ಮದುವೆ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ರಶ್ಮಿಕಾ ಮಂದಣ್ಣ ? ಉತ್ತರ ಇಲ್ಲಿದೆ

ಬಣ್ಣದ ಲೋಕದಲ್ಲಿ ಸುದ್ದಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅನ್ನೋದನ್ನೇ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಸ್ಟಾರ್ ನಟ-ನಟಿಯರು ಒಂದೇ ಸಿನಿಮಾದಲ್ಲಿ ನಟಿಸಿ ಹಿಟ್ ಕೊಟ್ಟರೆ ಸಾಕು, ಅವರಿಬ್ಬರ ಕೆಮಿಸ್ಟ್ರಿ ವರ್ಕ್ ಆಯ್ತು ಅಂತಲೇ ಅರ್ಥ. ಈಗ ಅಂತಹದ್ದೇ ಒಂದು ಬಿಸಿಬಿಸಿ ಸುದ್ದಿ ಬಿ-ಟೌನ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಆ ನಾಯಕಿ ಈಗಾಗಲೇ ಇಡೀ ಇಂಡಿಯಾದ 'ನ್ಯಾಷನಲ್ ಕ್ರಶ್' ಆಗಿ ಮಿಂಚುತ್ತಿದ್ದಾರೆ.

ಸಿನಿಮಾ ಅಂದಮೇಲೆ ಅಲ್ಲಿ ಕಾಂಬಿನೇಷನ್ ಬಹಳ ಮುಖ್ಯವಾಗುತ್ತದೆ. ಒಂದೇ ಬಾರಿ ತೆರೆ ಹಂಚಿಕೊಂಡಾಗ ಪ್ರೇಕ್ಷಕರು ಮೆಚ್ಚಿಕೊಂಡರೆ, ನಿರ್ಮಾಪಕರು ಮತ್ತೆ ಅವರನ್ನು ಕರೆತರಲು ಹರಸಾಹಸ ಪಡುತ್ತಾರೆ. ಈಗ ಚರ್ಚೆಯಲ್ಲಿರುವ ಈ ಜೋಡಿ ಕೂಡ ಹಾಗೆಯೇ. ಇನ್ನೂ ಅವರ ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ, ಮತ್ತೊಂದು ಸಿನಿಮಾಗೆ ಇಬ್ಬರೂ ಸಹಿ ಹಾಕಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದು ಕೇವಲ ವದಂತಿಯಲ್ಲ, ಸ್ಯಾಂಡಲ್‌ವುಡ್‌ದಿಂದ ಬಾಲಿವುಡ್‌ವರೆಗೆ ಹರಡಿರುವ ಸುದ್ದಿ.

National Crush Rashmika Mandanna s massive bollywood leap Two back-to-back films with Shahid Kapoor

ಕುತೂಹಲ ಕೆರಳಿಸಿದ ಜೋಡಿ

ಅರೆ... ಇಷ್ಟೆಲ್ಲಾ ಬಿಲ್ಡಪ್ ಕೊಟ್ಟ ಮೇಲೂ ನಿಮಗೆ ಆ ಜೋಡಿ ಯಾರು ಅಂತ ಗೊತ್ತಾಗಲಿಲ್ವಾ? ಸದ್ಯ ಬಾಲಿವುಡ್‌ನ ಚಾಕೊಲೇಟ್ ಹೀರೊ ಮತ್ತು ಸೌತ್‌ನ ಬೆಡಗಿಯ ಬಗ್ಗೆಯೇ ಇಲ್ಲಿ ಮಾತು ನಡೆಯುತ್ತಿರೋದು. ಹೌದು, ನಾವು ಹೇಳ್ತಿರೋದು ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಮತ್ತು ನಮ್ಮ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಗ್ಗೆ. ಇವರಿಬ್ಬರೂ ಈಗ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.


ಮದುವೆ ನಂತರ ಮುಂದುವರೆಯಲಿದೆ ನಟನೆ

ಹೌದು, ಈಗಾಗಲೇ ಎಲ್ಲೆಡೆ ಗುಲ್ಲಾದಂತೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಇದೇ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ. ಇನ್ನೂ ಸಾಮಾನ್ಯವಾಗಿ ಮದುವೆಯಾದ ನಂತರ ಹಲವು ನಾಯಕಿಯರು ಚಿತ್ರರಂಗದಿಂದ ದೂರವಾಗ್ತಾರೆ. ಮನೆ-ಗಂಡ-ಸಂಸಾರ ಎಂದು ಕಳೆದು ಹೋಗುತ್ತಾರೆ. ಹೀಗಾಗಿ ರಶ್ಮಿಕಾ ಮಂದಣ್ಣ ಕೂಡ ಇದೇ ಸಾಲಿಗೆ ಸೇರುತ್ತಾರಾ ಎನ್ನುವ ಚಿಂತೆ ಇವರ ಅಭಿಮಾನಿಗಳಲ್ಲಿತ್ತು. ಆದರೆ, ರಶ್ಮಿಕಾ ಮಂದಣ್ಣ ಮದುವೆ ನಂತರವೂ ಚಿತ್ರರಂಗದಲ್ಲಿ ಮುಂದುವರೆಯವ ಸೂಚನೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ರಶ್ಮಿಕಾ ಸದ್ಯ ಶಾಹೀದ್ ಕಪೂರ್ ಜೊತೆ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಪಸರ್ ಆಗಿದೆ.


'ಕಾಕ್ಟೇಲ್ 2' ಬಳಿಕ ಮತ್ತೊಂದು ರೊಮ್ಯಾನ್ಸ್.

ಸದ್ಯಕ್ಕೆ ಇವರಿಬ್ಬರೂ 'ಕಾಕ್ಟೇಲ್ 2' ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಾಹಿದ್ ಮತ್ತು ರಶ್ಮಿಕಾ ಮಧ್ಯೆ ಒಳ್ಳೆಯ ಸ್ನೇಹ ಬೆಳೆದಿದೆ. ಶೂಟಿಂಗ್ ಸೆಟ್‌ನಲ್ಲಿ ಇವರಿಬ್ಬರ ಹೊಂದಾಣಿಕೆ ಕಂಡು ನಿರ್ದೇಶಕರು ಕೂಡ ಫಿದಾ ಆಗಿದ್ದಾರಂತೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ತೋರಿಸಲು ಬಾಲಿವುಡ್ ಮಂದಿ ಪ್ಲಾನ್ ಮಾಡಿದ್ದಾರೆ.

ಹೋಮಿ ಅದಜಾನಿಯಾ ನಿರ್ದೇಶನದಲ್ಲಿ ಸಿನಿಮಾ

ಇವರಿಬ್ಬರೂ ಅಭಿನಯಿಸಿರುವ 'ಕಾಕ್ಟೇಲ್ 2' ಚಿತ್ರಕ್ಕೆ ಬಾಲಿವುಡ್‌ನ ಸ್ಟೈಲಿಶ್ ನಿರ್ದೇಶಕ ಹೋಮಿ ಅದಜಾನಿಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಕಾಕ್ಟೇಲ್' ಚಿತ್ರದ ಮೂಲಕ ಮೋಡಿ ಮಾಡಿದ್ದ ಹೋಮಿ, ಈಗ ರಶ್ಮಿಕಾ ಮತ್ತು ಶಾಹಿದ್ ಜೋಡಿಯನ್ನು ಅತ್ಯಂತ ಗ್ಲಾಮರಸ್ ಆಗಿ ತೆರೆಯ ಮೇಲೆ ತರುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಳೆ ಶಾಹಿದ್ ಮತ್ತು ರಶ್ಮಿಕಾ ಮಧ್ಯೆ ಸಖತ್ ಪ್ರೊಫೆಷನಲ್ ಬಾಂಡಿಂಗ್ ಬೆಳೆದಿದೆ.

National Crush Rashmika Mandanna s massive bollywood leap Two back-to-back films with Shahid Kapoor

ಕೆಮಿಸ್ಟ್ರಿ ವರ್ಕ್ ಆಯ್ತು ನೋಡಿ

'ಕಾಕ್ಟೇಲ್ 2' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಇವರಿಬ್ಬರ ಹೊಂದಾಣಿಕೆ ಕಂಡು ಇಡೀ ಚಿತ್ರತಂಡವೇ ಫಿದಾ ಆಗಿದೆಯಂತೆ. ಶಾಹಿದ್ ಅವರ ಅನುಭವಿ ನಟನೆಗೆ ರಶ್ಮಿಕಾ ಅವರ ಎನರ್ಜಿ ಸಾಟಿಯೇ ಇಲ್ಲದಂತಿದೆ. ಈ ಕಾಂಬಿನೇಷನ್ ತೆರೆಯ ಮೇಲೆ ಮ್ಯಾಜಿಕ್ ಮಾಡುವುದು ಗ್ಯಾರಂಟಿ ಅಂತ ಗೊತ್ತಾದ ತಕ್ಷಣವೇ, ಬಾಲಿವುಡ್ನ ಮತ್ತೊಬ್ಬ ದೊಡ್ಡ ನಿರ್ದೇಶಕರು ಈ ಜೋಡಿಯನ್ನು ಬುಕ್ ಮಾಡಿಕೊಂಡಿದ್ದಾರೆ. ಆ ನಿರ್ದೇಶಕರು ಬೇರೆ ಯಾರೂ ಅಲ್ಲ, ರಾಷ್ಟ್ರ ಪ್ರಶಸ್ತಿ ವಿಜೇತ ಅಮಿತ್ ರವೀಂದರ್ ನಾಥ್ ಶರ್ಮಾ.

ಅಮಿತ್ ಶರ್ಮಾ ಗರಡಿಯಲ್ಲಿ ಎರಡನೇ ಸಿನಿಮ

'ಬದಾಯಿ ಹೋ' ಮತ್ತು 'ಮೈದಾನ್' ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅಮಿತ್ ಶರ್ಮಾ, ಈಗ ರಶ್ಮಿಕಾ ಮತ್ತು ಶಾಹಿದ್ ಕಾಂಬಿನೇಷನ್ನಲ್ಲಿ ಹೊಸ ಚಿತ್ರವೊಂದನ್ನು ಪ್ಲಾನ್ ಮಾಡಿದ್ದಾರೆ. ಇದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಆಗಿರಲಿದ್ದು, ಇಲ್ಲಿ ಪ್ರೀತಿ ಮತ್ತು ಹಾಸ್ಯಕ್ಕೆ ಯಾವುದೇ ಬರವಿರುವುದಿಲ್ಲ. ಹೋಮಿ ಅದಜಾನಿಯಾ ಅವರ ಸಿನಿಮಾದಲ್ಲಿ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ, ಅಮಿತ್ ಶರ್ಮಾ ಚಿತ್ರದಲ್ಲಿ ಎಮೋಷನಲ್ ಪಾತ್ರಗಳಲ್ಲಿ ಮಿಂಚಲಿದ್ದಾರಂತೆ.

ಕಥೆಯಲ್ಲಿ ಏನಿದೆ ವಿಶೇಷತೆ?

'ವೆರೈಟಿ ಇಂಡಿಯಾ' ವರದಿಯ ಪ್ರಕಾರ, ಈ ಚಿತ್ರವು ಕೇವಲ ನಗು ಮತ್ತು ಪ್ರೀತಿಯನ್ನಷ್ಟೇ ಅಲ್ಲದೆ, ಭಾವನಾತ್ಮಕ ಅಂಶಗಳನ್ನೂ ಒಳಗೊಂಡಿರುತ್ತದೆ. 'ಕಾಕ್ಟೇಲ್ 2' ಸಿನಿಮಾದಲ್ಲಿ ಮಾಡರ್ನ್ ರಿಲೇಶನ್ಶಿಪ್ ಬಗ್ಗೆ ಹೇಳಲಾಗಿದ್ದರೆ, ಈ ಹೊಸ ಸಿನಿಮಾದಲ್ಲಿ ಸಂಬಂಧಗಳ ಆಳವಾದ ಮತ್ತು ವೈಯಕ್ತಿಕವಾದ ಕಥೆಯನ್ನು ಹೇಳಲಾಗುತ್ತದೆಯಂತೆ. ಶಾಹಿದ್ ಕಪೂರ್ ಅನುಭವಿ ನಟನೆ ಮತ್ತು ರಶ್ಮಿಕಾ ಅವರ ಎನರ್ಜಿಟಿಕ್ ಪರ್ಫಾರ್ಮೆನ್ಸ್ ಈ ಸಿನಿಮಾದ ಹೈಲೈಟ್ ಆಗಲಿದೆ.

ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ...

ರಶ್ಮಿಕಾ ಮಂದಣ್ಣ ಈಗ ಕೇವಲ ಸೌತ್ ಸಿನಿಮಾ ಇಂಡಸ್ಟ್ರಿಗೆ ಸೀಮಿತವಾಗಿಲ್ಲ. 'ಪುಷ್ಪ' ಚಿತ್ರದ ನಂತರ ಅವರ ಕ್ರೇಜ್ ಬಾಲಿವುಡ್ನಲ್ಲಿ ಮುಗಿಲು ಮುಟ್ಟಿದೆ. ಇತ್ತ ಶಾಹಿದ್ ಕಪೂರ್ ಕೂಡ ವಿಭಿನ್ನ ಪಾತ್ರಗಳ ಮೂಲಕ ಜನರ ಮನಗೆದ್ದಿದ್ದಾರೆ. ಇಬ್ಬರೂ ಪ್ರತಿಭಾವಂತ ಕಲಾವಿದರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಸದ್ಯಕ್ಕೆ ಈ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದ್ದು, ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬ ಕಾತರ ಎಲ್ಲರಲ್ಲೂ ಮನೆ ಮಾಡಿದೆ.

More from Filmibeat

Read more about: rashmika mandanna shahid kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X