For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ರಾಷ್ಟ್ರಪ್ರಶಸ್ತಿಗೆ ಸುಶಾಂತ್ ಸಿಂಗ್ ಹೆಸರು?

  |

  ಅಗಲಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆ ಗೌರವ ನೀಡುವ ಉದ್ದೇಶದಿಂದ ಸುಶಾಂತ್ ಸಿಂಗ್ ಹೆಸರನ್ನು ರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಇಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

  ಸುಶಾಂತ್ ಹೆಸರನ್ನು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಇಡಲು ಪ್ರಸ್ತಾವನೆ ಸಲ್ಲಿಲಾಗಿದೆ ಎಂಬು ಬಿಜೆಪಿ ಮೂಲವೊಂದು ಹೇಳಿರುವುದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ. 'ಅಧಿಕಾರಿಗಳು, ರಾಜಕಾರಣಿಗಳು ಕೆಲಸವನ್ನು ತಡವಾಗಿ ಮಾಡುವುದಕ್ಕೆ ಖ್ಯಾತರು, ಹಾಗಾಗಿ ಪ್ರಸ್ತಾವವನ್ನು ಗಂಭೀರವಾಗಿ ಯಾವಾಗ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ' ಎಂದು ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿ ಹೇಳಿದ್ದಾರೆ.

  ಸುಶಾಂತ್ ಸಿಂಗ್ ಹೆಸರನ್ನು ದೆಹಲಿಯ ಆಂಡ್ರಿವ್ಸ್ ಗಂಜ್‌ನ ರಸ್ತೆಯೊಂದಕ್ಕೆ ಇಟ್ಟಿದೆ ದೆಹಲಿ ಮಹಾನಗರ ಪಾಲಿಕೆ. ಇನ್ನೂ ಕೆಲವು ನಗರಗಳಲ್ಲಿ ಸುಶಾಂತ್ ಸಿಂಗ್ ರಜಪೂರ್ ಹೆಸರನ್ನು ರಸ್ತೆಗಳಲ್ಲಿ, ವೃತ್ತಗಳಿಗೆ ಇಡಲಾಗಿದೆ.

  ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ಸಿನಿಮಾ ಸಹ ಸೆಟ್ಟೇರಿದ್ದು, ಸುಶಾಂತ್ ರ ಮಾಜಿ ಪ್ರೇಯಸಿ ಅಂಕಿತಾ ಲೋಕಂಡೆ ಸೇರಿದಂತೆ ಸುಶಾಂತ್ ಸಿಂಗ್ ರ ನಿಜ ಜೀವನದ ಗೆಳೆಯರು, ಕುಟುಂಬದವರು ಸಿನಿಮಾದಲ್ಲಿ ನಟಿಸಲಿದ್ದಾರೆ.

  ಸುಶಾಂತ್ ಸಿಂಗ್ ಅಭಿಮಾನಿ ಸಂಘಗಳು ದೇಶದ ಹಲವೆಡೆ ಹುಟ್ಟಿಕೊಂಡಿದ್ದು ಅಭಿಮಾನಿಗಳು ಹಲವು ಚಾರಿಟಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

  ರಶ್ಮಿಕಾ ವಿರುದ್ಧ ಮತ್ತೆ ಗರಂ ಆದ ಕನ್ನಡಿಗರು | Filmibeat Kannada

  ಸುಶಾಂತ್ ಸಿಂಗ್ ರಜಪೂತ್ 2020 ರ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಸಲ್ಲಿಸಿದ್ದರು. ಆದರೆ ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐ ನವರು ಮಾಡುತ್ತಿದ್ದಾರೆ.

  English summary
  A proposal has been sent to government to name national film award after late actor Sushant Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X