Nayantara: ನಯನತಾರಾ 'ಬಿರುಗಾಳಿಗೂ ಮುಂಚೆ ಬರುವ ಗುಡುಗು' ಎಂದು ಬಣ್ಣಿಸಿದ ಶಾರುಖ್ ಖಾನ್
'ಪಠಾಣ್' ಸಿನಿಮಾ ಬಳಿಕ ಶಾರುಖ್ ಖಾನ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಬಾಲಿವುಡ್‌ನ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ್ದಾರೆ. ಈಗ ಮತ್ತೊಂದು ಸಿನಿಮಾ 'ಜವಾನ್' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ರಿಲೀಸ್ ಆಗಿರೋ ಪ್ರಿವ್ಯೂ ಕಿಂಗ್ ಖಾನ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.
ಶಾರುಖ್ ಖಾನ್ ಪಾತ್ರದ ಜೊತೆ ಜೊತೆಗೆ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಪಾತ್ರದ ಬಗ್ಗೆನೂ ಕುತೂಹಲವಿತ್ತು. ಅದಕ್ಕೀಗ ಕ್ಲಾರಿಟಿ ಸಿಕ್ಕಿದೆ. ಸ್ವತ: ಶಾರುಖ್ ಖಾನ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಪಾತ್ರದ ಪೋಸ್ಟರನ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

'ಜವಾನ್ ಪ್ರಿವ್ಯೂನಲ್ಲಿ ನಯನತಾರಾ ಅದ್ಭುತ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಶಾಕ್ ಆಗಿದ್ದರು. ಈ ಕಾರಣಕ್ಕೆ ನಯನತಾರಾ ಪಾತ್ರದ ಪೋಸ್ಟರ್ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ. ಅಲ್ಲದೆ ನಯನತಾರಾ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ನಯನತಾರಾ ಪಾತ್ರವನ್ನು ಕಿಂಗ್ ಖಾನ್ ಅದ್ಭುತವಾಗಿ ವರ್ಣಿಸಿದ್ದಾರೆ. ಪೋಸ್ಟರ್ ರಿಲೀಸ್ ಮಾಡಿ, 'ಬಿರುಗಾಳಿಗೂ ಮುಂಚೆ ಬರುವ ಗುಡುಗು' ಎಂದು ಶಾರುಖ್ ಖಾನ್ ವರ್ಣಿಸಿದ್ದು, ಲೇಡಿ ಸೂಪರ್‌ಸ್ಟಾರ್ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.
ಶಾರುಖ್ ಖಾನ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ಜೊತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದ್ಹಾಗೆ 'ಜವಾನ್'ನಲ್ಲಿ ನಯನತಾರಾ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಇಡೀ ಸಿನಿಮಾದ ಹೈಲೈಟ್ ಎಂದು ಹೇಳಲಾಗುತ್ತಿದೆ. 'ಜವಾನ್' ಸಿನಿಮಾದಲ್ಲಿ ಸಾಕಷ್ಟು ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿದ್ದಾರೆ.
ಅಂದ್ಹಾಗೆ 'ಜವಾನ್' ಸಿನಿಮಾವನ್ನು ಶಾರುಖ್ ಖಾನ್ ಅವರದ್ದೇ ಆದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿದೆ. ಶಾರುಖ್ ಪತ್ನಿ ಗೌರಿ ಖಾನ್ ಈ ಸಿನಿಮಾದ ನಿರ್ಮಾಪಕಿ. ಜೊತೆಗೆ ಗೌರವ್ ವರ್ಮ ಈ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ. ಇದೇ ಸೆಪ್ಟೆಂಬರ್ 7ರಂದು 'ಜವಾನ್' ಸಿನಿಮಾ ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.


Click it and Unblock the Notifications











