ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ಅಸಡ್ಡೆ ತೋರಿದರೇ ನವಾಜುದ್ದೀನ್ ಸಿದ್ಧಿಕಿ?

ದಕ್ಷಿಣ ಭಾರತ ಸಿನಿಮಾಗಳು ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಭಾರತೀಯ ಚಿತ್ರರಂಗ ಎಂದರೆ ಹಿಂದಿ ಸಿನಿಮಾಗಳು ಎಂದುಕೊಂಡಿದ್ದ ವಿಶ್ವಕ್ಕೆ, ಬಾಲಿವುಡ್ ಒಂದೇ ಭಾರತ ಚಿತ್ರರಂಗವನ್ನು ಪ್ರತಿನಿಧಿಸುವುದಿಲ್ಲ ಎಂದು ಸಾರಿ ಹೇಳಿವೆ.

ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ ಅನ್ನು ಅಲುಗಾಡಿಸಿವೆ. ಬಾಲಿವುಡ್ ಸಿನಿಮಾ ವೀಕ್ಷಿಸುತ್ತಿದ್ದ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ದಕ್ಷಿಣ ಭಾರತದ ಸಿನಿಮಾಗಳು ತಮ್ಮತ್ತ ಸೆಳೆದುಕೊಂಡಿದೆ.

Recommended Video

ಸೌತ್ ಸಿನಿಮಾಗಳ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ ನವಾಝುದ್ದೀನ್ | Nawazuddin siddiqui | KGF 2 | RRR

ದಕ್ಷಿಣ ಭಾರತ ಸಿನಿಮಾಗಳು ಮಾಡುತ್ತಿರುವ ಕಮಾಲ್ ಅನ್ನು ಹಲವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆದರೆ ಇದು ಕೆಲವು ಬಾಲಿವುಡ್ಡಿಗರಿಗೆ ಅಸೂಯೆಯನ್ನು ಸಹ ಹುಟ್ಟಿಸಿದೆ. ಕೆಲವು ದಿನಗಳ ಹಿಂದಷ್ಟೆ ನಟ ಸಲ್ಮಾನ್ ಖಾನ್ ಈ ವಿಷಯವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು, ಇದೀಗ ಬಾಲಿವುಡ್‌ನ ಮತ್ತೊಬ್ಬ ಬಾಲಿವುಡ್‌ನ ಜನಪ್ರಿಯ ನಟ ನವಾಜುದ್ದೀನ್ ಸಿದ್ಧಿಕಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಅಸಡ್ಡೆಯ ಮಾತುಗಳನ್ನಾಡಿದ್ದಾರೆ.

ನವಾಜುದ್ದೀನ್ ಸಿದ್ಧಿಕಿ ನಟಿಸಿರುವ 'ಹೀರೋಪಂತಿ 2' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಪ್ರಚಾರ ಸಂಬಂಧ ಇಂಡಿಯಾ ಟುಡೆ ಮಾಡಿದ ಸಂದರ್ಶನದಲ್ಲಿ ನವಾಜುದ್ದೀನ್ ಭಾಗಿಯಾಗಿದ್ದರು. ದಕ್ಷಿಣ ಭಾರತದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದು, ಬಾಲಿವುಡ್‌ ಅನ್ನು ಮೀರಿಸಿ ಬೆಳೆಯುತ್ತಿರುವ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನವಾಜುದ್ದೀನ್, ''ಸಿನಿಮಾಗಳು ಹಿಟ್ ಆದಾಗ ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಒಂದೆರಡು ಸಿನಿಮಾ ಫ್ಲಾಪ್ ಆದರೆ ಜನ ಮರೆತುಬಿಡುತ್ತಾರೆ'' ಎನ್ನುವ ಮೂಲಕ ದಕ್ಷಿಣ ಭಾರತ ಸಿನಿಮಾಗಳ ಯಶಸ್ಸು ತಾತ್ಕಾಲಿಕ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಆ ಸಿನಿಮಾಗಳನ್ನು ನೋಡಿಲ್ಲ ಎಂದ ಸಿದ್ಧಿಕಿ

ಆ ಸಿನಿಮಾಗಳನ್ನು ನೋಡಿಲ್ಲ ಎಂದ ಸಿದ್ಧಿಕಿ

'RRR' 'ಪುಷ್ಪ', 'ಕೆಜಿಎಫ್ 2' ಸಿನಿಮಾಗಳ ಯಶಸ್ಸಿನ ಬಗ್ಗೆ ಸಂದರ್ಶಕಿ ಮಾಡಿದ ಪ್ರಶ್ನೆಗೆ ಉತ್ತರಿಸಿರುವ ನವಾಜುದ್ದೀನ್ ''ಆ ಸಿನಿಮಾಗಳನ್ನು ನಾನು ನೋಡಿಲ್ಲ. ನೋಡುವುದು ಸಹ ಇಲ್ಲ. ನನಗೆ ಕಮರ್ಶಿಯಲ್‌ ಸಿನಿಮಾಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ನನಗೆ ಇಷ್ಟವಾಗುವುದಿಲ್ಲ. ಅಂಥಹಾ ಸಿನಿಮಾಗಳಲ್ಲಿ ನಟಿಸುತ್ತೇನೆ, ಆದರೆ ಅಂಥಹಾ ಸಿನಿಮಾಗಳನ್ನು ನೋಡುವುದಿಲ್ಲ. ಯಾಕೆ ನಾನು ಅಂಥಹಾ ಸಿನಿಮಾಗಳನ್ನು ನೋಡುವುದಿಲ್ಲ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಉತ್ತರ ಇಲ್ಲ'' ಎಂದಿದ್ದಾರೆ ನವಾಜುದ್ದೀನ್ ಸಿದ್ಧಿಕಿ.

ಹಿಟ್ ಸಿನಿಮಾಗಳ ಬಗ್ಗೆ ಜನ ಮಾತನಾಡುವುದು ಸಹಜ: ಸಿದ್ಧಿಕಿ

ಹಿಟ್ ಸಿನಿಮಾಗಳ ಬಗ್ಗೆ ಜನ ಮಾತನಾಡುವುದು ಸಹಜ: ಸಿದ್ಧಿಕಿ

''ಯಾವುದೇ ಸಿನಿಮಾ ಹಿಟ್ ಆದಾಗ ಜನರೆಲ್ಲ ಅದರ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಹಿಟ್ ಸಿನಿಮಾದ ನಂತರ ಬರುವ ಸ್ಕ್ರಿಪ್ಟ್‌ಗಳು ಅದೇ ಮಾದರಿಯಲ್ಲಿಯೇ ಇರುತ್ತವೆ, ನಟರೂ ಸಹ ಹಿಟ್ ಸಿನಿಮಾದ ರೀತಿಯಲ್ಲಿಯೇ ಕತೆಗಳನ್ನು ಆಯ್ಕೆ ಮಾಡಿಕೊಳ್ಳಲು ತೊಡಗುತ್ತಾರೆ. ಆದರೆ ಅದೆಲ್ಲ ತಾತ್ಕಾಲಿಕ ಅಷ್ಟೆ, ಒಂದೆರಡು ಸಿನಿಮಾ ಫ್ಲಾಪ್ ಆದರೆ ಜನ ಎಲ್ಲವನ್ನೂ ಮರೆತುಬಿಡುತ್ತಾರೆ. ಆದರೆ ಜನ ಚಿತ್ರಮಂದಿರಕ್ಕೆ ಮರಳಿ ಬರುತ್ತಿದ್ದಾರೆ ಎಂಬುದು ಸಂತೋಷದ ವಿಷಯ'' ಎಂದಿದ್ದಾರೆ ನಟ ನವಾಜುದ್ದೀನ್ ಸಿದ್ಧಿಕಿ.

'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾ ನೋಡಿದೆ: ಸಿದ್ಧಿಕಿ

'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾ ನೋಡಿದೆ: ಸಿದ್ಧಿಕಿ

''ನನ್ನ ಜೀವನದ ಎರಡು ಗಂಟೆ ಯಾವುದಕ್ಕಾದರೂ ನೀಡುತ್ತಿದ್ದೇನೆ ಅಂದರೆ ಅದು ಅದ್ಭುತವಾಗಿರಬೇಕು. ನನ್ನನ್ನು ಯೋಚನೆಗೆ ಹಚ್ಚಬೇಕು, ನನ್ನಲ್ಲಿ ಸ್ಪೂರ್ತಿ ತುಂಬಬೇಕು, ನನ್ನ ಮೆದುಳಿಗೆ ಕೆಲಸ ನೀಡಬೇಕು, ನಾನು ಇನ್ನೂ ಉತ್ತಮ ವ್ಯಕ್ತಿಯಾಗುವಲ್ಲಿ ಪ್ರೇರೇಪಿಸಬೇಕು, ಅಂಥಹಾ ಸಿನಿಮಾಗಳನ್ನಷ್ಟೆ ನಾನು ನೋಡುತ್ತೇನೆ. ಕೆಲವು ದಿನಗಳ ಹಿಂದೆ ನಾನು ಫ್ರೀಯಾಗಿದ್ದೆ, ಆಗ 'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾಗಳನ್ನು ನೋಡಿದೆ'' ಎಂದಿದ್ದಾರೆ ನವಾಜುದ್ದೀನ್ ಸಿದ್ಧಿಕಿ.

'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾ ನೋಡಿದೆ: ಸಿದ್ಧಿಕಿ

'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾ ನೋಡಿದೆ: ಸಿದ್ಧಿಕಿ

''ನನ್ನ ಜೀವನದ ಎರಡು ಗಂಟೆ ಯಾವುದಕ್ಕಾದರೂ ನೀಡುತ್ತಿದ್ದೇನೆ ಅಂದರೆ ಅದು ಅದ್ಭುತವಾಗಿರಬೇಕು. ನನ್ನನ್ನು ಯೋಚನೆಗೆ ಹಚ್ಚಬೇಕು, ನನ್ನಲ್ಲಿ ಸ್ಪೂರ್ತಿ ತುಂಬಬೇಕು, ನನ್ನ ಮೆದುಳಿಗೆ ಕೆಲಸ ನೀಡಬೇಕು, ನಾನು ಇನ್ನೂ ಉತ್ತಮ ವ್ಯಕ್ತಿಯಾಗುವಲ್ಲಿ ಪ್ರೇರೇಪಿಸಬೇಕು, ಅಂಥಹಾ ಸಿನಿಮಾಗಳನ್ನಷ್ಟೆ ನಾನು ನೋಡುತ್ತೇನೆ. ಕೆಲವು ದಿನಗಳ ಹಿಂದೆ ನಾನು ಫ್ರೀಯಾಗಿದ್ದೆ, ಆಗ 'ಕಿಂಗ್ ರಿಚರ್ಡ್ಸ್', 'ಕೋಡಾ' ಸಿನಿಮಾಗಳನ್ನು ನೋಡಿದೆ'' ಎಂದಿದ್ದಾರೆ ನವಾಜುದ್ದೀನ್ ಸಿದ್ಧಿಕಿ.

ರಜನೀಕಾಂತ್ ಜೊತೆ ನಟಿಸಿರುವ ಸಿದ್ಧಿಕಿ

ರಜನೀಕಾಂತ್ ಜೊತೆ ನಟಿಸಿರುವ ಸಿದ್ಧಿಕಿ

ನವಾಜುದ್ದೀನ್ ಸಿದ್ಧಿಕಿ ಬಾಲಿವುಡ್‌ನ ಜನಪ್ರಿಯ ಹಾಗೂ ಬ್ಯುಸಿ ನಟರಲ್ಲಿ ಪ್ರಮುಖರು. ನವಾಜುದ್ದೀನ್ ರಜನೀಕಾಂತ್‌ ಜೊತೆ ತಮಿಳಿನ 'ಪೆಟಾ' ಸಿನಿಮಾದಲ್ಲಿ ನಟಿಸಿದ್ದಾರೆ. ಕಮರ್ಶಿಯಲ್ ಸಿನಿಮಾಗಳ ಜೊತೆಗೆ ರಿಯಲಿಸ್ಟಿಕ್ ಸಿನಿಮಾಗಳಲ್ಲಿ ಹೆಚ್ಚಿಗೆ ನವಾಜುದ್ದೀನ್ ಸಿದ್ಧಿಕಿ ನಟಿಸುತ್ತಾರೆ. 'RRR', 'ಪುಷ್ಪ', 'ಕೆಜಿಎಫ್ 2' ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿರುವುದು ಸಹಜವಾಗಿಯೇ ಬಾಲಿವುಡ್ಡಿನ ಹಲವರಿಗೆ ಅಭ್ರತೆ ಮೂಡಿಸಿರುವ ಸಾಧ್ಯತೆ ಇದೆ.

More from Filmibeat

English summary
Bollywood actor Nawazuddin siddiqui said he did not watch south Indian commercial movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X