ಪತ್ನಿಗೆ ಮೋಸ ಮಾಡಿದ್ದೇ ಹಾರ್ದಿಕ್ ಪಾಂಡ್ಯ, ನತಾಶ ನಡೆಯಿಂದ ಬಯಲಾಯಿತು ರಹಸ್ಯ, ...?

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.

ಇನ್ನೂ ಪ್ರೀತಿ ಅನ್ನುವ ಪದದ ಅರ್ಥ ಬದಲಾಗದೇ ಇದ್ದರೂ, ಈ ಎರಡು ಕ್ಷೇತ್ರದಲ್ಲಿ ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ತುಂಬಾನೇ ಬದಲಾಗಿದೆ. ಸಂಬಂಧಕ್ಕಿಂತ ದುಡ್ಡೇ ದೊಡ್ಡಪ್ಪ ಎಂಬ ಮನಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅತ್ಯುತ್ತಮ ಸಾಕ್ಷಿ.

natasa-stankovic-s-likes-on-cheating-posts-fueled-speculation-about-her-split-with-hardik-pandya

ಹೌದು, ಮದುವೆ ಮುನ್ನವೇ ಗರ್ಭಿಣಿಯಾದ ನತಾಶ, ಹಾರ್ದಿಕ್ ಪಾಂಡ್ಯ ಜೊತೆ ಎರಡೆರಡು ಬಾರಿ ಮದುವೆಯಾಗಿದ್ದರು. ನೂರಾರು ಕನಸು ಕಟ್ಟಿಕೊಂಡಿದ್ದರು. ಆದರೆ, ಮುದ್ದು ಮಾಡಿದ್ದ ಈ ಮನಸುಗಳ ಕನಸುಗಳೆಲ್ಲವೂ ಕಮರಿ ಹೋದವು.

ಹೀಗಾಗಿ ಹಾರ್ದಿಕ್ ಪಾಂಡ್ಯ ಅವರಿಂದ ದೂರವಾದ ಸೆರ್ಬಿಯಾದ ಸುಂದರಿ ನತಾಶ ಸದ್ಯಕ್ಕೆ ಸೆರ್ಬಿಯಾಗೆ ಮರಳಿದ್ದಾರೆ. ಮಗನ ಜೊತೆ ಬದುಕಿನಲ್ಲಿ ನೆಮ್ಮದಿ ಹುಡುಕುತ್ತಿದ್ಧಾರೆ. ಆದರೆ.. ಇದರ ನಡುವೆ ನತಾಶ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್‌ವೊಂದನ್ನು ಮೆಚ್ಚಿಕೊಂಡಿದ್ಧಾರೆ. ನತಾಶ ಅವರ ಈ ನಡೆ ಅನುಮಾನಕ್ಕೆ ಕಾರಣವಾಗಿದೆ. ನತಾಶ ಮತ್ತು ಹಾರ್ದಿಕ್ ಪಾಂಡ್ಯ ದಾಂಪತ್ಯ ಮುರಿದು ಬೀಳಲು 'ಅಕ್ರಮ ಸಂಬಂಧ'ವೇ ಕಾರಣವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

natasa-stankovic-s-likes-on-cheating-posts-fueled-speculation-about-her-split-with-hardik-pandya

ಹೌದು, ಅಸಲಿಗೆ ..ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದರು. ಹಂಚಿಕೊಂಡ ಈ ವಿಡಿಯೋದಲ್ಲಿ ಮೋಸ.. ಭಾವನಾತ್ಮಕ ನಿಂದನೆಯ ಕುರಿತು ಮಾತುಗಳನ್ನಾಡಲಾಗಿತ್ತು.

ಗೊತ್ತಿದ್ದೋ ಗೊತ್ತಿಲ್ಲದೆಯೋ ಗೊತ್ತಿಲ್ಲ. ಆದರೆ, ನತಾಶ ಈ ರೀಲ್ಸ್ ನ ಮೆಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿರುವ ಅನೇಕರು, ಸದ್ಯ ಹಾರ್ದಿಕ್ ಪಾಂಡ್ಯ ನತಾಶ ಅವರಿಗೆ ಮೋಸ ಮಾಡಿದ್ಧಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಗೆ ಇರವ ಪರಸ್ತ್ರೀ ವ್ಯಾಮೋಹದಿಂದ ನತಾಶ ವಿಚ್ಛೇದನ ನೀಡಿದ್ದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ.

natasa-stankovic-s-likes-on-cheating-posts-fueled-speculation-about-her-split-with-hardik-pandya

ಇನ್ನೂ 2019ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ, ಹಾರ್ದಿಕ್ ಪಾಂಡ್ಯ ಸ್ತ್ರೀದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆಗಳನ್ನು ನೀಡಿದ್ದರು. '' ನಾನು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಮನೆಗೆ ಬಂದು ನನ್ನ ಹೆತ್ತವರಿಗೆ ಹೇಳಿದ್ದೇ'' ಎಂದು ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆ ಕಾಲಕ್ಕೆ ಹಾರ್ದಿಕ್ ಪಾಂಡ್ಯ ಅವರ ಈ ಮಾತು ಅನೇಕರನ್ನು ಕೆರಳಿಸಿತ್ತು. ವಿವಾದವೂ ಆಗಿತ್ತು.

ಈಗ ಹೆಚ್ಚು ಕಡಿಮೆ ಐದು ವರ್ಷದ ನಂತರ ಹಾರ್ದಿಕ್ ಪಾಂಡ್ಯ ಅವತ್ತು ಆಡಿದ್ದ ಈ ಮಾತುಗಳನ್ನು ಅನೇಕರು ನೆನಪಿಸಿಕೊಳ್ಳುತ್ತಿದ್ಧಾರೆ. ನಾಯಿ ಬಾಲ ಯಾವತ್ತಿದ್ದರೂ ಡೊಂಕು ಇದನ್ನು ತಡವಾಗಿ ಅರಿತೇ ಹಾರ್ದಿಕ್ ಪಾಂಡ್ಯ ಅವರಿಂದ ನತಾಶ ದೂರವಾದರು ಎನ್ನುತ್ತಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಆ ಮಾತು ಹೇಳಿದಾಗ್ಲೇ ನತಾಶಗೆ ಗೊತ್ತಾಗಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ಧಾರೆ.ಸಹಜವಾಗಿ ಈ ಎಲ್ಲ ಬೆಳವಣಿಗೆಯಿಂದ ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಗಳು ಚಿಂತೆಯಲ್ಲಿ ಮುಳುಗಿದ್ದಾರೆ. ಅವರ ವಾದವನ್ನು ಮಂಡಿಸುತ್ತಿದ್ದಾರೆ.

Natasa Stankovic Liked Reels About Cheating & Emotional Abuse: Apparently Hardik Cheated On Her, Leading To Divorce☕️
byu/Unique_Ad4358 inInstaCelebsGossip

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X