For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಅತ್ಯಾಚಾರ ಮತ್ತು ವಂಚನೆ ದೂರು ದಾಖಲು

  |

  ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಪತ್ನಿ ಅಲಿಯಾ ಅತ್ಯಾಚಾರ ಮತ್ತು ವಂಚನೆ ದೂರು ನೀಡಿದ್ದಾರೆ. ಮುಂಬೈ ಉಪನಗರ ವರ್ಸೋವಾ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  2020 ಮೇ ತಿಂಗಳಲ್ಲಿ ಅಲಿಯಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿದ್ದರು. ಇಬ್ಬರ ದಾಂಪತ್ಯ ಜೀವನ ಕೋರ್ಟ್ ಮೆಟ್ಟಿಲೇರುತಿದ್ದಂತೆ ಇಬ್ಬರು ಬಹಿರಂಗವಾಗಿಯೇ ಕಿತ್ತಾಡಲು ಪ್ರಾರಂಭಿಸಿದರು. ಬಳಿಕ ಅಲಿಯಾ ಪತಿ ಸಿದ್ಧಕಿ ಮತ್ತು ಅವರ ಕುಟುಂಬದ ನಾಲ್ಕು ಜನರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ, ಮಾನಸಿಕ ಹಿಂಸೆ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಬುದಾನಾ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದರು. ಮುಂದೆ ಓದಿ...

  ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಗೆ ಹುಟ್ಟುಹಬ್ಬದಂದೇ ಆಘಾತ ನೀಡಿದ ಪತ್ನಿಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಗೆ ಹುಟ್ಟುಹಬ್ಬದಂದೇ ಆಘಾತ ನೀಡಿದ ಪತ್ನಿ

  ನವಾಜುದ್ದೀನ್ ಸಿದ್ಧಿಕಿ ಸಹೋದರ ಶಮಾಸ್ ಪ್ರತಿಕ್ರಿಯೆ

  ನವಾಜುದ್ದೀನ್ ಸಿದ್ಧಿಕಿ ಸಹೋದರ ಶಮಾಸ್ ಪ್ರತಿಕ್ರಿಯೆ

  ಈ ಬಗ್ಗೆ ನಟ ನವಾಜುದ್ದೀನ್ ಸಿದ್ಧಿಕಿ ಸಹೋದರ ಶಮಾಸ್ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕ ಲಾಭಕ್ಕಾಗಿ ಅಲಿಯಾ ಇದೆಲ್ಲವನ್ನು ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಅಲಿಯಾ ಮಾಡಿರುವ ಆರೋಪ ಸುಳ್ಳು ಇದರ ವಿರುದ್ಧ ಮುಂಬೈ ಹೈ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

  ನಟಿಯೊಂದಿಗಿನ ಸಂಬಂಧವೇ ನವಾಜುದ್ದಿನ್ ಸಿದ್ಧಿಕಿ ದಾಂಪತ್ಯಕ್ಕೆ ಮುಳುವಾಯಿತೆ?ನಟಿಯೊಂದಿಗಿನ ಸಂಬಂಧವೇ ನವಾಜುದ್ದಿನ್ ಸಿದ್ಧಿಕಿ ದಾಂಪತ್ಯಕ್ಕೆ ಮುಳುವಾಯಿತೆ?

  ಶಮಾಸ್ ಗೆ ತಿರುಗೇಟು ನೀಡಿದ ಸಿದ್ಧಿಕಿ ಪತ್ನಿ

  ಶಮಾಸ್ ಗೆ ತಿರುಗೇಟು ನೀಡಿದ ಸಿದ್ಧಿಕಿ ಪತ್ನಿ

  ಪತಿಯ ಸಹೋದರ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅಲಿಯಾ, "ನಾವು ಒಟ್ಟಿಗೆ ಮ್ಯಾಜಿಕ್ ಇಫ್ ಫಿಲ್ಮ್ಸ್ ಕಂಪನಿಯನ್ನು ನಡೆಸುತ್ತಿದ್ದೇವೆ. ನಾನು, ನವಾಜ್ ಮತ್ತು ಶಮಾಸ್ ಪಾಲುದಾರರು. ನಾನು ಇನ್ನೂ 25ರಷ್ಟು ಪಾಲುದಾರಳಾಗಿದ್ದೇನೆ. ಈ ಕಂಪನೆಯಿಂದ ನಾನು ಹಣ ಪಡೆದರೆ ಅದು ಹೇಗೆ ಶಮಾಸ್ ಹಣ ಆಗುತ್ತೆ? ಅವರೇ ನವಾಜುದ್ದೀನ್ ಹಣದಿಂದ ಉಳಿದುಕೊಂಡಿದ್ದಾರೆ. ನಾನು ನನ್ನ ಗಂಡನಿಂದ ಹಣವನ್ನು ಕೇಳಿದರೆ, ಅವರು ಹಣ ವರ್ಗಾಯಿಸಿದರೆ ಅದು ಶಮಾಸ್ ಹಣ ಎಂದು ಹೇಗೆ ಹೇಳಿಕೊಳ್ಳುತ್ತಾರೆ? ನಾನು ನವಾಜುದ್ದೀನ್ ಪತ್ನಿ, ಶಮಾಸ್ ಅವರಿಂದ ನಾನು ಯಾಕೆ ಹಣ ಕೇಳಬೇಕು? ಎಂದು ಹೇಳಿದ್ದಾರೆ.

  ಕನ್ನಡದ ಚಿತ್ರರಂಗಕ್ಕೆ ಮತ್ತೊಂದು ಆಘಾತ | Filmibeat Kannada
  ಹೆಸರು ಬದಲಾಯಿಸಿಕೊಂಡ ಅಲಿಯಾ

  ಹೆಸರು ಬದಲಾಯಿಸಿಕೊಂಡ ಅಲಿಯಾ

  ಪತಿ ನವಾಜುದ್ದೀನ್ ಸಿದ್ಧಿಕಿಯಿಂದ ದೂರ ಆದ ಬಳಿಕ ಅಲಿಯಾ ತನ್ನ ಹಳೆಯ ಹೆಸರು ಅಂಜನಾ ಆನಂದ್ ಕಿಶೋರ್ ಪಾಂಡೆ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಅಲ್ಲದೆ ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ನವಾಜುದ್ದೀನ್ ಸಿದ್ಧಿಕಿ ಸಹೋದರ ತಲೆಮರೆಸಿಕೊಂಡಿದ್ದಾರೆ, ಪೊಲೀಸರಿಗೆ ಬೇಕಾಗಿದ್ದಾರೆ ಎಂದು ಆರೋಪಿಸಿದ್ದರು.

  English summary
  Nawazuddin Siddiqui's Aliya accuses him of rape and cheating. Aliya files complaint against his husband.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X