ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ದೋಖಾ: ಯಾಮಾರಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಅಂಜಲಿ

ಎಲ್ಲಿಯವರೆಗೂ ಮೋಸ ಹೋಗುವವರು ಇರ್ತಾರೋ ಅಲ್ಲಿವರೆಗೂ ಮೋಸ ಮಾಡುವವರು ಮಾಡುತ್ತಲೇ ಇರುತ್ತಾರೆ ಎನ್ನುವ ಮಾತಿದೆ. ಆದರೆ ಇತ್ತೀಚೆಗೆ ಅಮಾಯಕರು ಹೆಚ್ಚು ಹೆಚ್ಚು ಮೋಸದ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಸೈಬಲ್ ವಂಚನೆ ಹೆಚ್ಚಾಗಿದೆ. ಯಾಮಾರಿಸಿ ಹಣ ಲಪಟಾಯಿಸಿಬಿಡುತ್ತಾರೆ.

ಪ್ರತಿದಿನ ಸಾಕಷ್ಟು ಜನ ಸೈಬರ್ ವಂಚನೆಗೆ ಗುರಿಯಾಗುತ್ತಿದ್ದಾರೆ. ಇದರಲ್ಲಿ ವಿದ್ಯಾವಂತರು ಇದ್ದಾರೆ. ಸಿನಿಮಾ ಸೆಲೆಬ್ರೆಟಿಗಳು ಕೂಡ ಸೈಬರ್ ವಂಚಕರಿಂದ ತೊಂದರೆ ಸಿಲುಕುತ್ತಿದ್ದಾರೆ. ಇದೀಗ ಜನಪ್ರಿಯ ನಟಿ ಅಂಜಲಿ ಪಾಟೀಲ್ ಸೈಬರ್ ವಂಚಕರಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. ತಡವಾಗಿ ಎಚ್ಚೆತ್ತುಕೊಂಡ ಅಂಜಲಿ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.

National Award winner Anjali Patil loses nearly Rs. 6 lakh to online fraud

ಅಂಜಲಿ ಪಾಟೀಲ್ ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ 'ನಾ ಬಂಗಾರು ತಲ್ಲಿ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ(ಜ್ಯೂರಿ ಸ್ಪೆಷಲ್ ಮೆನ್ಷನ್) ಕೂಡ ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ ಅಂಜಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ಆಕೆಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಕರೆ ಬಂದಿತ್ತು, ಆತ ತನ್ನನ್ನು ತಾನು ಫೆಡೆಕ್ಸ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದನು. ತೈವಾನ್‌ನಲ್ಲಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಅದರಲ್ಲಿ ನಿಮ್ಮ ಆಧಾರ್ ವಿವರಗಳಿವೆ ಎಂದು ಅಂಜಲಿಗೆ ಹೇಳಿದ್ದಾನೆ. ಈ ಬಗ್ಗೆ ಮುಂಬೈ ಪೊಲೀಸರನ್ನು ಸಂಪರ್ಕಿಸುವುದಾಗಿ ಆತನಿಗೆ ಹೇಳಿದ್ದಾರೆ.

ಬಳಿಕ ಸೈಬರ್ ಕ್ರೈಂನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಬೆನರ್ಜಿ ಎಂಬ ಹೆಸರಿನಲ್ಲಿ ಮತ್ತೊಬ್ಬ ನಟಿಗೆ ಕರೆ ಮಾಡಿದ್ದಾನೆ. ನಿಮ್ಮ ಆಧಾರ್ ಕಾರ್ಡ್ 3 ಬ್ಯಾಂಕ್‌ನೊಂದಿಗೆ ಕನೆಕ್ಷ್ ಆಗಿದೆ, ಅದು ಮನಿಲ್ಯಾಂಡರಿಂಗ ಕೇಸ್‌ನಲ್ಲಿ ಸಿಲುಕಿದೆ ಎಂದು ಬೆದರಿಸಿದ್ದಾನೆ. ಫ್ರೋಸೆಸಿಂಗ್ ಪೀಸ್ ಎಂದು ಹೇಳಿ 96,525 ರೂ. ಕಳುಹಿಸುವಂತೆ ನಟಿಗೆ ಹೇಳಿದ್ದಾನೆ. ಆಕೆ ಕೂಡಲೇ ಹಣ ವರ್ಗಾವಣೆ ಮಾಡಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಕೂಡ ನಿಮ್ಮೊಟ್ಟಿಗೆ ಶಾಮೀಲಾಗಿದ್ದಾರೆ. ಕೂಡಲೇ 4,83,291 ರೂಪಾಯಿ ಹಣ ಕಳುಹಿಸಿದರೆ ಕೇಸ್ ಕ್ಲೋಸ್ ಮಾಡುತ್ತೇವೆ ಎಂದು ವಂಚಕ ಅಂಜಲಿ ಪಾಟೀಲ್‌ಗೆ ಬೆದರಿಸಿದ್ದು ಪೊಲೀಸ್‌ ಕೇಸ್‌ನಿಂದ ಬಚಾವ್ ಆದರೆ ಸಾಕು ಎಂದು ಆಕೆ ಹಣ ಕಳುಹಿಸಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಟಿ ಅಂಜಲಿ ಪಾಟೀಲ್ ಒಟ್ಟು 5 ಲಕ್ಷದ 79 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಐಸಿಪಿ 419, 420 ಸೆಕ್ಷನ್‌ ಅಡಿಯಲ್ಲಿ ದೂರ ದಾಖಲಾಗಿದೆ. 'ದೆಹಲಿ ಇನ್ ಅ ಡೇ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅಂಜಲಿ ಪಾಟೀಲ್ ಮುಂದೆ ತೆಲುಗು, ಮಲಯಾಳಂ, ಸಿಂಹಳಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದರು. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮರಾಠಿ ಕುಟುಂಬದಲ್ಲಿ ಜನಿಸಿದ ನಟಿ ಮುಂದೆ ಬಾಲಿವುಡ್ ಪ್ರವೇಶಿಸಿದರು.

'ಸ್ತ್ರೀ', 'ಕಿಲ್ ದಿ ರೇಪಿಸ್ಟ್', 'ಫೈಡಿಂಗ್ ಫ್ಯಾನಿ', 'ದಿ ಸೈಲೆನ್ಸ್', 'ಸಮೀರ್', 'ನ್ಯೂಟನ್', 'ಕಾಲಾ', 'ಮೇರೆ ಪ್ಯಾರ್ ಪ್ರೈಂ ಮಿನಿಸ್ಟರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಂಜಲಿ ಪಾಟೀಲ್ ನಟಿಸಿದ್ದಾರೆ.

More from Filmibeat

English summary
National Award winner Anjali Patil becomes victim to cyber fraud;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X