For Quick Alerts
  ALLOW NOTIFICATIONS  
  For Daily Alerts

  ಶಾರುಖ್-ಅಟ್ಲೀ ಸಿನಿಮಾಗೆ ನಾಯಕಿಯಾಗ್ತಾರಾ ದಕ್ಷಿಣದ ಈ ಸ್ಟಾರ್ ನಟಿ?

  |

  ಬಾಲಿವುಡ್ ನಟ ಶಾರುಖ್ ಖಾನ್ ಮೂರು ವರ್ಷಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶಾರುಖ್ ಬಳಿ ಮೂರ್ನಾಲ್ಕು ಸಿನಿಮಾಗಳಿವೆ. ಇದರಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾ ಸಿನಿಮಾ ಕೂಡ ಒಂದು. ಅಟ್ಲೀ ಮತ್ತು ಶಾರುಖ್ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ.

  ShahRukh ಹೊಸ ಸಿನೆಮಾಕ್ಕೆ ಅವಳೇ ನಾಯಕಿ ಆಗ್ಬೇಕು ಅಂತಿರೋದಾದ್ರು ಯಾಕೆ?

  ಕಿಂಗ್ ಖಾನ್ ನಟನೆಯ ಹೊಸ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ ನಾಯನತಾರಾ: ಅಸಲಿ ಕಾರಣ ಬಹಿರಂಗಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ ನಾಯನತಾರಾ: ಅಸಲಿ ಕಾರಣ ಬಹಿರಂಗ

  ಅಂದಹಾಗೆ ಶಾರುಖ್ ಗೆ ನಾಯಕಿಯಾಗುತ್ತಿರುವ ಸೌತ್ ನ ಆ ಸ್ಟಾರ್ ನಟಿ ಮತ್ಯಾರು ಅಲ್ಲ ನಯನತಾರಾ. ದಕ್ಷಿಣ ಭಾರತೀಯ ಸಿನಿಮಾರಂಗದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು.

  ಸುಮಾರು ದಶಕಗಳಿಂದ ಉನ್ನತ ಸ್ಥಾನ ಕಾಪಾಡಿಕೊಂಡು ಬಂದಿರುವ ದಕ್ಷಿಣದ ಈ ಲೋಡಿ ಸೂಪರ್ ಸ್ಟಾರ್ ನಯನತಾರಾ ಮೊದಲ ಬಾರಿಗೆ ಶಾರುಖ್ ಗೆ ನಾಯಕಿಯಾಗಿ ಮಿಂಚಿಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಅಟ್ಲೀ ಮತ್ತು ಶಾರುಖ್ ಸಿನಿಮಾ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಇಬ್ಬರ ಕಾಂಬಿನೇಷನ್ ನ ಸಿನಿಮಾಗೆ ನಯನತಾರಾ ಮೊದಲ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಯನತಾರಾ ಈಗಾಗಲೇ ಅಟ್ಲೀ ಜೊತೆ ಕೆಲಸ ಮಾಡಿದ್ದಾರೆ. ತನ್ನ ವೃತ್ತಿ ಜೀವನದ ಅತೀ ದೊಡ್ಡ ಹಿಟ್ ಗಳಲ್ಲಿ ಒಂದಾಗಿರುವ 'ರಾಜ ರಾಣಿ' ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡಿದ್ದರು. ಬಳಿಕ ಅಟ್ಲೀ ಜೊತೆ 'ಬಿಗಿಲ್' ಸಿನಿಮಾದಲ್ಲೂ ಕೆಲಸ ಮಾಡಿದ್ದರು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿರುವ ಅಟ್ಲೀ ಮತ್ತು ನಯನತಾರಾ ಜೋಡಿ ಬಾಲಿವುಡ್ ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡುವ ಯೋಚನೆ ಮಾಡಿದೆ.

  Nayanthara pair with Bollywood Actor Shah Rukh Khan in Atlee movie

  ಅಂದಹಾಗೆ ನಯನತಾರಾ ಈ ಹಿಂದೆಯೇ ಶಾರುಖ್ ಜೊತೆ ನಟಿಸಬೇಕಿತ್ತು. ಶಾರುಖ್ ಖಾನ್ ನಟನೆಯ 'ಚೆನ್ನೈ ಎಕ್ಸ್ ಪ್ರೆಸ್' ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳಲು ನಯನತಾರಾಗೆ ಆಫರ್ ಮಾಡಲಾಗಿತ್ತು. ಆದರೆ ನಯನತಾರಾ ಅಂದು ಆ ಆಫರ್ ಅನ್ನು ತಿರಸ್ಕರಿಸಿದ್ರು ಎನ್ನುವ ಮಾತು ಕೇಳಿಬಂದಿತ್ತು. ಬಳಿಕ ಆ ಹಾಡಿಗೆ ದಕ್ಷಿಣದ ಮತ್ತೋರ್ವ ಖ್ಯಾತ ನಟಿ ಪ್ರಿಯಾಮಣಿ ಹೆಜ್ಜೆಹಾಕಿದ್ದರು.

  ಇದೀಗ ಮತ್ತೆ ಶಾರುಖ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂದು ಕಾದುನೋಡಬೇಕು. ಒಂದುವೇಳೆ ಶಾರುಖ್ ಮತ್ತು ನಯನತಾರಾ ಒಟ್ಟಿಗೆ ತೆರೆಮೇಲೆ ಬಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.

  English summary
  South Star Nayanthara pair with Bollywood Actor Shah Rukh Khan in Atlee movie,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X