ಮಾಜಿ ಪ್ರಿಯಕರನನ್ನು ಕೊಂದ ಆರೋಪ, ಅಮೆರಿಕಾದ ಜೈಲು ಪಾಲಾದ ಬಾಲಿವುಡ್ ನಟಿ ನರ್ಗಿಸ್ ಫಖ್ರಿ ಸಹೋದರಿ..!
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಆದರೆ ಈಗೀಗ ಪ್ರೀತಿ ಎಂಬ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೆಲವರನ್ನು ನೋಡಿದಾಗ ಪ್ರೀತಿ ಮರೆಯಾಗಿದೆ ಎಂಬ ಭಾವನೆ ಬರುತ್ತೆ. ಪ್ರೀತಿಯನ್ನು ಅರ್ಥೈಸಿಕೊಳ್ಳದೇ ಅನೇಕರು ತಮ್ಮ ಬದುಕನ್ನೇ ಸರ್ವ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಾಲಿವುಡ್‌ನ ನಾಯಕಿ ನರ್ಗಿಸ್ ಫಖ್ರಿಯ ಸಹೋದರಿ ಆಲಿಯಾ ಸದ್ಯದ ಉದಾಹರಣೆ.
ಹೌದು, ನರ್ಗಿಸ್ ಫಖ್ರಿ, ಬಾಲಿವುಡ್‌ನ ಸ್ಟಾರ್. ರಾಕ್ ಸ್ಟಾರ್, ಮೇ ತೇರಾ ಹೀರೊ, ಅಜರ್, ಹೌಸ್‌ಫುಲ್ 3, ಹೀಗೆ ಹಲವು ಚಿತ್ರಗಳ ಮೂಲಕ ಹೆಸರು ಮತ್ತು ಕೀರ್ತಿಯನ್ನು ಗಳಿಸಿದವರು. ಇಂತಹ
ನರ್ಗಿಸ್ ಫಖ್ರಿ ಸಹೋದರಿ ಆಲಿಯಾ ಈಗ ಕಿಲ್ಲರ್ ಎನ್ನುವ ಕಳಂಕ ಹೊತ್ತಿದ್ದಾರೆ. ಮಾಜಿ ಪ್ರಿಯಕರನನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆ ಸದ್ಯ ಅಮೆರಿಕಾದಲ್ಲಿ ಜೈಲು ಪಾಲಾಗಿದ್ದಾರೆ.

ಹೌದು, ಅಸಲಿಗೆ 43ರ ಹರೆಯದ ಆಲಿಯಾ, 35ರ ಹರೆಯದ ಎಡ್ವರ್ಡ್ ಜೇಕಬ್ಸ್‌ನ ಪ್ರೀತಿಸುತ್ತಿದ್ದರು. ಆದರೆ.. ಈ ಪ್ರೀತಿಯಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು. ಅದಕ್ಕೆ ಕಾರಣ ಖುದ್ದು ಆಲಿಯಾಗೆ ಗೊತ್ತಾದರೂ ಆಲಿಯಾಗೆ ತಮ್ಮ ಪ್ರಿಯಕರ ಎಡ್ವರ್ಡ್ ಜೇಕಬ್ಸ್‌ಗೆ ಅನಸ್ತಾಸಿಯಾ ಎಂಬ 33 ವರ್ಷದ ಚೆಲುವೆಯ ಮೇಲೆ ಲವ್ವಾಗಿದೆ ಎನ್ನುವ ಅನುಮಾನ ಇತ್ತು. ಎಡ್ವರ್ಡ್ ಮತ್ತು ಅನಸ್ತಾಸಿಯಾ ನಡುವಿನ ಸಲುಗೆ-ಆತ್ಮೀಯತೆ ಅಸೂಯೆಗೆ ಕಾರಣವಾಗಿತ್ತು.
ಹೀಗಾಗಿ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿದ್ದ ಆಲಿಯಾ ಸೀದಾ ಎಡ್ವರ್ಡ್ ಜೇಕಬ್ಸ್ ವಾಸ ಇದ್ದ ಮನೆಗೆ ಬೆಳ್ಳಿಗ್ಗೆ 06-20ರ ಸುಮಾರು ತೆರಳಿದ್ದಾರೆ. ನೀವೆಲ್ಲ ಇಂದು ಸಾಯುವುದು ಖಚಿತ ಎಂದು ರಂಪ ಮಾಡಿದ್ದಾರೆ. ಮನೆಗೆ ಬೆಂಕಿ ಹಚ್ಚಿದ್ದಾರೆ. ಗಾಡ ನಿದ್ರೆಯಲ್ಲಿದ್ದ ಎಡ್ವರ್ಡ್ ಮತ್ತು ಸ್ನೇಹಿತೆ ಅನಸ್ತಾನಿಯಾ ಹೊಗೆ, ಗ್ಯಾಸೋಲಿನ್ ಮತ್ತು ಸುಟ್ಟ ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ.
ಇನ್ನು ತಮ್ಮ ಮಗನನ್ನು ಕಳೆದುಕೊಂಡ ದುಖದಲ್ಲಿ ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯೆಯನ್ನು ನೀಡಿರುವ ಎಡ್ವರ್ಡ್ ಅವರ ತಾಯಿ ಜಾನೆಟ್ ನನ್ನ ಮಗಳ ಆಲಿಯಾಳಿಂದ ಒಂದು ವರ್ಷದ ಹಿಂದೆ ದೂರವಾಗಿದ್ದ, ಹಲವು ಬಾರಿ ತನ್ನಿಂದ ದೂರ ಇರುವಂತೆ ಆಲಿಯಾಗೆ ಮನವಿಯನ್ನು ಮಾಡಿಕೊಂಡಿದ್ದ ಆದರೆ ಆಲಿಯಾ ಮಾತ್ರ ಎಡ್ವರ್ಡ್ ಮಾತನ್ನು ಯಾವತ್ತು ಕೇಳಲಿಲ್ಲ ಎಂದಿದ್ದಾರೆ. ಆಲಿಯಾಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ನರ್ಗಿಸ್ ಮತ್ತು ಆಲಿಯಾ ಅವರ ತಾಯಿ ತಮ್ಮ ಮಗಳ ಮೇಲಿರುವ ಆರೋಪ ತಳ್ಳಿ ಹಾಕಿದ್ದಾರೆ. ಆಲಿಯಾ ಯಾರನ್ನು ಕೊಲ್ಲಲಾರಳು ಬದಲಿಗೆ ಆಕೆ ಎಲ್ಲರನ್ನು ಪ್ರೀತಿಸುತ್ತಾಳೆ ಸಾಧ್ಯ ಆದರೆ ತನ್ನ ಕೈಯಿಂದ ಸಹಾಯವನ್ನು ಮಾಡುತ್ತಾಳೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್‌ಗೆ ಹೇಳಿದ್ದಾರೆ.
ಇನ್ನುಳಿದಂತೆ ಆಲಿಯಾ ಅವರನ್ನು ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಜಿಲ್ಲಾ ಅಟಾರ್ನಿ ಮೆಲಿಂಡಾ ಕಾಟ್ಜ್ ಜಾಮೀನು ನೀಡಲು ನಿರಾಕರಿಸಿದ್ದಾರೆ. ಡಿಸೆಂಬರ್ 09ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಸದ್ಯ ಆಲಿಯಾ ಅವರನ್ನು ರೈಕರ್ಸ್ ದ್ವೀಪದಲ್ಲಿರುವ ನ್ಯೂಯಾರ್ಕ್‌ನ ಅತೀ ದೊಡ್ಡ ಜೈಲಿಗೆ ಕಳುಹಿಸಲಾಗಿದ್ದು ಆರೋಪ ಸಾಬೀತಾದರೆ ಆಲಿಯಾಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ.


Click it and Unblock the Notifications











