ತಮ್ಮನಿಂದ ದ್ರೋಹ, ಪತ್ನಿಯಿಂದ ಮಾನಹಾನಿ; 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನವಾಜುದ್ದೀನ್ ಸಿದ್ದಿಕಿ!

ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಕಳೆದ ಎರಡು ಮೂರು ವಾರಗಳ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ನವಾಜುದ್ದೀನ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದರೆ, ಇದೀಗ ನವಾಜುದ್ದೀನ್ ಸಿದ್ದಿಕಯೇ ಈ ಎಲ್ಲಾ ಆರೋಪಗಳ ವಿರುದ್ಧ ಕಿಡಿಕಾರಿದ್ದು ಅವೆಲ್ಲವೂ ಸುಳ್ಳು ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಕೇವಲ ಆಲಿಯಾ ಸಿದ್ದಿಕಿ ವಿರುದ್ಧ ಮಾತ್ರವಲ್ಲದೇ ತನ್ನ ತಮ್ಮ ಶಂಶುದ್ದೀನ್ ಸಿದ್ದಿಕಿ ವಿರುದ್ಧವೂ ಸಹ ನವಾಜುದ್ದೀನ್ ಸಿದ್ದಿಕಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತನ್ನ ತಮ್ಮ ತನಗೆ ಮೋಸ ಎಸಗಿದ್ದಾನೆ ಹಾಗೂ ಪತ್ನಿ ಆಲಿಯಾ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾಳೆ ಮತ್ತು ತಪ್ಪಾದ ಹೇಳಿಕೆಗಳನ್ನು ನೀಡಿ ತನ್ನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ. ಹೀಗಾಗಿ ಈ ಇಬ್ಬರ ವಿರುದ್ಧವೂ ಸಹ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.

Nawazuddin Siddiqui files 100 crore rupees defamation case against his wife and brother

ಅಲ್ಲದೇ ಕೋರ್ಟ್ ಇವರಿಬ್ಬರನ್ನೂ ಸಹ ಇನ್ನಷ್ಟು ಮಾನಹಾನಿ ಮಾಡದಂತೆ ತಡೆಯಬೇಕು ಎಂದು ನವಜುದ್ದೀನ್ ಸಿದ್ದಿಕಿ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನೆಲ್ಲಾ ಹಿಂಪಡೆದು ಕ್ಷಮಾಪಣೆ ಕೇಳಬೇಕು ಎಂದೂ ಸಹ ನವಾಜುದ್ದೀನ್ ಸಿದ್ದಿಕಿ ಆಗ್ರಹಿಸಿದ್ದಾರೆ.

ಪತ್ನಿ ಆಲಿಯಾ ಸಿದ್ದಿಕಿ ತನ್ನ ವಿರುದ್ಧ ಕಿರುಕುಳದ ಆರೋಪ ಮಾಡಿರುವುದು ಹಾಗೂ ತನ್ನ ಕುಟುಂಬದ ವಿರುದ್ಧ ಕಿರುಕುಳದ ಆರೋಪ ಮಾಡಿರುವುದೆಲ್ಲಾ ಸುಳ್ಳು ಎಂದಿರುವ ನವಾಜುದ್ದೀನ್ ಸಿದ್ದಿಕಿ ತನ್ನ ತಮ್ಮ ಶಂಶುದ್ದೀನ್ ಸಿದ್ದಿಕಿ ತನಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

2008ರಲ್ಲಿ ಕೆಲಸವಿಲ್ಲದೇ ನಿರೋದ್ಯೋಗಿಯಾಗಿದ್ದ ಶಂಶುದ್ದೀನ್ ಸಿದ್ದಿಕಿಯನ್ನು ನಾನೇ ನನ್ನ ಹಣಕಾಸು ವ್ಯವಹಾರ, ಆಡಿಟ್, ಬ್ಯಾಂಗ್ ಹಾಗೂ ಆಸ್ತಿಯನ್ನು ನೋಡಿಕೊಳ್ಳಲು ನೇಮಿಸಿಕೊಂಡು ಕೆಲಸಕೊಟ್ಟಿದ್ದೆ. ಆದರೆ ಆತ ನನಗೆ ಮೋಸ ಮಾಡಿಬಿಟ್ಟ. ನಾನು ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದಾಗ ಇಲ್ಲಿನ ವ್ಯವಹಾರಗಳ ಬಗ್ಗೆ ಹೆಚ್ಚಾಗಿ ನಿಗಾ ವಹಿಸಲು ಸಾಧ್ಯವಾಗುತ್ತಿರಲಿಲ್ಲ, ನಿನ್ನ ಹೆಸರಿನಲ್ಲಿ ಆಸ್ತಿ ಖರೀದಿಸುತ್ತೇನೆ ಎಂದು ಹೇಳಿ ಆತನ ಹೆಸರಿನಲ್ಲಿಯೂ ಹಲವಾರು ಆಸ್ತಿಯನ್ನು ಖರೀದಿಸಿದ್ದಾನೆ ಹಾಗೂ ನನ್ನ ಹೆಸರಿನಲ್ಲಿ ಆಸ್ತಿ ಖರೀದಿಸುವಾಗ ಆತನ ಹೆಸರನ್ನೂ ಸಹ ಸೇರ್ಪಡೆಗೊಳಿಸಿದ್ದಾನೆ ಎಂದು ನವಾಜುದ್ದೀನ್ ಸಿದ್ದಿಕಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇನ್ನು ನವಾಜುದ್ದೀನ್ ಸಿದ್ದಿಕಿ ಸಲ್ಲಿಸಿರುವ ಈ ದೂರಿನ ಅರ್ಜಿಯನ್ನು ಕೋರ್ಟ್ ಇದೇ ತಿಂಗಳ 30ರಂದು ವಿಚಾರಣೆ ನಡೆಸಲಿದ್ದು, ಯಾವ ರೀತಿಯ ತೀರ್ಪನ್ನು ನೀಡುತ್ತದೆಯೋ ಕಾದು ನೋಡಬೇಕಿದೆ. ನಿಜಕ್ಕೂ ನವಾಜುದ್ದೀನ್ ಸಿದ್ದಿಕಿ ತಮ್ಮ ಪತ್ನಿ ಆಲಿಯಾ ಸಿದ್ದಿಕಿಗೆ ಕಿರುಕುಳ ನೀಡಿದ್ರಾ ಅಥವಾ ಹಾಲಿವುಡ್ ನಟ ಜಾನಿ ಡೆಪ್ ಮೇಲೆ ಆಂಬರ್ ಹರ್ಡ್ ಮಾಡಿದ್ದ ರೀತಿಯೇ ಇದೂ ಸಹ ನಕಲಿ ಆರೋಪನಾ ಎಂಬುದು ಕೋರ್ಟ್ ವಿಚಾರಣೆ ಬಳಿಕವಷ್ಟೇ ತಿಳಿದು ಬರಲಿದೆ.

ಆಲಿಯಾ ಸಿದ್ದಿಕಿ ಮಾಡಿದ ಆರೋಪಗಳಿವು: ಇನ್ನು ನವಾಜುದ್ದೀನ್ ಸಿದ್ದಿಕಿ ಇಷ್ಟರ ಮಟ್ಟಿಗೆ ಸಿಟ್ಟಿಗೇಳಲು ಕಾರಣ ಆಲಿಯಾ ಸಿದ್ದಿಕಿ ನೀಡಿದ್ದ ಅತ್ಯಾಚಾರದ ಹೇಳಿಕೆ. ಹೌದು, ತನ್ನ ಪತಿ ನವಾಜುದ್ದೀನ್ ಸಿದ್ದಿಕಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆಲಿಯಾ ಸಿದ್ದಿಕಿ ಆರೋಪ ಮಾಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಳುತ್ತಾ ನವಾಜುದ್ದೀನ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ರು. ಆತ ಮಕ್ಕಳನ್ನು ಪ್ರಭಾವದಿಂದ ನನ್ನಿಂದ ಕಿತ್ತುಕೊಂಡಿದ್ದಾನೆ ಎಂದೂ ಸಹ ಆಲಿಯಾ ಸಿದ್ದಿಕಿ ಆರೋಪಿಸಿದ್ದರು.

More from Filmibeat

English summary
Nawazuddin Siddiqui files 100 crore rupees defamation case against his wife and brother . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X