ಅಕ್ಷಯ್ ಕುಮಾರ್ 'ಪ್ಯಾಡ್ ಮ್ಯಾನ್' ಚಿತ್ರ ನೋಡ್ತಾರೆ ಮೋದಿ
ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಸಿನಿಮಾ ಮುಂದಿನ ಶುಕ್ರವಾರ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾ ದೊಡ್ಡ ಮಟ್ಟದ ಸುದ್ದಿ ಮಾಡಿದೆ. ಅಕ್ಷಯ್ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ.
ಈ ನಡುವೆ 'ಪ್ಯಾಡ್ ಮ್ಯಾನ್' ಸಿನಿಮಾವನ್ನು ಪ್ರಧಾನಿ ಮೋದಿ ಅವರು ನೋಡಲಿದ್ದಾರೆ. ಉತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುವ ಈ ಸಿನಿಮಾವನ್ನು ಮೋದಿ ಅವರಿಗೆ ತೋರಿಸಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಮಹಿಳೆಯರ ಕುರಿತಾದ ಗಂಭೀರ ವಿಷಯ ಸಿನಿಮಾದಲ್ಲಿ ಇದೆ.
ಬಾಲಿವುಡ್ ಖ್ಯಾತ ನಿರ್ದೇಶಕ ಆರ್.ಬಾಲ್ಕಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಚೀನಿಕಮ್', 'ಪಾ', 'ಶಾಮಿತಾಭ್' ಸಿನಿಮಾವನ್ನು ಇವರು ಮಾಡಿದ್ದರು. ಸದ್ಯ ಉತ್ತಮ ಕಥಾವಸ್ತು ಹೊಂದಿರುವ ಸಿನಿಮಾಗಳನ್ನೇ ಮಾಡುತ್ತಿರುವ ಅಕ್ಷಯ್ ಕುಮಾರ್ ಮತ್ತೊಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್, ಸೋನಮ್ ಕಪೂರ್, ರಾಧಿಕಾ ಆಪ್ಟೆ, ಸುಧೀರ್ ಪಾಂಡೆ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಫೆಬ್ರವರಿ 9ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











