ಕಿಸ್ ಮಾಡು ಅಂತಾರೆ, ಒಪ್ಪದಿದ್ದರೆ ನಿರ್ಮಾಪಕರು ದುಡ್ಡು ಕೊಡಲ್ಲ ; ಪೇಮೆಂಟ್ ಬ್ಲ್ಯಾಕ್‌ಮೇಲ್ ಬಹಿರಂಗಪಡಿಸಿದ ನಟಿ
ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಕನಸೊತ್ತು ಬರುವ ಚೆಲುವೆಯರಿಗೆ ಇಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಕೆಲವರು ಪಾತ್ರ ಬೇಕು ಅಂದರೆ ಪಲ್ಲಂಗಕ್ಕೆ ಕರೆಯುತ್ತಾರೆ. ಬೇಡಿಕೆ ಈಡೇರಿಸದಿದ್ದರೆ ಚಿತ್ರದಿಂದಲೇ ಹೊರ ಹಾಕುತ್ತಾರೆ. ಇನ್ನೂ ಕೆಲ ಒಮ್ಮೆ ಎಲ್ಲಿಯೂ ಅವಕಾಶ ಸಿಗದಂತೆ ಕೂಡ ನೋಡಿಕೊಳ್ಳುತ್ತಾರೆ. ಮತ್ತೂ ಕೆಲವರು ಮಾನಸಿಕ ಕಿರುಕುಳ ಕೊಡುತ್ತಾರೆ. ಹೇಗಾದರೂ ಮಾಡಿ ಸ್ವಾಭಿಮಾನ ಅಡ ಇಡುವಂತೆ ಮಾಡುತ್ತಾರೆ. ಅಡಿಗಡಿಗೂ ಇಲ್ಲಿ ಸಮಸ್ಯೆ.
ಬಣ್ಣದ ಲೋಕದ ಈ ಧೋರಣೆಯಿಂದ ಬೇಸತ್ತು ಬಂದಷ್ಟೇ ವೇಗದಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಮನೆ ಸೇರಿದ್ದಾರೆ. ಜೀವನೋಪಾಯಕ್ಕೆ ಬೇರೆ ಬೇರೆ ಕೆಲಸ ಮಾಡಿಕೊಂಡು ಇದ್ಧಾರೆ. ಆ ಪೈಕಿ ಒಬ್ಬರಾದ ನೌಹೀದ್ ಸಿರುಸಿ ಚಿತ್ರರಂಗದಲ್ಲಿನ ಮತ್ತೊಂದು ಅಲಿಖಿತ ನಿಯಮವನ್ನು ಹೇಳಿದ್ದಾರೆ. ಈ ಮೂಲಕ ಹಲವರನ್ನು ಆಘಾತಕ್ಕೀಡು ಮಾಡಿದ್ಧಾರೆ.

ಹೌದು, ನೌಹೀದ್ ಸಿರುಸಿ.. ಮಾಡೆಲ್ ಮತ್ತು ಒಂದ್ಕಾಲದ ವಿಜೆ. ಸರಿ ಸುಮಾರು 25 ವರ್ಷದ ಹಿಂದೆ ಬಂದಿದ್ದ ಇವರ ''ಪಿಯಾ ಬಸಂತಿ ರೇ'' ಎಂಬ ಆಲ್ಬಂ ಆ ಕಾಲಕ್ಕೆ ಹಲವರಿಗೆ ಹುಚ್ಚು ಹಿಡಿಸಿತ್ತು. ಉಸ್ತಾದ್ ಸುಲ್ತಾನ್ ಖಾನ್ ಮತ್ತು ಕೆ.ಎಸ್.ಚೈತ್ರಾ ಈ ಸುಂದರ ಸುಮಧುರ ಹಾಡಿಗೆ ಧ್ವನಿಯಾಗಿದ್ದರು. ಇವತ್ತು ಕೂಡ ಈ ಹಾಡನ್ನು ಕೇಳುವ ವರ್ಗ ಇದೆ.
ಹೀಗೆ ''ಪಿಯಾ ಬಸಂತಿ'' ಹಾಡಿನ ಮೂಲಕ ಚಿತ್ರರಂಗಕ್ಕೆ ಬಂದ ನೌಹೀದ್ ಆ ನಂತರ ''ಸುಪಾರಿ''.. ''ಲಕೀರ್''.. ''ಇಂತೇಹಾ''.. ''ಹಾಲಿಡೇ''.. ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದರು. ''ಅನ್ವರ್'' ಚಿತ್ರವನ್ನು ಮಾಡಿದರು. ಈ ಚಿತ್ರದ ''ಮೌಲಾ ಮೇರೆ'' ಹಾಡು ಇವತ್ತು ಕೂಡ ಜನಪ್ರಿಯ. ಸಲ್ಮಾನ್ ಖಾನ್ ಅಭಿನಯದ ''ಜೈಹೋ'' ಇವರು ಅಭಿನಯಿಸಿರುವ ಕೊನೆಯ ಸಿನಿಮಾ.
''ಜೈಹೋ'' ತೆರೆಗೆ ಬಂದು ಹನ್ನೆರಡು ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ನೌಹೀದ್ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆ ಹಲವರಲ್ಲಿ ಚಿತ್ರರಂಗದಿಂದ ಏಕಾಏಕಿ ನೌಹೀದ್ ಕಣ್ಮರೆಯಾಗಿದ್ದೇಕೆ ಎಂಬ ಪ್ರಶ್ನೆ ಇದೆ. ಈ ಪ್ರಶ್ನೆಗೆ ನೌಹೀದ್ ಸಿರುಸಿ ಈಗ ಉತ್ತರ ನೀಡಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೌಹೀದ್ ಚಿತ್ರರಂಗದಲ್ಲಿರುವುದು ಒಳ್ಳೆಯದೇ ಆದರೆ ನೀವು ಕಿಸ್ ಮಾಡಲು ರೆಡಿ ಇರಬೇಕು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ನೌಹೀದ್ ಚಿತ್ರದ ಕಥೆಗೆ ಪೂರಕವಾಗಿ ಇರಲಿ ಬಿಡಲಿ ನಮ್ಮಲ್ಲಿ ಸುಖಾಸುಮ್ಮನೆ ಹಸಿಬಿಸಿ ದೃಶ್ಯ ಮತ್ತು ಕಿಸ್ಸಿಂಗ್ ಸೀನ್‌ಗಳನ್ನು ತುರುಕುತ್ತಾರೆ ಎಂದು ಹೇಳಿದ್ಧಾರೆ.

ಹೋಗಲಿ ಆ ಕಿಸ್ಸಿಂಗ್ ಸೀನ್‌ಗಳನ್ನಾದರೂ ಸರಿಯಾಗಿ ಸೆರೆ ಹಿಡಿಯುತ್ತಾರಾ ಅಂದರೆ ಅದೂ ಇಲ್ಲ ಎಂದು ಹೇಳಿರುವ ನೌಹೀದ್ ನಾನು ಈ ಕಿಸ್ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಹಲವಾರು ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂದಿದ್ಧಾರೆ.
ಮುಂದುವರೆದು ಇಷ್ಟಕ್ಕೇ ಇದು ನಿಲ್ಲುವುದಿಲ್ಲ ನಿರ್ಮಾಪಕರು ಸಂಪೂರ್ಣ ಸಂಭಾವನೆ ಕೊಡುವುದಿಲ್ಲ. ಬದಲಿಗೆ ಶೇಕಡಾ 25% ರಷ್ಟು ಹಣ ತಮ್ಮ ಬಳಿ ಉಳಸಿಕೊಳ್ಳುತ್ತಾರೆ ಎಂದು ಹೇಳಿರುವ ನೌಹೀದ್, ಅನೇಕ ನಿರ್ಮಾಪಕರು ಒಪ್ಪಂದದಲ್ಲಿಯೇ ಈ ಗುಪ್ತ ನಿಯಮಗಳನ್ನು ಸೇರಿಸಿರುತ್ತಾರೆ ಎಂದು ಹೇಳಿದ್ದಾರೆ.
ಒಂದು ವೇಳೆ ಶೂಟಿಂಗ್ ಸಮಯದಲ್ಲಿ ಇಂತಹ ಬೋಲ್ಡ್ ದೃಶ್ಯಗಳಲ್ಲಿ ನಾವು ಆಕ್ಟ್ ಮಾಡಲು ನಿರಾಕರಿಸಿದರೆ, ಆಗ ನಮ್ಮ ಸಂಭಾವನೆಯಲ್ಲಿ ಶೇ. 25ರಷ್ಟು ಹಣವನ್ನು ನಿರ್ಮಾಪಕರು ತಡೆಹಿಡಿಯುತ್ತಾರೆ ಎಂದು ಹೇಳಿರುವ ನೌಹೀದ್ ನನಗೆ ಹಲವು ಚಿತ್ರದ ನಿರ್ಮಾಪಕರು ಬಾಕಿ ಹಣ ಇವತ್ತು ಕೂಡ ನೀಡಿಲ್ಲ ಎಂದು ಹೇಳಿದ್ಧಾರೆ.
ಹಣ ಕೇಳಿದರೆ ಸಿನಿಮಾ ಓಡಲಿಲ್ಲ, ಲಾಭ ಆಗಲಿಲ್ಲ, ಅದು-ಇದೂ ಎಂದು ಕಥೆ ಹೇಳುತ್ತಾರೆ ಎಂದು ಹೇಳಿರುವ ನೌಹೀದ್ ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಿರುತ್ತೇವೆ ಅದಕ್ಕಾದರೂ ಬೆಲೆ ಬೇಡ್ವಾ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಒಂದು ಸಿನಿಮಾ ಮಾಡುವ ಮುನ್ನ ಒಪ್ಪಂದ ಆಗಿರುತ್ತೆ. ಆ ಒಪ್ಪಂದದ ಪ್ರಕಾರ ನಡೆದುಕೊಳ್ಳದಿದ್ದರೆ ನಾನು ಅವರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದು, ಆದರೆ ನನ್ನಿಂದ ಅದು ಸಾಧ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ.
ಚಿತ್ರರಂಗದಿಂದ ದೂರ ಆದ ಹಿನ್ನೆಲೆ ಚಿತ್ರರಂಗದ ಜೊತೆಗಿನ ಸಂಪರ್ಕ ಸೇತುವೆ ಕಟ್ ಆಯ್ತು, ಇದರಿಂದ ನನ್ನ ವೃತ್ತಿ ಬದುಕಿನ ಮೇಲೆ ಪರಿಣಾಮ ಆಯ್ತು, ಅವಕಾಶಗಳ ಬರ ಎದುರಾಯ್ತು ಎಂದು ಹೇಳಿರುವ ನೌಹೀದ್ ನಾನು ಹೀರೋ ಮತ್ತು ಪ್ರೊಡ್ಯೂಸರ್ ಗಳ ಗುಂಪಿನ ಜೊತೆ ಓಡಾಡುವಳಲ್ಲ ಎಂದು ಹೇಳಿದ್ಧಾರೆ.
ಅಂದ್ಹಾಗೇ ಸದ್ಯ ನೌಹೀದ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಹೊರ ಹೊಮ್ಮಿದ್ದಾರೆ. ಒಂದು ದಶಕದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ಧಾರೆ. ಹಿರಿಯ ನಟ ಸೌರಭ್ ಶುಕ್ಲಾ ನಿರ್ದೇಶನದ ''ಜಬ್ ಖುಲಿ ಕಿತಾಬ್'' ಚಿತ್ರದಲ್ಲಿ ನೌಹೀದ್ ಅಭಿನಯಿಸಿದ್ದು ಈ ಚಿತ್ರ ಜೀ5ನಲ್ಲಿ ಲಭ್ಯ ಇದೆ.


Click it and Unblock the Notifications