'ಕೂಲಿ ನಂಬರ್-1' ಚಿತ್ರತಂಡವನ್ನ ಪ್ರಶಂಸಿದ ಪ್ರಧಾನಿ ಮೋದಿ
ಬಾಲಿವುಡ್ ಸಿನಿಮಾ 'ಕೂಲಿ ನಂಬರ್-1' ಚಿತ್ರತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸೆಟ್ ಹಾಗೂ ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಪ್ಲಾಸ್ಟಿಕ್ ಬಳಸದೇ ಇರೋದಕ್ಕೆ ಸಂತೋಷ ಹಂಚಿಕೊಂಡಿದ್ದಾರೆ.
Recommended Video
ವರುಣ್ ಧವನ್, ಸಾರಾ ಅಲಿಖಾನ್ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣದಲ್ಲಿ ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ತೆಗದುಕೊಂಡಿರುವ ನಿರ್ಧಾರವನ್ನ ವರುಣ್ ಧವನ್ ಟ್ವೀಟ್ ಮಾಡಿದ್ದರು.
''ಪ್ಲಾಸ್ಟಿಕ್ ರಹಿತ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿ ಮಾಡುತ್ತಿರುವ ಕೆಲಸ ನಿಜಕ್ಕೂ ಅದ್ಭುತ. ಅಂತಹ ಒಳ್ಳೆಯ ಕೆಲಸಕ್ಕೆ ನಾವು ಕೂಡ ಅವರ ಜೊತೆಯಾಗಬೇಕು ಎನಿಸಿತು. ಅದಕ್ಕಾಗಿ ಕೂಲಿ ನಂಬರ್ 1 ಚಿತ್ರೀಕರಣದಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲು ಸ್ಟೀಲ್ ಬಾಟಲ್ ಬಳಸಲಾಗುತ್ತಿದೆ'' ಎಂದು ವರುಣ್ ಟ್ವೀಟ್ ಮಾಡಿದ್ದರು.

ವರುಣ್ ಧವನ್ ಮಾಡಿದ್ದ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ''ಕೂಲಿ ನಂಬರ್ 1 ಚಿತ್ರತಂಡ ತೆಗೆದುಕೊಂಡ ನಿರ್ಧಾರ ಸೂಪರ್. ದೇಶವನ್ನ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಕೂಲಿ ನಂಬರ್ 1 ತಂಡದ ಪ್ರಯತ್ನ ಆನಂದ ತಂದಿದೆ'' ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಟ್ವೀಟ್ ಗೆ ಮತ್ತೆ ಪ್ರತಿಕ್ರಿಯೆ ನೀಡಿದ ವರುಣ್ ಧವನ್, ನಮಸ್ತೆ ಹೇಳಿ ಭಾರತದ ಧ್ವಜದ ಎಮೋಜಿ ಹಾಕಿದ್ದಾರೆ. ಅಂದ್ಹಾಗೆ, ಕೂಲಿ ನಂಬರ್ 1 ಸಿನಿಮಾ ತೆಲುಗು ಚಿತ್ರದ ರೀಮೇಕ್ ಎಂದು ಹೇಳಲಾಗಿದೆ. 2020ರ ಮೇ 1 ರಂದು ಈ ಚಿತ್ರ ತೆರೆಗೆ ಬರಲಿದೆ.


Click it and Unblock the Notifications











