»   » ಬಿಟೌನ್ ವರ್ಣಬೇಧದ ಕುರಿತು ಬೇಸರಗೊಂಡ ನವಾಜುದ್ದೀನ್ ಸಿದ್ದಿಕಿ

ಬಿಟೌನ್ ವರ್ಣಬೇಧದ ಕುರಿತು ಬೇಸರಗೊಂಡ ನವಾಜುದ್ದೀನ್ ಸಿದ್ದಿಕಿ

Posted By:
Subscribe to Filmibeat Kannada

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಬಿಟೌನ್ ನಲ್ಲಿನ ವರ್ಣಬೇಧದ ಕುರಿತು ಸಾಮಾಜಿಕ ಜಾಲತಾಣ ಟ್ಟಿಟ್ಟರ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

'ತುಂಬಾ ಸುಂದರ ಮತ್ತು ಹ್ಯಾಂಡ್‌ಸಮ್ ಕಲಾವಿದರೊಂದಿಗೆ ನಾನು ನಟಿಸಲು ಯೋಗ್ಯನಲ್ಲ, ಕಾರಣ ನಾನು ಕಪ್ಪಗಿದ್ದು ನೋಡಲು ಸಹ ಚೆನ್ನಾಗಿ ಕಾಣುವುದಿಲ್ಲ ಎಂಬುದನ್ನು ಅರಿವು ಮಾಡಿಕೊಟ್ಟಿದಕ್ಕೆ ಧನ್ಯವಾದಗಳು. ಆದರೆ ಎಂದಿಗೂ ನಾನು ಆ ಬಗ್ಗೆ ಗಮನಹರಿಸಿಲ್ಲ' ಎಂದು ನವಾಜುದ್ದೀನ್ ಸಿದ್ದಿಕಿ ಟ್ವೀಟ್ ಮಾಡಿದ್ದಾರೆ. ಆದರೆ ನಟ ಯಾವ ಹಿನ್ನೆಲೆಯಲ್ಲಿ ಈ ರೀತಿ ಟ್ವೀಟ್ ಮಾಡಿದ್ದಾರೆ, ಕಾರಣ ಏನು ಎಂಬುದು ಮಾತ್ರ ತಿಳಿದಿಲ್ಲ.

ನವಾಜುದ್ದೀನ್ ರವರ ಈ ಟ್ವೀಟ್ ನಿಂದ ಈಗ ಬಾಲಿವುಡ್ ಚಿತ್ರರಂಗದ ಬಗ್ಗೆ ಹೊಸ ಪ್ರಶ್ನೆಯೊಂದು ಹುಟ್ಟಿದ್ದು, ಅಲ್ಲಿನ ಚಿತ್ರರಂಗದಲ್ಲಿ ಪ್ರತಿಭೆಗಿಂತ ಸೌಂದರ್ಯಕ್ಕೆ ಮಣೆ ಹಾಕಲಾಗುತ್ತದೆಯೇ? ಎಂಬುದು ಹಲವರಿಗೆ ಕಾಡುತ್ತಿದೆ. ಆದರೆ ಇದೇ ನವಾಜುದ್ದೀನ್ ಹಿಂದೊಮ್ಮೆ ಬಾಲಿವುಡ್ ನಲ್ಲಿ ಪ್ರತಿಭೆಗೆ ಹೆಚ್ಚು ಬೆಲೆಯಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.

Nawazuddin Siddiqui calls out racism in his tweet

'ಧರ್ಮ' ಯಾವುದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಿಸಿದ ನವಾಜುದ್ದೀನ್

ನಟನ ವರ್ಣಬೇಧ ಕುರಿತ ಈ ಟ್ವೀಟ್ ಗೆ ಹಲವರು ಬೆಂಬಲಿಸಿದ್ದು, 6 ಸಾವಿರ ಕ್ಕಿಂತ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ. ಅದಕ್ಕೆ 25 ಸಾವಿರ ಕ್ಕಿಂತ ಹೆಚ್ಚು ಲೈಕ್ ಗಳು ಸಿಕ್ಕಿವೆ.

English summary
Bollywood Actor Nawazuddin Siddiqui has taken his twitter account to give his feedback on Bollywood racism.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada