For Quick Alerts
  ALLOW NOTIFICATIONS  
  For Daily Alerts

  ಹರೆಯದಲ್ಲಿ ಲೈಂಗಿಕತೆ ಮತ್ತು ಗರ್ಭಧಾರಣೆ: ಅಮಿತಾಬ್ ಬಚ್ಚನ್ ಮೊಮ್ಮಗಳು ಹೇಳಿದ್ದು ಹೀಗೆ

  |

  ಅಮಿತಾಬ್ ಬಚ್ಚನ್ ಮೊಮ್ಮಗಳು ಎಂದ ಕೂಡಲೇ ಅಭಿಷೇಕ್-ಐಶ್ವರ್ಯಾ ಮಗಳು ಆರಾಧ್ಯಾ ನೆನಪಾಗುತ್ತಾಳೆ. ಆದರೆ ಅಮಿತಾಬ್‌ಗೆ ಇನ್ನೊಬ್ಬ ಮೊಮ್ಮಗಳಿದ್ದಾಳೆ ಆಕೆಯೇ ನವ್ಯಾ ನವೇಲಿ ನಂದಾ.

  ಅಮಿತಾಬ್‌ರ ಮಗಳು ಶ್ವೇತಾ ಹಾಗೂ ನಿಖಿಲ್ ನಂದಾ ದಂಪತಿಯ ಮಗಳಾಗಿರುವ ನವ್ಯಾ ನವೇಲಿ ನಂದಾ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಾಕಷ್ಟು ಗುರುತಿಸಿಕೊಳ್ಳುತ್ತಿದ್ದಾರೆ. 'ನಟನೆ ಬಗ್ಗೆ ಆಸಕ್ತಿ ಎಲ್ಲ ಬದಲಿಗೆ ನಾನೊಬ್ಬ ಉದ್ಯಮಿ ಆಗಬೇಕು' ಎಂದು ಇತ್ತೀಚೆಗಷ್ಟೆ ಹೇಳಿದ್ದ ನವ್ಯಾ, ಇದೀಗ ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಮಹಿಳಾ ಹಕ್ಕು, ಮಹಿಳೆಯರ ಸ್ವಚ್ಛತೆ, ಯುವ ಶಕ್ತಿ ಇನ್ನಿತರ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ನವ್ಯಾ, ಇದೀಗ 'ಹರೆಯದವರ ಲೈಂಗಿಕ ಹಕ್ಕು, ಲೈಂಗಿಕ ಆರೋಗ್ಯ ಮತ್ತು ಹರೆಯದಲ್ಲಿ ಗರ್ಭಧಾರಣೆ' ವಿಷಯದ ಬಗ್ಗೆ ಮಾತನಾಡಿದ್ದಾರೆ.

  ನವ್ಯಾ ನಂದಾ ಅವರು 'ಯುವ ಮತ್ತು ಅಬ್ ಹಮಾರಿ ಬಾರಿ' (ಯುವಾ ಮತ್ತು ಈ ಬಾರಿ ನಮ್ಮ ಸಮಯ) ಎಂಬ ಹೆಸರಿನ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಹರೆಯದವರ ಲೈಂಗಿಕ ಹಕ್ಕು, ಲೈಂಗಿಕ ಆರೋಗ್ಯ ಹಾಗೂ ಹರೆಯದಲ್ಲಿ ಗರ್ಭಧಾರಣೆ ವಿಷಯವಾಗಿ ಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ.

  'ಹರೆಯದಲ್ಲಿ ಗರ್ಭಧಾರಣೆ' ಎಂಬುದು ದೇಶವನ್ನು ಗುಪ್ತವಾಗಿ ಕಾಡುತ್ತಿರುವ ಸಮಸ್ಯೆ ಈ ಸಮಸ್ಯೆಯಿಂದ ದೇಶದ ಹಲವಾರು ಹೆಣ್ಣುಮಕ್ಕಳ ಜೀವನ ಹಾಳಾಗಿದೆ ಎಂದಿದ್ದಾರೆ. ಈಗ ಈ ವಿಷಯದ ಬಗ್ಗೆ ಮಾತನಾಡುವ, ಇತರರ ಸಮಸ್ಯೆಗಳನ್ನು ಕೇಳುವ ಸಮಯ ಬಂದಿದೆ ಎಂದಿದ್ದಾರೆ ನವ್ಯಾ.

  ಜೆಡಿಎಸ್ ಬಿಟ್ಟು ಕೈ ಹಿಡಿಯಲಿದ್ದಾರೆ ಗೀತಾ ಶಿವರಾಜ್ ಕುಮಾರ್ | Filmibeat Kannada

  ನವ್ಯಾ ನಂದ ಅವರು ತಮ್ಮ ತಂದೆ ನಿಖಿಲ್ ನಂದಾ ಅವರಿಗೆ ಉದ್ಯಮದಲ್ಲಿ ಸಹಾಯ ಮಾಡಲಿದ್ದಾರಂತೆ. ನಿಖಿಲ್ ನಂದಾ ಅವರು 'ಎಸ್ಕಾರ್ಟ್ ಗ್ರೂಪ್' ನ ಮಾಲೀಕರು. ನವ್ಯಾ ಅವರ ಹೆಸರು ಜಾವೇದ್ ಜೆಫ್ರಿ ಮಗ ಮೀಜಾನ್ ಜೆಫ್ರಿ ಜೊತೆಗೆ ಇತ್ತೀಚೆಗೆ ಕೇಳಿಬರುತ್ತಿದೆ.

  English summary
  Amitabh Bachchan's daughter in law Navya Naveli Nanda spreading awareness about teenage pregnancy and adolescent sex rights and health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X