ಪತ್ನಿಯ ಮೇಲೆ ನಿಗಾ ವಹಿಸಲು ಗೂಢಚಾರರನ್ನು ನೇಮಿಸಿದ್ದರು ಈ ನಟ!

By Avani Malnad

ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿರುವ ನಟ ನವಾಜುದ್ದೀನ್ ಸಿದ್ದಿಕಿ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಪತ್ನಿ ಆಲಿಯಾ ಸಿದ್ದಿಕಿ ಮತ್ತು ನವಾಜುದ್ದೀನ್ ಕಿತ್ತಾಟ ಬಯಲಿಗೆ ಬಂದಿದೆ. ಆದರೆ ಅವರ ನಡುವಿನ ಕಿತ್ತಾಟ ಇಂದು ನಿನ್ನೆಯದ್ದಲ್ಲ. ಮದುವೆಯಾದ ಸಂದರ್ಭದಿಂದಲೇ 11 ವರ್ಷಗಳಿಂದ ಇಬ್ಬರ ನಡುವೆ ವೈಮನಸ್ಸು ಇದೆ. ತಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಪತ್ನಿ ಏನೇನು ಮಾಡುತ್ತಾರೆ ಎಂಬುದನ್ನು ಗಮನಿಸಲು ಗೂಢಚಾರರನ್ನು ನವಾಜುದ್ದೀನ್ ನೇಮಿಸಿದ್ದರಂತೆ.

Recommended Video

ತೀರಿಕೊಂಡ ತಂದೆಯ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಶುಭಕೋರಿದ ಸ್ಟಾರ್ ನಟ | FILMIBEAT KANNADA

ವಯಸ್ಸಾದ ಅಮ್ಮನನ್ನು ನೋಡಿಕೊಳ್ಳಲು ನವಾಜುದ್ದೀನ್ ಸಿದ್ದಿಕಿ ತವರೂರಿಗೆ ತೆರಳಿರುವಾಗಲೇ ಆಲಿಯಾ ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಡೈವೋರ್ಸ್ ಪತ್ರ ಕಳುಹಿಸಿದ್ದರು. ಅದರ ಬೆನ್ನಲ್ಲೇ ನವಾಜುದ್ದೀನ್ ಮತ್ತು ಅವರ ಸಹೋದರನ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದರು. ಮುಂದೆ ಓದಿ...

ಅಂಜಲಿ ಜತೆ ಪ್ರೇಮ ವಿವಾಹ

ಅಂಜಲಿ ಜತೆ ಪ್ರೇಮ ವಿವಾಹ

ನಟಿ ಸುನಿತಾ ರಾಜ್ವಾರ್, ನವಾಜುದ್ದೀನ್ ಸಿದ್ದಿಕಿ ಅವರ ಮೊದಲ ಪ್ರೇಯಸಿ ಎನ್ನುವುದು ಬಹಿರಂಗವಾಗಿತ್ತು. ನಂತರ ಕೆಲವು ಸಮಯ ನಿಹಾರಿಕಾ ಸಿಂಗ್ ಜತೆ ಡೇಟಿಂಗ್ ನಡೆಸಿದ್ದ ನವಾಜುದ್ದೀನ್, ನಂತರ ಅಂಜಲಿ ಅಲಿಯಾಸ್ ಆಲಿಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಗೂಢಚಾರರ ನೇಮಕ

ಗೂಢಚಾರರ ನೇಮಕ

ಮದುವೆಯಾದ ವರ್ಷದಲ್ಲಿಯೇ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತ್ತು. ಇದು ಅಂದಿನಿಂದಲೂ ಸುದ್ದಿಯಾಗುತ್ತಲೇ ಇತ್ತು. ಪತ್ನಿಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ನವಾಜುದ್ದೀನ್ ಹಣ ನೀಡಿ ಗೂಢಚಾರರನ್ನು ನೇಮಿಸಿಕೊಂಡಿದ್ದರು. ಪತ್ನಿಯ ದೂರವಾಣಿ ಕರೆಗಳನ್ನು ದಾಖಲಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಪತಿ ಬೆಂಬಲಿಸಿದ್ದ ಆಲಿಯಾ

ಪತಿ ಬೆಂಬಲಿಸಿದ್ದ ಆಲಿಯಾ

ಆದರೆ ಈ ಆರೋಪ ಉಂಟಾದಾಗ ಸ್ವತಃ ಆಲಿಯಾ, ಪತಿ ನವಾಜುದ್ದೀನ್ ಬೆಂಬಲಕ್ಕೆ ಬಂದಿದ್ದರು. ನಮ್ಮ ವಿಚ್ಚೇದನದ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ರೀತಿಯ ಸುದ್ದಿ ಇಬ್ಬರಿಗೂ ಆಘಾತ ಉಂಟುಮಾಡಿದೆ. ಪತಿ ಅಮಾಯಕ. ಅವರು ಸೆಲೆಬ್ರಿಟಿಯಾಗಿರುವ ಕಾರಣಕ್ಕೆ ಈ ರೀತಿಯ ವಿವಾದ ಸೃಷ್ಟಿಸಲಾಗಿದೆ. ಶೀಘ್ರದಲ್ಲಿಯೇ ಸತ್ಯ ಹೊರಬರಲಿದೆ ಎಂದು ಆಲಿಯಾ ಹೇಳಿದ್ದರು.

ಮಕ್ಕಳಿಗೆ ಎಷ್ಟು ದಿನ ಸುಳ್ಳು ಹೇಳಲಿ?

ಮಕ್ಕಳಿಗೆ ಎಷ್ಟು ದಿನ ಸುಳ್ಳು ಹೇಳಲಿ?

ಈ ಗೂಢಚಾರಿಕೆ ಪ್ರಕರಣದ ಕಥೆ ಏನಾಯಿತು ಎಂಬುದು ಗೊತ್ತಾಗಲಿಲ್ಲ. ಆದರೆ ಡೈವೋರ್ಸ್ ಕುರಿತಾದ ಸುದ್ದಿ ಎರಡು ವರ್ಷಗಳ ನಂತರ ಖಚಿತವಾಗಿದೆ. 'ನಾಲ್ಕು ವರ್ಷಕ್ಕೂ ಹೆಚ್ಚು ಸಮಯದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಮಕ್ಕಳನ್ನು ನೋಡಲು ಬರುವಂತೆ ಕೇಳಿದಾಗಲೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಅಪ್ಪ ಎಲ್ಲಿ ಎಂದು ಮಕ್ಕಳು ಕೇಳುತ್ತಲೇ ಇರುತ್ತಾರೆ. ಆದರೆ ನಾನು ಅವರಿಗೆ ಏನೂ ಹೇಳಿಲ್ಲ. ಅಮೆರಿಕದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳಿ ಸುಮ್ಮನಾಗಿಸುತ್ತಿದ್ದೇನೆ. ಆದರೆ ಎಷ್ಟು ವರ್ಷ ಹೀಗೆ ಸುಳ್ಳು ಹೇಳಲಿ?' ಎಂದು ಆಲಿಯಾ ಹೇಳಿದ್ದಾರೆ.

More from Filmibeat

English summary
Bollywood actor Nawazuddin Siddiqui once faced an allegation as he was hired a detective to spy his wife Aaliya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X