For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣಾವತ್ ನಂತರ 'ಬಾಲಿವುಡ್' ಹೆಸರು ಬದಲಿಸಬೇಕು ಎಂದ ನಟ!

  |

  ಬಾಲಿವುಡ್‌ನ ಹಲವು ಹುಳುಕುಗಳ ಬಗ್ಗೆ ಬಹಿರಂಗವಾಗಿ ಬಿಚ್ಚಿಟ್ಟಿದ ನಟಿ ಕಂಗನಾ ರಣಾವತ್ ''ಬಾಲಿವುಡ್'' ಎಂಬ ಹೆಸರನ್ನು ಮೊದಲು ಬದಲಾಯಿಸಿಬೇಕು ಎಂದು ಹೇಳಿದ್ದರು. ಬಾಲಿವುಡ್ ಎನ್ನುವುದು ಹಾಲಿವುಡ್‌ನಿಂದ ನಕಲು ಮಾಡಲಾಗಿದೆ, ಹಾಗಾಗಿ, ಈ ಪದವನ್ನು ನಿಷೇಧಿಸಬೇಕು ಎಂದು ನಟಿ ಒತ್ತಾಯ ಮಾಡಿದ್ದರು.

  ಕಂಗನಾ ರಣಾವತ್ ಅವರ ಅಭಿಪ್ರಾಯಕ್ಕೆ ನಟ ನವಾಜುದ್ದೀನ್ ಸಿದ್ದಿಕಿ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಯಾವ ಬದಲಾವಣೆಯನ್ನು ಬಯಸುತ್ತೀರಾ ಎಂದು ದಿನಪತ್ರಿಕೆಯೊಂದು ಕೇಳಿದ್ದಕ್ಕೆ ''ಬಾಲಿವುಡ್ ಎಂಬ ಹೆಸರನ್ನೇ ಬದಲಿಸಲು ನಾನು ಆಸೆ ಪಡುತ್ತೇನೆ'' ಎಂದಿದ್ದಾರೆ.

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಅತ್ಯಾಚಾರ ಬೆದರಿಕೆಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಅತ್ಯಾಚಾರ ಬೆದರಿಕೆ

  ನವಾಜುದ್ದೀನ್ ಸಿದ್ದಿಕಿ ನಟನೆಯ 'ಸೀರಿಯಸ್ ಮೆನ್' ಸಿನಿಮಾ ಇತ್ತೀಚಿಗಷ್ಟೆ ನೆಟ್‌ಫ್ಲೆಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಸುಧೀರ್ ಮಿಶ್ರಾ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡಿದ ಸಿದ್ದಿಕಿ "ದೇವರಿಗೆ ಧನ್ಯವಾದಗಳು, ನಮಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾ ಜನರೊಂದಿಗೆ ಕನೆಕ್ಟ್ ಆಗಿದೆ'' ಎಂದರು.

  ''ನನ್ನ ಬಹಳಷ್ಟು ಚಿತ್ರಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಹೋಗುತ್ತದೆ. ಅಲ್ಲಿ ಪ್ರಶಸ್ತಿಗಳನ್ನು ಸಹ ಪಡೆಯುತ್ತವೆ. ಆದರೆ ಅವು ಇಲ್ಲಿ ಬಿಡುಗಡೆಯಾದಾಗ ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನವಾಜುದ್ದೀನ್ ಸಿದ್ದಿಕಿ ನಟಿಸಿರುವ ರಾತ್ ಅಕೆಲಿ ಹೈ ಚಿತ್ರ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಕ್ರೈಂ-ಥ್ರಿಲ್ಲರ್ ಕಥೆ ಹೊಂದಿದ್ದ ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಿದ್ದಿಕಿ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.

  English summary
  After Kangana Ranaut, Nawazuddin Siddiqui want to change the name of 'Bollywood'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X