'ನಾನು ಪ್ರಸವ ವೇದನೆಯಲ್ಲಿದ್ದಾಗ ಆತ ಹುಡುಗಿಯರೊಂದಿಗೆ ಮಜಾ ಮಾಡುತ್ತಿದ್ದ'
ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ಧಿಕಿ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಆತನ ಪತ್ನಿಯೇ ಸಿದ್ಧಿಕಿ ಮೇಲೆ ಆರೋಪಗಳ ಮೇಲೆ ಆರೋಪಗಳನ್ನು ಮಾಡಿದ್ದಾರೆ.
Recommended Video
ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದು, ಅಂದಿನಿಂದಲೂ ನವಾಜುದ್ದೀನ್ ಮೇಲೆ ವಿವಿಧ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.
ಆಲಿಯಾ ಸಿದ್ಧಿಕಿ ಪ್ರಸವ ವೇದನೆಯಲ್ಲಿ ನರಳುತ್ತಿದ್ದಾಗಲೂ ಸಹ ನವಾಜುದ್ಧೀನ್ ಸಿದ್ಧಿಕಿ ಹುಡುಗಿಯರೊಂದಿಗೆ ಮೋಜು ಮಾಡುತ್ತಿದ್ದರಂತೆ, ಹೀಗೆಂದು ಆಲಿಯಾ ಇತ್ತೀಚೆಗೆ ಹೇಳಿದ್ದಾರೆ.

ನಾನು ಗರ್ಭಿಣಿಯಾಗಿದ್ದಾಗ ನವಾಜುದ್ದೀನ್ ಸ್ವಲ್ಪವೂ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಎಲ್ಲಾ ಪರೀಕ್ಷೆ, ಸ್ಕ್ಯಾನ್‌ಗಳಿಗೆ ನಾನೊಬ್ಬಳೇ ಆಸ್ಪತ್ರೆಗೆ ಹೋಗುತ್ತಿದ್ದೆ. ನನ್ನ ವೈದ್ಯರಂತೂ ನನಗೆ ಸದಾ ಬೈಯುತ್ತಿದ್ದರು ಒಬ್ಬಳೇ ಬರಬೇಡವೆಂದು ಆದರೆ ನನಗೆ ಬೇರೆ ದಾರಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಆಲಿಯಾ ಸಿದ್ಧಿಕಿ ಹೇಳಿರುವ ಪ್ರಕಾರ ಮದುವೆಗೆ ಮುಂಚೆಯೇ ನವಾಜುದ್ದೀನ್‌ಗೆ ಅಕ್ರಮ ಸಂಬಂಧಗಳು ಇದ್ದವಂತೆ. ಮದುವೆಗೆ ಮುನ್ನವೂ ನಾವು ಜಗಳವಾಡುತ್ತಿದ್ದೆವು, ಮದುವೆಯ ನಂತರವೂ ಅದು ಮುಂದುವರೆಯಿತು. ಅವರು ಕೆಲವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದಿದ್ದಾರೆ ಆಲಿಯಾ.
ನಾನು ಮನೆಯಲ್ಲಿರದೇ ಇದ್ದಾಗ ಹುಡುಗಿಯರನ್ನು ನವಾಜುದ್ದೀನ್ ಕರೆತರುತ್ತಿದ್ದರು. ನಾನು ವಾಪಸ್ ಬಂದಮೇಲೆ ಜಗಳವಾಡುತ್ತಿದ್ದೆ. ಸದಾ ಫೋನ್‌ನಲ್ಲಿ ಗೆಳತಿಯರೊಂದಿಗೆ ಮಾತನಾಡುತ್ತಲೇ ಇರುತ್ತಿದ್ದರು. ಅವರಿಗೆ ಸ್ವಲ್ಪವೂ ಜವಾಬ್ದಾರಿ ಇರಲಿಲ್ಲ. ಮಹಿಳೆಯರೆಂದರೆ ಸ್ವಲ್ಪವೂ ಗೌರವ ಇರಲಿಲ್ಲ ಎಂದಿದ್ದಾರೆ ಆಲಿಯಾ ಸಿದ್ಧಿಕಿ.
ನವಾಜುದ್ದೀನ್ ಸಹೋದರ ಮಿನಾಜುದ್ದೀನ್ ಸಿದ್ಧಿಕಿ ಮೇಲೆಯೂ ಲೈಂಗಿಕ ದೌರ್ಜನ್ಯ ದೂರುಗಳು ಕೇಳಿಬಂದಿವೆ. ಅದೂ ನವಾಜುದ್ದೀನ್ ಸೋದರನ ಮಗಳೇ ಚಿಕ್ಕಪ್ಪ ಮಿನಾಜುದ್ದೀನ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.


Click it and Unblock the Notifications










