For Quick Alerts
  ALLOW NOTIFICATIONS  
  For Daily Alerts

  'ಚಿತ್ರರಂಗದ ನ್ಯಾಷನಲ್ ಮ್ಯೂಸಿಯಂ' ಉದ್ಘಾಟಿಸಿದ ಮೋದಿ

  |

  ಮುಂಬೈನಲ್ಲಿ ಸ್ಥಾಪಿತವಾಗಿರುವ ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನ (National Museum of Indian Cinema) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.

  ಪ್ರಧಾನಿ ಮೋದಿಗೆ, ವಾರ್ತಾ ಮತ್ತು ಪ್ರಸರಣ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್, ಭಾರತೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಶಿ, ಸಾಥ್ ನೀಡಿದರು.

  ಈ ವೇಳೆ ಬಾಲಿವುಡ್ ಕಲಾವಿದರಾದ ಜೀತೇಂದ್ರ, ರಣ್ಬೀರ್ ಕಪೂರ್, ಅಮೀರ್ ಖಾನ್, ಆಶಾ ಬೋಂಸ್ಲೆ, ಎ ಆರ್ ರೆಹಮಾನ್, ಬೋನಿ ಕಪೂರ್, ಸುಭಾಷ್ ಗಾಯ್, ಆನಂದ್ ಎಲ್ ರೈ, ರೋಹಿತ್ ಶೆಟ್ಟಿ, ಕರಣ್ ಜೋಹರ್, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  1997ರಲ್ಲಿ ಈ ಮ್ಯೂಸಿಯಂ ನಿರ್ಮಾಣ ಕೆಲಸ ಆರಂಭವಾಗಿದ್ದು, ಅಂತಿಮವಾಗಿ ಸುಮಾರು ಎರಡು ದಶಕಗಳ ನಂತರ ಸಂಪೂರ್ಣವಾಗಿ ಸಿದ್ಧವಾಗಿ ಲೋಕರ್ಪಣೆಯಾಗಿದೆ.

  ಎರಡು ಕಟ್ಟಡಗಳಾಗಿ ನಿರ್ಮಾಣವಾಗಿರುವ ಈ ಮ್ಯೂಸಿಯಂನಲ್ಲಿ ಭಾರತೀಯ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಸಿನಿರಂಗ ಬೆಳದು ಬಂದ ಹಾದಿ, ಅದರ ಹಿಂದಿನ ಕಥೆಗಳು, ಫೋಟೋಗಳು, ಚಿತ್ರೀಕರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನ ಸಂಗ್ರಹಿಸಿ ಇಡಲಾಗಿದೆಯಂತೆ.

  English summary
  PM Narendra Modi with I&B Minister Rajyavardhan Singh Rathore & Central Board of Film Certification chief Prasoon Joshi at the inauguration of National Museum of Indian Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X