ಮನೆಯ ಆರನೇ ಮಹಡಿಯಿಂದ ಬಿದ್ದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಧನ ; ಆತ್ಮ*ಹತ್ಯೆಯ ಶಂಕೆ

ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ.

ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಬೆಂಗಾಳಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅನಿಕ್ ದತ್ತಾ (66) ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

Acclaimed Aparajito Filmmaker Anik Dutta Passes Away After Tragic Fall From Kolkata Residence

ಹೌದು, ಅನಿಕ್ ದತ್ತಾ.. ಬೆಂಗಾಳದ ಖ್ಯಾತ ನಿರ್ದೇಶಕ. 2012ರಲ್ಲಿ ''ಭೂತೇರ್ ಭವಿಷ್ಯತ್'' ಎಂಬ ಹಾಸ್ಯ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದ ಅನಿಕ್ ದತ್ತಾ ಮೊದಲ ಪ್ರಯತ್ನದಲ್ಲಿಯೇ ಬೆಂಗಾಳದೆಲ್ಲೆಡೆ ಮನೆ ಮಾತಾದರು.

ನಂತರ ''ಆಸ್ಟೋನಿಷಿಂಗ್ ಲ್ಯಾಂಪ್'' , ''ಮೇಘನಾದ್ ಬಧ್ ರಹಸ್ಯ'' , ''ಭವಿಷ್ಯೋತೇರ್ ಭೂತ್'',''ಬರುಣ್‌ಬಾಬುರ್ ಬಂಧು'', ''ಅಪರಾಜಿತೋ'', ''ಜೋಟೋ ಕಾಂಡೋ ಕೊಲ್ಕತ್ತೇಯ್'' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದರು.

2022ರಲ್ಲಿ ''ಅಪರಾಜಿತೋ'' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದರು. ಇಂಥಾ ಅನಿಕ್ ದತ್ತಾ ತಮ್ಮ ಪತ್ನಿಯ ಮನೆಯ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

''ಆನಂದ್ ಬಜಾರ್'' ಪತ್ರಿಕೆಯ ಪ್ರಕಾರ, ಅನಿಕ್ ದತ್ತಾ ಗರಿಯಾಹಟ್‌ನಲ್ಲಿರುವ ತಮ್ಮ ನಿವಾಸದ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ತೀವ್ರ ಗಾಯಗೊಂಡ ಅವರನ್ನು ತಕ್ಷಣ ಧಾಕುರಿಯಾದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅನಿಕ್ ದತ್ತಾ ಅವರ ಸಾವು, ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದ್ದು, ಮನೆಯ ಟೆರೇಸ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅನಿಕ್ ದತ್ತಾ ಕೆಲವು ಸಮಯದಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

''ಎಬಿಪಿ ಆನಂದಾ'' ಪ್ರಕಾರ, ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. "ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ, ನಾನೇ ಜವಾಬ್ದಾರ" ಎಂದು ಅನಿಕ್ ದತ್ತಾ ಬರೆದಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಮೇ 28 ರಂದು ನಡೆಯಲಿದೆ.

ಇನ್ನು ಅನಿಕ್ ದತ್ತಾ ದೀರ್ಘಕಾಲದಿಂದ ಶ್ವಾಸಕೋಶ ಮತ್ತು ನರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದರ ಜೊತೆ ಮಾನಸಿಕ ಖಿನ್ನತೆ ಕೂಡ ಆವರಿಸಿಕೊಂಡಿತ್ತು ಎಂದು ವರದಿಯಾಗಿದ್ದು, ಮನೆಯೊಳಗೆ ಈ ಹಿಂದೆ ಅನಿಕ್ ದತ್ತಾ ಆಕಸ್ಮಿಕವಾಗಿ ಹಲವು ಬಾರಿ ಬಿದ್ದಿದ್ದಾರೆ ಎಂದು ಕೂಡ ವರದಿಯಾಗಿದೆ. ಪೊಲೀಸರಿಗೆ ಅನಿಕ್ ದತ್ತಾ ಅವರ ಜೇಬಿನಲ್ಲಿ ಖಿನ್ನತೆಯಿಂದ ಹೊರ ಬರಲು ಅವರು ಸೇವಿಸುತ್ತಿದ್ದ ಔಷಧಿಗಳ ಚೀಟಿ ಕೂಡ ಸಿಕ್ಕಿದೆ.

ಅನಿಕ್ ದತ್ತಾ ಓರ್ವ ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಪತ್ನಿ ಸಂದಿ ದತ್ತಾ ಜೊತೆ 28 ವರ್ಷಗಳ ಕಾಲ ದಾಂಪತ್ಯ ನಡೆಸಿದ್ದ ಅನಿಕ್ ದತ್ತಾ 2022ರ ಫೆಬ್ರವರಿಯಲ್ಲಿ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದರು. ಆದರೆ, 2025ರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. 27 ವರ್ಷಗಳ ದಾಂಪತ್ಯಕ್ಕೆ ಇಬ್ಬರು ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನುವ ಮಾತು ಕೋಲ್ಕತ್ತಾದಲ್ಲಿ ಬಲವಾಗಿ ಕೇಳಿ ಬಂದಿತ್ತು.

ಸಂದಿ ದತ್ತಾ ತಮ್ಮ ಪತಿಯ ಅಗಲಿಕೆಯ ಸುದ್ದಿಯನ್ನು ಖಚಿತ ಪಡಿಸಿದ್ದು, ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕೋಲ್ಕತ್ತಾ ಕ್ರೈಂ ಪೊಲೀಸರು ಮತ್ತು ಗರಿಯಾಹಾಟ್ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ಮುಂದುವರಿಸಿದ್ದಾರೆ. ನಾನು ಈಗ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ನಾವು ಅನಿಕ್ ಅವರ ಮಗಳಿಗಾಗಿ ಕಾಯುತ್ತಿದ್ದೇವೆ. ಸರ್ಕಾರದ ನಿಯಮಗಳ ಪ್ರಕಾರ, ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ನಿರ್ಮಾಪಕ ಫಿರ್ಡೌಸುಲ್ ಹಸನ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ತಮ್ಮ 66ನೇ ಹುಟ್ಟುಹಬ್ಬವನ್ನು ಐದು ದಿನಗಳ ಹಿಂದೆಯಷ್ಟೇ ಅನಿಕ್ ದತ್ತಾ ಆಚರಿಸಿಕೊಂಡಿದ್ದರು. ಸದ್ಯ ಅನಿಕ್ ದತ್ತಾ ನಿಧನದ ಸುದ್ದಿ ಬೆಂಗಾಳಿ ಚಿತ್ರರಂಗಕ್ಕೆ ಬರಸಿಡಲಿನಂತೆ ಬಡಿದಿದ್ದು, ಚಿತ್ರರಂಗದ ಹಲವರು ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ.

English summary
"National Award-winning filmmaker Anik Dutta has closed his eyes forever following a tragic accident at his Kolkata residence. Read about the loss of a visioner."
Read more about: death suicide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X