ನವಾಜುದ್ದೀನ್ ಸಿದ್ದಿಕಿ ದಾಂಪತ್ಯದಲ್ಲಿ ಬಿರುಗಾಳಿ: ಸತ್ಯ ಹೇಳೋಕೆ ಟ್ವಿಟ್ಟರ್ ಖಾತೆ ತೆರೆದ ಸಿದ್ದಿಕಿ ಪತ್ನಿ

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಸಿದ್ದಿಕಿ ಪತ್ನಿ ಆಲಿಯಾ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇಬ್ಬರ ಡೈವೋರ್ಸ್ ವಿಚಾರ ಬಹಿರಂಗ ವಾಗುತ್ತಿದ್ದಂತೆ, ಇಬ್ಬರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡಲು ಪ್ರಾರಂಭಿಸಿದೆ.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopal Varma

ಆಲಿಯಾ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ, ಹಾಗಾಗಿಯೇ ಇಬ್ಬರ ದಾಂಪತ್ಯ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸಿದ್ದಿಕ್ಕಿ ಹೆಸರು, ಸಹ ಕಲಾವಿದೆಯ ಜೊತೆ ಕೇಳಿ ಬರುತ್ತಿದೆ. ಹೀಗೆ ಇಬ್ಬರ ಬಗ್ಗೆಯೂ ತರವೇವಾರಿ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿದ್ದಿಕಿ ಪತ್ನಿ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ...

ಟ್ವಿಟ್ಟರ್ ಖಾತೆ ತೆರೆದ ಆಲಿಯಾ

ಟ್ವಿಟ್ಟರ್ ಖಾತೆ ತೆರೆದ ಆಲಿಯಾ

ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ, ನವಾಜುದ್ದೀನ್ ಸಹೋದರನ ಮೇಲು ಕಿರುಕುಳದ ಆರೋಪ ಮಾಡಿದ್ದಾರೆ. ಇಬ್ಬರ ನಡುವೆ ಆರೋಪ ಮತ್ತು ಪ್ರತ್ಯಾರೋಪದ ಸುದ್ದಿಗಳು ವೈರಲ್ ಆಗುತ್ತಿವೆ. ಈ ನಡುವೆ ಸಿದ್ದಿಕಿ ಪತ್ನಿ ಆಲಿಯಾ ಸತ್ಯವನ್ನು ಹೇಳಬೇಕಿದೆ ಎಂದು ಟ್ವಿಟ್ಟರ್ ಖಾತೆ ತೆರೆದಿದ್ದಾರೆ.

ಆರೋಪವನ್ನು ತಳ್ಳಿ ಹಾಕಿದ ಸಿದ್ದಕಿ ಪತ್ನಿ

ಆರೋಪವನ್ನು ತಳ್ಳಿ ಹಾಕಿದ ಸಿದ್ದಕಿ ಪತ್ನಿ

ಆಲಿಯಾ ಬಗ್ಗೆ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಆಲಿಯಾ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧವಿದೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ. ಕೆಲವು ಫೋಟೋಗಳನ್ನು ಇಟ್ಟುಕೊಂಡು ಇಂತಹ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಸತ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ

ಸತ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ

"ಅಧಿಕಾರದ ದುರುಪಯೋಗದಿಂದ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ, ಸತ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ಮಕ್ಕಳ ಸಲುವಾಗಿ ನಾನು ನನ್ನ ಬಗ್ಗೆ ಮಾತನಾಡಲು ಕಲಿಯುತ್ತಿದ್ದೀನಿ. ಇದುವರೆಗೂ ನಾನು ಯಾವುದೆ ತಪ್ಪು ಮಾಡಿಲ್ಲ. ಯಾರನ್ನೊ ಕಾಪಾಡಲು ನನ್ನ ಖ್ಯಾತಿ ಮತ್ತು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವವರನ್ನು ಯಾರನ್ನೂ ಪ್ರಶಂಸಿಸುವುದಿಲ್ಲ" ಎಂದು ಉತ್ತರ ನೀಡಿದ್ದಾರೆ.

10 ವರ್ಷದ ದಾಂಪತ್ಯ

10 ವರ್ಷದ ದಾಂಪತ್ಯ

ನವಾಜುದ್ದೀನ್ ಸಿದ್ಧಿಕಿ ಮತ್ತು ಆಲಿಯಾ ದಾಂಪತ್ಯ ಜೀವನಕ್ಕೆ 10 ವರ್ಷ ತುಂಬಿದೆ. ಆಲಿಯಾ ಮೊದಲ ಹೆಸರು ಅಂಜನಾ ಪಾಂಡೆ. ಇಬ್ಬರ 10 ವರ್ಷಗಳ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ನವಾಜುದ್ದೀನ್ ಹುಟ್ಟುಹಬ್ಬದಂದೇ ಆಲಿಯಾ ವಿಚ್ಚೇದನ ನೀಡುವುದಾಗಿ ಹೇಳಿ ಆಘಾತಕಾರಿ ಸುದ್ದಿ ಬಹಿರಂಗ ಪಡಿಸಿದ್ದಾರೆ.

More from Filmibeat

English summary
Bollywood Actor Nawazuddin Siddiqui's wife Aaliya joins twitter for speak for herself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X