For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬುದ್ಧದೇವ್ ದಾಸ್ ಗುಪ್ತ ನಿಧನ; ಪ್ರಧಾನಿ ಮೋದಿ ಸಂತಾಪ

  |

  ಬಂಗಾಳಿಯ ಖ್ಯಾತ ಚಿತ್ರ ನಿರ್ದೇಶಕ ಬುದ್ಧದೇವ್ ದಾಸ್ ಗುಪ್ತಾ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಇಂದು (ಜೂನ್ 10) ಬೆಳಗ್ಗೆ ನಿಧನರಾಗಿದ್ದಾರೆ. 77 ವರ್ಷದ ನಿರ್ದೇಶಕ ಬುದ್ಧದೇವ್ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು.

  ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬುದ್ಧದೇವ್ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ಬೆಂಗಾಲಿ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

  ದಿಗ್ಗಜ ಸಂಗೀತ ನಿರ್ದೇಶಕ ಘಂಟಸಾಲರ ಮಗ ರತ್ನಕುಮಾರ್ ನಿಧನದಿಗ್ಗಜ ಸಂಗೀತ ನಿರ್ದೇಶಕ ಘಂಟಸಾಲರ ಮಗ ರತ್ನಕುಮಾರ್ ನಿಧನ

  ಖ್ಯಾತ ನಿರ್ದೇಶಕ ಬುದ್ಧದೇವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. 'ಬುದ್ಧದೇವ್ ಸಾದ್ ಗುಪ್ತ ನಿಧಿನದಿಂದ ತೀವ್ರ ದುಃಖವಾಗಿದೆ. ಪ್ರಖ್ಯಾತ ಚಿಂತಕ ಮತ್ತು ಕವಿಯೂ ಆಗಿದ್ದರೂ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ.

  ಬುದ್ಧದೇವ್ ಸುಪ್ರಸಿದ್ಧ ನಿರ್ದೇಶಕ ಜೊತೆಗೆ ಬಂಗಾಳಿಯ ಅತ್ಯುತ್ತಮ ಕವಿ ಕೂಡ ಆಗಿದ್ದರು. ಅವರ ಅನೇಕ ಸಿನಿಮಾಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿವೆ. ವಿಮರ್ಶಾತ್ಮಕ ಮೆಚ್ಚುಗೆ ಪಡೆಯುವ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಬುದ್ಧದೇವ್ ಪ್ರಸಿದ್ಧರಾಗಿದ್ದರು. ಉತ್ತರ, ಬಾಗ್ ಬಹದ್ದೂರ್, ತಹದರ್ ಕಥಾ ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅವರದ್ದು.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada

  ಇನ್ನು ವಿಶೇಷ ಎಂದರೆ ಬುದ್ಧದೇವ್ ನಿರ್ದೇಶನದ 5 ಚಿತ್ರಗಳಿಗೆ ಉತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಬಂದಿದೆ. ಬಾಗ್ ಬಹದ್ದೂರ್, ಚರಚಾರ್, ಲಾಲ್ ದರ್ಜಾ, ಮೊಂಡೋ ಮೆಯೆರ್ ಉಪಕ್ಯಾನ್ ಮತ್ತು ಕಾಲ್ಪುರುಷ್ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಬಂದಿದೆ. ಇನ್ನು ಉತ್ತರ ಮತ್ತು ಸ್ವಪ್ನರ್ ದಿನ ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬುದ್ಧದೇವ್ ಅವರನ್ನು ಅರಸಿ ಬಂದಿವೆ.

  English summary
  National award winning Bengali Director Buddhadeb Dasgupta dies. PM Modi mourns the dismiss of Buddhadeb Dasgupta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X