ಸ್ಟಾರ್ ನಟರ ವಿರುದ್ಧ ಅಸಮಾಧಾನ ಹೊರಹಾಕಿದ ನಾಸಿರುದ್ದೀನ್ ಶಾ
ಬಾಲಿವುಡ್ ಚಿತ್ರರಂಗದ ಹಿರಿಯ ನಟ ನಾಸಿರುದ್ದೀನ್ ಶಾ ಸ್ಟಾರ್ ನಟರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. CAA (ಪೌರತ್ವ ತಿದ್ದುಪಡಿ ಕಾಯ್ದೆ) ಬಗ್ಗೆ ಮಾತನಾಡದ ನಟರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
The Wire ಸಂದರ್ಶನದಲ್ಲಿ CAA ಬಗ್ಗೆ ನಾಸಿರುದ್ದೀನ್ ಶಾ ಮಾತನಾಡಿದ್ದಾರೆ. ಈ ವೇಳೆ CAA ಬಗ್ಗೆ ಹೇಳಿಕೆ ನೀಡಿರುವ ಕಲಾವಿದರನ್ನು ಹೊಗಳಿದ್ದಾರೆ. ಅಮೀರ್ ಖಾನ್, ಶಾರೂಖ್ ಖಾನ್ ಸಲ್ಮಾನ್ ಖಾನ್ ಈ ಬಗ್ಗೆ ಹೇಳಿಕೆ ನೀಡಿಲ್ಲ ಎನ್ನುವುದು ಅನೇಕರ ಮಾತಾಗಿತ್ತು. ಈಗ ನಾಸಿರುದ್ದೀನ್ ಶಾ ಸಹ ಆ ಸಾಲಿಗೆ ಸೇರಿಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?
''ಬಾಲಿವುಡ್ ನ ಯುವ ನಟರು CAA ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆದರೆ, ದೊಡ್ಡ ನಟರೆ ಮೌನವಾಗಿದ್ದಾರೆ. ಅವರು ಬಾಲಿವುಡ್ ಕಿಂಗ್ ಗಳು ಎಂದೇ ಗುರುತಿಸಿಕೊಂಡಿದ್ದಾರೆ. ಸ್ಟಾರ್ ಗಳು ತಮ್ಮ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು.. ತಮ್ಮ ಸುತ್ತ ಮುತ್ತ ಇದ್ದವರ ಬಗ್ಗೆ ಅಲ್ಲ'' ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.

ಇನ್ನು JNUಗೆ ಹೋಗಿ CAA ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೋಣೆ ಬಗ್ಗೆ ನಾಸಿರುದ್ದೀನ್ ಶಾ ಮೆಚ್ಚಿಗೆ ಸೂಚಿಸಿದ್ದಾರೆ. ದೀಪಿಕಾ ಧೈರ್ಯವನ್ನು ನಾಸಿರುದ್ದೀನ್ ಶಾ ಹೊಗಳಿದ್ದಾರೆ.
ಕೇಂದ್ರ ಸರ್ಕಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ
ಸ್ಟಾರ್ ನಟರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ?. ಅದರಿಂದ ಏನು ಕಳೆದುಕೊಳ್ಳುತ್ತಾರೆ?. ಎಂದು ನಾಸಿರುದ್ದೀನ್ ಶಾ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications










