For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಟಿ ಸುರೇಖಾ ಸಿಕ್ರಿ ನಿಧನ

  |

  ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 75 ವರ್ಷದ ನಟಿ ಸುರೇಖಾ ಇಂದು (ಜುಲೈ 16) ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ವರದಿಗಳ ಪ್ರಕಾರ ಸುರೇಖಾ 2018ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. 2020ರಲ್ಲಿ ಸುರೇಖಾಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ತೀವ್ರ ಅಸ್ವಸ್ಥರಾಗಿದ್ದರು ಎನ್ನಲಾಗುತ್ತಿದೆ.

  3 ಬಾರಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಟಿ ಸುರೇಖಾ ಸಿಕ್ರಿ ಅನಾರೋಗ್ಯದ ಬಗ್ಗೆ ಕುಟುಂಬದವರು ಬಹಿರಂಗ ಪಡಿಸಿರಲಿಲ್ಲ. ಇದೀಗ ನಿಧನದ ಬಳಿಕ ಮಾಹಿತಿ ಹಂಚಿಕೊಂಡಿರುವ ಸುರೇಖಾ ಮ್ಯಾನೇಜರ್, "ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನಹೋದಿದರು. ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದರು" ಎಂದು ಹೇಳಿದ್ದಾರೆ.

  ನಟಿ ಸುರೇಖಾ ಸಿಕ್ರಿ 1978ರಲ್ಲಿ 'ಕಿಸ್ಸಾ ಕುರ್ಸಿ ಕಾ' ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಸುರೇಖಾ 1988ರಲ್ಲಿ ಬಂದ 'ತಮಾಸ್', 1995ರಲ್ಲಿ ಬಿಡುಗಡೆಯಾದ 'ಮಮ್ಮೊ' ಮತ್ತು 2018ರಲ್ಲಿ ಬಂದ 'ಬದೈ ಹೋ' ಸಿನಿಮಾಗಾಗಿ ಸುರೇಖಾ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಸುರೇಖಾ ಖ್ಯಾತಿಗಳಿಸಿದ್ದರು.

  'ಬಾಲಿಕಾ ವಧು' ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಇನ್ನು 'ಬದೈ ಹೋ' ಸಿನಿಮಾದ ಪಾತ್ರ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. 2018ರಲ್ಲಿ ನಟಿ ಸುರೇಖಾ ಬ್ರೈನ್ ಸ್ಕ್ರೋಕ್ ನಿಂದ ಬಾತ್ ರೂಮ್ ನಲ್ಲಿ ಬಿದ್ದು ತೆಲೆಗೆ ತೀವ್ರವಾದ ಏಟು ಬಿದ್ದಿತ್ತು.

  ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada

  ಚೇತರಿಸಿಕೊಳ್ಳುತ್ತಿದ್ದ ಸುರೇಖಾ ಸಂದರ್ಶನದಲ್ಲಿ ಮಾತನಾಡಿ, "ನನಗೆ ಹತ್ತು ತಿಂಗಳ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಅಂದಿನಿಂದ ಇವತ್ತಿನ ವರೆಗೂ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಅನಾರೋಗ್ಯದಿಂದ ನನಗೆ ಕೆಲಸ ಮಾಡಲು ನನಗೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಸರಿಯಾಗುತ್ತೇನೆ ಎಂದು ವೈದ್ಯರು ಹೇಳಿದ್ದಾರೆ" ಎಂದಿದ್ದರು.

  English summary
  National Award winning Actress Surekha Sikri passes away due to cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X