»   » 1 ರೂಗೆ ಚಿತ್ರದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ

1 ರೂಗೆ ಚಿತ್ರದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ

Posted By:
Subscribe to Filmibeat Kannada

ಬಾಲಿವುಡ್ ನಟರು ಒಂದು ಚಿತ್ರದಲ್ಲಿ ನಟಿಸಲು ಎಂತಹವರೇ ಆದರೂ ಲಕ್ಷ ಮತ್ತು ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಇಂತಹ ಟ್ರೆಂಡ್ ಇರುವಾಗಲೂ ನಟ ನವಾಜುದ್ದೀನ್ ಸಿದ್ದಿಖಿ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ಇತ್ತೀಚೆಗೆ ತೆರೆಕಂಡ ಚಿತ್ರವೊಂದರಲ್ಲಿ ನಟಿಸಿದ್ದಾರೆ.

ನವಾಜುದ್ದೀನ್ ಸಿದ್ದಿಖಿ ಒಂದು ರೂಪಾಯಿಗೆ ಸಿನಿಮಾ ದಲ್ಲಿ ನಟಿಸಿದ್ರು ಅಂದ್ರೆ ಎಲ್ಲರಿಗೂ ಆಶ್ಚರ್ಯ ಆಗೋದು ನಿಜ. ಆದ್ರೆ ಸಿದ್ದಿಖಿ ಇತ್ತೀಚೆಗೆ ತೆರೆಕಂಡ 'ಹರಾಮ್‌ ಕೋರ್' ಎಂಬ ಚಿತ್ರಕ್ಕೆ ಈ ಸಂಭಾವನೆ ಪಡೆದಿದ್ದರೂ. ಉತ್ತಮ ಚಿತ್ರಕ್ಕೆ ಪ್ರೋತ್ಸಾಹ ಸಿಗಬೇಕು ಎಂಬ ಕಾರಣದಿಂದ ಕೇವಲ ಒಂದು ರೂಪಾಯಿ ಟೋಕನ್ ಹಣ ಪಡೆದಿದ್ದರಂತೆ.

Nawazuddin Siddiqui Paid one rupee for Haraamkhor film

'ಹರಾಮ್‌ಕೋರ್' ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಖಿ ಜೊತೆ ನಾಯಕ ನಟಿಯಾಗಿ ಶ್ವೇತಾ ತ್ರಿಪಾಠಿ ಅಭಿನಯಿಸಿದ್ದಾರೆ. ಈ ಚಿತ್ರ ನಿರ್ಮಾಣ ಮಾಡುವುದು ಶ್ಲೋಕ್‌ ಶರ್ಮಾ ಅವರ ಕನಸಾಗಿತ್ತಂತೆ. ಆದ್ದರಿಂದ ಉತ್ತಮ ಚಿತ್ರ ಎಂಬ ಕಾರಣದಿಂದ ನವಾಜುದ್ದೀನ್ ಸಿದ್ದಿಖಿ ಮಾತ್ರವಲ್ಲದೇ ಚಿತ್ರದಲ್ಲಿ ನಟಿಸಿದ ಇತರೆ ನಟ ನಟಿಯರು ಕಡಿಮೆ ಸಂಭಾವನೆ ಪಡೆದು ಅಭಿನಯಿಸಿದ್ದಾರೆ.

Nawazuddin Siddiqui Paid one rupee for Haraamkhor film

ಅಂದಹಾಗೆ ಶಿಕ್ಷಕ ಮತ್ತು ವಿದ್ಯಾರ್ಥಿನಿ ಇಬ್ಬರ ನಡುವಿನ ಪ್ರೇಮ ಕಥೆ ಹೊಂದಿರುವ ಈ ಸಿನಿಮಾ ಗೆ ಶ್ಲೋಕ್ ಶರ್ಮಾ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು, ಗುನೀತ್ ಮೋಂಗಾ ಸಂಗೀತ ಸಂಯೋಜನೆ ನೀಡಿದ್ದಾರೆ.

English summary
Nawazuddin Siddiqui Paid one rupee for a film. Here is in which movie Siddiqui acted for one rupee.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada