ಊಟ ಕೊಡಲಿಲ್ಲ, ಬಾತ್‌ರೂಂಗೆ ಬಿಡಲಿಲ್ಲ, ಸ್ಟಾರ್ ನಟನ ವಿರುದ್ಧ ಪತ್ನಿ ಆರೋಪ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ನ ಸ್ಟಾರ್ ಪೋಷಕ ನಟ ಹಾಗೂ ವಿಲನ್ ಆಗಿರುವ ನವಾಜುದ್ಧೀನ್‌ರ ಖಾಸಗಿ ಜೀವನದಲ್ಲಿ ಬಿರುಗಾಳಿಯೆದ್ದು ಬಹಳ ಸಮಯವಾಗಿದೆ.

ನವಾಜುದ್ಧೀನ್ ಸಿದ್ಧಿಕಿ ಹಾಗೂ ಅವರ ಪತ್ನಿ ಆಲಿಯಾ ಸಿದ್ಧಿಕಿ ಸಂಬಂಧದಲ್ಲಿ ಬಿರುಕು ಬಿಟ್ಟು ಬಹಳ ಸಮಯವಾಗಿದೆ. ಇವರಿಬ್ಬರ ಸಂಬಂಧ ಪ್ರಸ್ತುತ ನ್ಯಾಯಾಲಯದ ಮೆಟ್ಟಿಲೇರಿದೆ. ನವಾಜುದ್ಧೀನ್ ಕುಟುಂಬದವರು, ಆಲಿಯಾ ಮೇಲೆಯೂ, ಆಲಿಯಾ, ನವಾಜುದ್ಧೀನ್ ಹಾಗೂ ಅವರ ಕುಟುಂಬದವರ ಮೇಲೆಯೂ ದೂರುಗಳನ್ನು ದಾಖಲಿಸಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದ ಸೂಚನೆಯಂತೆ ಆಲಿಯಾ ನವಾಜುದ್ಧಿನ್ ಸಿದ್ಧಿಕಿಯ ಹೊಸ ಮನೆ ಸೇರಿದ್ದಾರೆ. ಆದರೆ ಅಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆಲಿಯಾ ಆರೋಪಿಸಿದ್ದಾರೆ.

Nawazuddin Siddiquis Wife Aliyas Lawyer Alleged That Actors Family Not Giving Food To Aliya

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಲಿಯಾರ ವಕೀಲ, ನನ್ನ ಕಕ್ಷಿದಾರೆಗೆ ನವಾಜುದ್ಧೀನ್ ಸಿದ್ಧಿಕಿ ಕುಟುಂಬದವರು ಕಿರುಕುಳ ನೀಡಿದ್ದಾರೆ. ಆಕೆಗೆ ಆಹಾರ ನೀಡದೆ, ಸ್ನಾನ ಮಾಡಲು ಬಾತ್‌ರೂಂ ನೀಡದೆ, ಮಲಗಲು ಬೆಡ್ ನೀಡದೆ ಹಿಂಸೆ ನೀಡಿದ್ದಾರೆ'' ಎಂದಿದ್ದಾರೆ.

ನವಾಜುದ್ಧೀನ್ ಸಿದ್ಧಿಕಿಯ ತಾಯಿ, ಆಲಿಯಾ ವಿರುದ್ಧ ಅಕ್ರಮ ಪ್ರವೇಶದ ದೂರು ನೀಡಿದ್ದು, ಪೊಲೀಸರಿಂದ ಬಂಧನದ ಬೆದರಿಕೆ ಹಾಕಿಸಿದ್ದಾರೆ. ಪ್ರತಿದಿನ ಸಂಜೆಯಾದ ಬಳಿಕ ಪೊಲೀಸ್ ಠಾಣೆಗೆ ಬರುವಂತೆ ಹೇಳಿ ಪೊಲೀಸರು ಸಹ ನನ್ನ ಕಕ್ಷಿದಾರೆಗೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ ವಕೀಲ ರಿಜ್ವಾನ್ ಸಿದ್ಧಿಕಿ.

''ಕಳೆದ ಏಳು ದಿನದಿಂದ ಸರಿಯಾಗಿ ಊಟ ನೀಡದೆ, ಬಾತ್‌ರೂಂ ನೀಡದೆ ಕಿರುಕುಳ ನೀಡಿರುವ ನವಾಜುದ್ಧೀನ್ ಸಿದ್ಧಿಕಿ ಕುಟುಂಬದವರು, ಆಲಿಯಾ ಸುತ್ತ ಕೆಲ ಬಾಡಿಗಾರ್ಡ್‌ಗಳನ್ನು ಇಟ್ಟಿದ್ದಾರೆ. ಅಲ್ಲದೆ, ಆಲಿಯಾ ಇರುವ ಹಾಲ್‌ನಲ್ಲಿ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ಆಕೆಯ ವಕೀಲನಾದ ನನ್ನನ್ನು ಸಹ ಭೇಟಿಯಾಗಲು ಬಿಡುತ್ತಿಲ್ಲ. ಆಲಿಯಾರಿಂದ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಸಹ ಬಿಡುತ್ತಿಲ್ಲ'' ಎಂದು ವಕೀಲ ಹೇಳಿದ್ದಾರೆ.

More from Filmibeat

English summary
Nawazuddin Siddiqui's wige Aliya Siddiqui is currently in Nawazuddin's Andheri's house. Aliya's lawyer alleged that Nawazuddin's family not giving food, bathroom or bed to Aliya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X