ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ: ನಟಿಯ 9 ಸಂಕಲ್ಪ..!
ದೇಶದಾದ್ಯಂತ ಇಂದಿನಿಂದ ನವರಾತ್ರಿ ಸಂಭ್ರಮ ಆರಂಭವಾಗಿದೆ. ನವರಾತ್ರಿಗೆ ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ವೈಶಿಷ್ಟತೆ ಇದೆ. ಹೆಸರೇ ಹೇಳುವ ಹಾಗೆ ಒಂಬತ್ತು ರಾತ್ರಿಗಳಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಉತ್ಸವವೇ ನವರಾತ್ರಿ. ಹಬ್ಬಗಳ ದೇಶವಾಗಿರುವ ಭಾರತದಲ್ಲಿ ನವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.
ದೇಶದ ಮೂಲೆ ಮೂಲೆಯಲ್ಲಿ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಉತ್ತರ ಭಾರತದಲ್ಲಿ ವಿಶಿಷ್ಟ ಸಾಂಪ್ರದಾಯಕಗಳ ಮೂಲಕ ದೇವಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಸದ್ಯ ಬಾಲಿವುಡ್ ತಾರೆಯರ ನಿವಾಸದಲ್ಲೂ ಈ ಸಂಭ್ರಮ ಮನೆ ಮಾಡಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿವಾಸದಲ್ಲಿ ನವರಾತ್ರಿ ಪೂಜೆಗಳು ಆರಂಭಗೊಂಡಿದೆ. ಈ ಬಗ್ಗೆ ಸ್ವತಃ ನಟಿಯೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂಬತ್ತು ದೇವಿಯರಿಗೆ ಪೂಜೆ ಸಲ್ಲಿಸುವ ವಿಡಿಯೋ ಹಂಚಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ದೇಶದ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ನವ ದುರ್ಗೆಯರು ನಿಮಗೆಲ್ಲ ಒಳಿತು ಮಾಡಲಿ ಎಂದು ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಒಂದು ಉತ್ತಮ ಸಂದೇಶವನ್ನು ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಒಂಬತ್ತು ಹೊಸ ಪ್ರತಿಜ್ಞೆ ಮಾಡಿದ್ದಾರೆ. ನವರಾತ್ರಿ ಶುಭಾಶಗಳೊಂದಿಗೆ ಉತ್ತಮ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಈ ಒಂಬತ್ತು ದಿನಗಳಲ್ಲಿ ಒಂಬತ್ತು ದೇವಿಯರನ್ನು ಆರಾಧಿಸುವ ಮೂಲಕ ನಮ್ಮ ಆತ್ಮಗಳನ್ನು ಶುದ್ಧಿಗೊಳಿಸೋಣ ಎಂದಿದ್ದಾರೆ. ಹಾಗೆ ಅವರು ಪ್ರಥಮದಿನದಿಂದ ಮಹಾನವಮಿಯ ವರೆಗೆ 9 ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಪ್ರಥಮವಾಗಿ ನಾನು ನನ್ನ ಕೋಪ, ಸಿಟ್ಟು, ಸಿಡುಕುಗಳನ್ನು ಬಿಡುತ್ತೇನೆ. ದ್ವಿತೀಯವಾಗಿ ನಾನು ಇತರ ಜನರನ್ನು ಜಡ್ಡ್ ಮಾಡುವುದನ್ನು ನಿಲ್ಲಿಸುತ್ತೇನೆ. ತೃತೀಯವಾಗಿ ನಾನು ನನ್ನ ಎಲ್ಲಾ ದ್ವೇಷವನ್ನು ಬಿಟ್ಟು ಬಿಡುತ್ತೇನೆ. ಚತುರ್ಥವಾಗಿ ನಾನು ನಾನು ನನ್ನ ತಪ್ಪುಗಳನ್ನು ಕ್ಷಮಿಸುತ್ತೇನೆ. ಅಲ್ಲದೇ ಇತರರ ತಪ್ಪುಗಳನ್ನು ಕ್ಷಮಿಸುತ್ತೇನೆ. ಪಂಚಮವಾಗಿ ನಾನು ನನ್ನ ತನವನ್ನು ಹಾಗೂ ಇತತರ ಭಾವನೆಗಳನ್ನು ಸ್ವೀಕರಿಸುತ್ತೇನೆ. ಷಷ್ಠಿಯಾಗಿ ನಾನು ನನ್ನನ್ನು ಪ್ರೀತಿಸುತ್ತೇನೆ. ಅಲ್ಲದೇ ಇತರರನ್ನು ಅಪಾರವಾಗಿ ಪ್ರೀತಿಸುತ್ತೇನೆ. ಸಪ್ತಮಿಯಾಗಿ ನಾನು ನನ್ನೊಳಗಿರುವ ಹೊಟ್ಟೆಕಿಚ್ಚನ್ನು, ಜಿಗುಪ್ಸೆಯನ್ನು ಹಾಗೂ ಅಪರಾಧ ಮನೋಭಾವವನ್ನು ತ್ಯಜಿಸುತ್ತೇನೆ. ಮಹಾನವಮಿಯಾಗಿ ನನಗೆ ದೇವರು ನೀಡಿರುವ ಎಲ್ಲಾ ವಸ್ತುಗಳಿಗೆ, ನನಗೆ ಸಿಕ್ಕಿರುವ ಎಲ್ಲಾ ವಿಚಾಗಳಿಗೆ ಕೃತಜ್ಞತಾಪೂರ್ವಕಳಾಗಿರುತ್ತೇನೆ ಎಂದು ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೆಚ್ಚಿನ ನಟಿ ಶಿಲ್ಪಾ ಶೆಟ್ಟಿ ಅವರಿಗೆ ನವರಾತ್ರಿ ಶುಭಾಶ ಕೋರಿರುವ ಅಭಿಮಾನಿಗಳು ನಟಿ ಈ ಹೊಸ ಸಂಕಲ್ಪಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ನಿವಾಸದಲ್ಲಿ ಬಹುತೇಕ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಮೂಲಕ ತಮ್ಮ ಮಕ್ಕಳಿಗೆ ತಮ್ಮ ಸಂಸ್ಕೃತಿ ಹಾಗೂ ಸಾಂಪ್ರದಾಯದ ಪರಿಚಯ ಮಾಡುತ್ತಿದ್ದಾರೆ. ಕಳೆದ ತಿಂಗಳು ಕೂಡ ಗೌರಿ ಗಣೇಶ ಹಬ್ಬವನ್ನು ಶಿಲ್ಪಾ ಶೆಟ್ಟಿ ತಮ್ಮ ಕುಟುಂಬಸ್ಥರೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದರು. ಕಳೆದ ವರ್ಷದ ಹಬ್ಬಗಳ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಜೈಲಿಗೆ ಹೋಗಿ ಬಂದಿದ್ದರು. ಹೀಗಾಗಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಹಬ್ಬಗಳು ಕಳೆಗುಂದಿದ್ದವು. ಈ ಬಾರಿ ನಟಿಯ ಮನೆಯಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದ್ದು, ಅಭಿಮಾನಿಗಳು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











