26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ

ಬಾಲಿವುಡ್ ಚಿತ್ರರಂಗ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ಧಿಕಿ ತಮ್ಮ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಶ್ಯಾಮ ತಾಂಶಿ ಸಿದ್ಧಿಕಿ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಶ್ಯಾಮ ತಾಂಶಿ ಸಿದ್ಧಿಕಿ ಕೇವಲ 26 ವರ್ಷದಲ್ಲಿಯೇ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಎದೆ ಕ್ಯಾನ್ಸರ್ ನಿಂದ ಅವರು ವಿಧಿವಶರಾಗಿದ್ದಾರೆ. 18 ವರ್ಷದಲ್ಲಿಯೇ ಕ್ಯಾನ್ಸರ್ ಮಹಾ ಮಾರಿ ಅವರನ್ನು ಅವರಿಸಿತ್ತು. ಕಳೆದ ಎಂಟು ವರ್ಷಗಳಿಂದ ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸುತ್ತಿದ್ದರು.

ಸಹೋದರಿ ನಿಧನ ಸಮಯದಲ್ಲಿ ನವಾಜುದ್ದೀನ್ ಸಿದ್ಧಿಕಿ ಅವರ ಜೊತೆಗೆ ಇರಲು ಸಾಧ್ಯವಾಗಿಲ್ಲ. ನವಾಜುದ್ದೀನ್ ಸಿದ್ಧಿಕಿ ಕೆಲಸದ ಕಾರಣದಿಂದ ವಿದೇಶಕ್ಕೆ ತೆರಳಿದ್ದು, ಈ ಸಮಯದಲ್ಲಿ ದೊಡ್ಡ ಆಘಾತ ಎದುರಾಗಿದೆ. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಶ್ಯಾಮ ತಾಂಶಿ ಸಿದ್ಧಿಕಿ ಕೊನೆಯುಸಿರೆಳೆದರು.

Nawazuddin Siddiqui Sister Syama Tamshi Siddiqui Passes Away

ಶ್ಯಾಮ ತಾಂಶಿ ಸಿದ್ಧಿಕಿ ಸಾವಿನ ಸಂಗತಿಯನ್ನು ನವಾಜುದ್ದೀನ್ ಸಹೋದರ ಅಯಝುದ್ದೀನ್ ಸಿದ್ಧಿಕಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ತಮ್ಮ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಕಳೆದ ವರ್ಷ ತಮ್ಮ ಸಹೋದರಿಗೆ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಎಮೋಷನಲ್ ಆಗಿ ಹಾಗೂ ಸ್ಫೂರ್ತಿ ನೀಡುವ ಹಾಗೆ ನವಾಜುದ್ದೀನ್ ಸಿದ್ಧಿಕಿ ಬರೆದುಕೊಂಡಿದ್ದರು. ಹೇಗೆ ತನ್ನ ಸಹೋದರಿ 18ರ ವಯಸ್ಸಿನಲ್ಲಿಯೇ ಕ್ಯಾನ್ಸರ್ ಬಂದರೂ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈಗ ತಮ್ಮ ಸಹೋದರಿಯನ್ನು ಅವರು ಕಳೆದುಕೊಂಡಿದ್ದಾರೆ.

ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ನಾಯಕನಾಗಿದ್ದ 'ಹೌಸ್ ಫುಲ್ 4' ನಲ್ಲಿ ನವಾಜುದ್ದೀನ್ ಸಿದ್ಧಿಕಿ ಕಾಣಿಸಿಕೊಂಡಿದ್ದರು. ಅವರ ನಂತರ ಮೂರು ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ.

More from Filmibeat

English summary
Actor Nawazuddin Siddiqui sister Syama Tamshi Siddiqui passes away.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X