»   » 'ಧರ್ಮ' ಯಾವುದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಿಸಿದ ನವಾಜುದ್ದೀನ್

'ಧರ್ಮ' ಯಾವುದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಿಸಿದ ನವಾಜುದ್ದೀನ್

Posted By:
Subscribe to Filmibeat Kannada

ಇತ್ತೀಚೆಗೆ ಬಾಲಿವುಡ್ ನಟರು ಸಹ ತಮ್ಮ ಕೆಲವು ಹೇಳಿಕೆಗಳು ಮತ್ತು ಕೆಲಸಗಳಿಂದ ಅಸಮಾಧಾನಕ್ಕೆ ಗುರಿಯಾಗುತ್ತಿದ್ದಾರೆ. ಅದು ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದಿಂದ ಹಿಡಿದು ಗಾಯಕ ಸೋನು ನಿಗಂ ರ 'ಅಜಾನ್' ವಿವಾದದ ಹಿನ್ನೆಲೆಯಲ್ಲಿ ಬಿ ಟೌನ್ ಅಂಗಳವು ಸ್ವಲ್ಪ ಮಟ್ಟಿಗೆ ಈಗ ಯುದ್ಧಭೂಮಿ ವಾತಾವರಣವನ್ನು ಸೃಷ್ಟಿಸಿದೆ.

ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಕಂದ್ರೆ ಈ ವಿಡಿಯೋ ಜಾತ್ಯಾತೀತತೆ ಕುರಿತ ಅಂಶಗಳನ್ನು ಹೊಂದಿದೆ. ವಿಶೇಷ ಅಂದ್ರೆ ನವಾಜುದ್ದೀನ್ ವಿಡಿಯೋದಲ್ಲಿ ವಿವಿಧ ವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಇರುವುದಾದರೂ ಏನು ಅಂತಿರಾ? ಮುಂದೆ ಓದಿ..

16.66% ಹಿಂದು

ವಿಡಿಯೋ ಆರಂಭವಾಗುತ್ತಿದ್ದಂತೆ ಕುರ್ತಾ ಪೈಜಾಮ ಜೊತೆಗೆ ಸಫ್ರಾನ್ ವಸ್ತ್ರದಲ್ಲಿ ಕಾಣಿಸಿಕೊಂಡಿರುವ ನವಾಜುದ್ದೀನ್ ಸಿದ್ದಿಖಿ ಪ್ರಕಟಣ ಪತ್ರವೊಂದನ್ನು ಹಿಡಿದು ತಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಅವರು ತೋರಿಸುವ ಪ್ಲಕಾರ್ಡ್ ನಲ್ಲಿ '16.66% ಹಿಂದು' ಎಂದು ಬರೆದಿದೆ.[1 ರೂಗೆ ಚಿತ್ರದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ]

16.66% ಮುಸ್ಲಿಂ

ನಂತರದಲ್ಲಿ ಮುಸ್ಲಿಂ ವೇಶದಲ್ಲಿ ಕಾಣಿಸಿಕೊಂಡು ಪ್ಲಕಾರ್ಡ್ ನಲ್ಲಿ '16.66% ಮುಸ್ಲಿಂ' ಎಂದು ತೋರಿಸಿದ್ದಾರೆ.

16.66% ಸಿಖ್

ಕೆಂಪು ಟರ್ಬನ್ ಧರಿಸಿ, ದಪ್ಪ ಮೀಸೆ ಬಿಟ್ಟು ಪ್ಲಕಾರ್ಡ್ ಹಿಡಿದು '16.66% ಸಿಖ್' ಎಂದು ಪ್ರದರ್ಶಿಸಿದ್ದಾರೆ.

16.66% ಕ್ರಿಶ್ಚಿಯನ್

ನಂತರ ಕ್ರಿಶ್ಚಿಯನ್ ವೇಶದಲ್ಲಿಯೂ ಕಾಣಿಸಿಕೊಂಡು '16.66% ಕ್ರಿಶ್ಚಿಯನ್' ಎಂದು ಬರೆದ ಪ್ಲಕಾರ್ಡ್ ಸಹ ತೋರಿಸಿದ್ದಾರೆ.

ಬುದ್ಧಿಸ್ಟ್

ಮೇಲಿನ ವೇಶಗಳು ಮಾತ್ರವಲ್ಲದೇ ಬೌದ್ಧ ಸನ್ಯಾಸಿ ವೇಶದಲ್ಲಿ ಕಾಣಿಸಿಕೊಂಡು ತಾವು '16.66% ಬುದ್ಧಿಸ್ಟ್' ಎಂದು ತೋರಿಸಿದ್ದಾರೆ. ಆದ್ರೆ ಕೊನೆಯಲ್ಲಿ ನವಾಜುದ್ದೀನ್ ಸಿದ್ದಿಕಿ ನೀಡಿದ ರಿಸಲ್ಟ್ ಏನು ಗೊತ್ತೇ?

ಅಂತಿಮವಾಗಿ ತಿಳಿದಿದ್ದು....

ನವಾಜುದ್ದೀನ್ ತಮ್ಮ ವಿಡಿಯೋದಲ್ಲಿ ಅಂತಿಮವಾಗಿ ತೋರಿಸಿದ್ದು ಕಲಾವಿದರಿಗೆ ಯಾವುದೇ ಜಾತಿ, ಮತ, ಧರ್ಮದ ಬೇಲಿ ಇಲ್ಲ ಎಂಬುದನ್ನು. ಅದು "ನನ್ನ ಆತ್ಮವನ್ನು ಸಂಪೂರ್ಣವಾಗಿ ನಾನು ಪತ್ತೆಮಾಡಿದಾಗ, ನನಗೆ ತಿಳಿದಿದ್ದು, ನಾನು 100% ಕಲಾವಿದ" ಎಂಬುದನ್ನು ಪ್ರದರ್ಶನ ಮಾಡಿದ್ದಾರೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ

English summary
Actor Nawazuddin Siddiqui has shared a video on Twitter where he talks about what religion he actually belongs to.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada