿದ್ದರು.

ನರೇಂದ್ರ ಝಾ ನಿಧನಕ್ಕೆ ಬಾಲಿವುಡ್ ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ.

More from Filmibeat

English summary
Bollywood Actor Narendra Jha (55) passes away due to Heart Attack this morning (March 14th) at 5 am.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X