'ನೋ ಬಿಕಿನಿ' ರೂಲ್ಸ್‌ ಬ್ರೇಕ್: ಶಾರುಖ್‌ ಖಾನ್‌ಗಾಗಿ ಬಿಕಿನಿ ಧರಿಸ್ತಾರಾ ನಯನತಾರಾ?

By ಫಿಲ್ಮಿಬೀಟ್ ಡೆಸ್ಕ್

ಸೌತ್ ಇಂಡಿಯಾ ಲೇಡಿ ಸೂಪರ್‌ಸ್ಟಾರ್ ನಯನತಾರಾಗೆ ಮದುವೆ ಬಳಿಕವೂ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ. ಸೂಪರ್‌ಸ್ಟಾರ್‌ಗಳು ತಮ್ಮ ಸಿನಿಮಾಗೆ ನಯನತಾರಾನೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಇನ್ನು ಈಕೆ ಕೂಡ ದಿಗ್ಗಜರ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.

ನಯನತಾರಾ ಜೊತೆ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಸಿನಿಮಾಗಿಂತಲೂ ಮುನ್ನ ಕೆಲವು ಷರತ್ತುಗಳನ್ನು ಹಾಕುತ್ತಾರೆ. ಈಕೆ ಸಿನಿಮಾ ಪ್ರಮೋಷನ್‌ಗೆ ಹೋಗೋದಿಲ್ಲ. ಸಿನಿಮಾಗಳಲ್ಲಿ ಬಿಕಿನಿ ಧರಿಸುವುದಿಲ್ಲ. ಪಕ್ಕಾ ಟ್ರೆಡಿಷನಲ್ ಲುಕ್ ಇಲ್ಲವೇ ಮಾಡರ್ನ್ ಲುಕ್‌ನಲ್ಲೇ ಕಾಣಿಸಿಕೊಳ್ಳುತ್ತಾರೆ.

Nayanthara to wear Bikini For Shah Rukh Khans Jawan Breaking her rule after 16 years

ಇಷ್ಟೆಲ್ಲ ಷರತ್ತು ಇದ್ದರೂ, ನಯನತಾರಾಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಅದಕ್ಕೆ ಸಾಕ್ಷಿ 'ಜವಾನ್'. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆ ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾಗಾಗಿ ತಾನೇ ಹಾಕಿಕೊಂಡಿರೋ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರಂತೆ.

'ನೋ ಬಿಕಿನಿ' ರೂಲ್ಸ್ ಬ್ರೇಕ್

ನಯನತಾರಾ ಕಳೆದ 16 ವರ್ಷಗಳಿಂದ ಒಂದೇ ಒಂದು ಸಿನಿಮಾದಲ್ಲೂ ಬಿಕಿನಿ ಧರಿಸಿಲ್ಲ. ತನ್ನ ಜೊತೆ ಕೆಲಸ ಮಾಡೋಕೆ ಬರೋ ನಿರ್ಮಾಪಕರಿಗೆ, ನಿರ್ದೇಶಕರಿಗೆ 'ನೋ ಬಿಕಿನಿ' ಅನ್ನೋ ಸಂದೇಶವನ್ನು ರವಾನೆ ಮಾಡಿದ್ದರು. ಆದ್ರೀಗ ತಾನೇ ಹಾಕಿಕೊಂಡಿದ್ದ ರೂಲ್ಸ್ ಅನ್ನು ಈಗ ಬ್ರೇಕ್ ಮಾಡುತ್ತಿದ್ದಾರಂತೆ.

ಇಂತಹದ್ದೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಲೇಡಿ ಸೂಪರ್‌ಸ್ಟಾರ್ ಬಿಕಿನಿ ಧರಿಸುತ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೆ ನಂಬೋಕೆ ಆಗುತ್ತಿಲ್ಲ. ಯಾಕಂದ್ರೆ, ಅಷ್ಟು ಸುಲಭಕ್ಕೆ ನಯನತಾರಾ ರೂಲ್ಸ್ ಬ್ರೇಕ್ ಮಾಡೋದೇ ಇಲ್ಲ. ಆದರೂ ಬಿಕಿನಿ ಧರಿಸೋಕೆ ಗ್ರೀನ್ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಶಾರುಖ್ ಖಾನ್ ಎನ್ನಲಾಗುತ್ತಿದೆ.

Nayanthara to wear Bikini For Shah Rukh Khans Jawan Breaking her rule after 16 years

ದೀಪಿಕಾ ಪಡುಕೋಣೆ ಹಾಗೇ ನಯನತಾರಾ ಬಿಕಿನಿ

ಇತ್ತೀಚೆಗೆ ತೆರೆಕಂಡು ಬಾಲಿವುಡ್‌ನಲ್ಲಿ ದಾಖಲೆ ಬರೆದ ಸಿನಿಮಾ 'ಪಠಾಣ್'. ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಡೊಂದರಲ್ಲಿ ದೀಪಿಕಾ ಬಿಕಿನಿ ಧರಿಸಿ, ಅಭಿಮಾನಿಗಳ ನಿದ್ದೆ ಕೆಡಿಸಿದ್ದರು. ಈಗ ನಯನತಾರಾ ಕೂಡ ಜವಾನ್‌ನಲ್ಲಿ ಇಂತಹದ್ದೇ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಶಾರುಖ್ ಖಾನ್ ಸಿನಿಮಾ 'ಜವಾನ್‌'ನಲ್ಲಿ ನಯನತಾರಾ ಕೂಡ ದೀಪಿಕಾ ಧರಿಸಿದಂತೆ ಸ್ವಿಮ್ ಸೂಟ್ ಅನ್ನು ಧರಿಸುತ್ತಿದ್ದಾರಂತೆ. ನಯನತಾರಾ ಈ ಬಗ್ಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದು, ಜಾಗರೂಕತೆಯಿಂದ ದೃಶ್ಯವನ್ನು ಚಿತ್ರೀಕರಿಸಬೇಕು ಅನ್ನೋ ಷರತ್ತು ಹಾಕಿದ್ದಾರಂತೆ. ಬಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

16 ವರ್ಷಗಳ ಬಳಿಕ ಬಿಕಿನಿ ಧರಿಸ್ತಾರಾ ನಯನತಾರಾ?

ನಯನತಾರಾ 16 ವರ್ಷಗಳ ಹಿಂದೆ, ತನ್ನ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಬಿಕಿನಿ ಧರಿಸಿದ್ದರು. 'ಬಿಲ್ಲಾ' ಹಾಗೂ 'ವಲ್ಲವನ್' ಈ ಎರಡು ಸಿನಿಮಾಗಳ ಬಳಿಕ ನಯನತಾರಾ ಮತ್ತೆಂದು ಬಿಕಿನಿ ಧರಿಸಿರಲಿಲ್ಲ. ಈಗ 'ಜವಾನ್‌' ಸಿನಿಮಾಗಾಗಿ ನಿಕಿನಿ ಧರಿಸುತ್ತಾರೆ ಅನ್ನೋ ಸುದ್ದಿಗಳು ಓಡಾಡುತ್ತಿವೆ.

ಆದರೆ, ಈ ವಿಷಯವನ್ನು ನಿರ್ಮಾಣ ಸಂಸ್ಥೆ ಕನ್ಫರ್ಮ್ ಮಾಡಿಲ್ಲ. ತಮಿಳು ನಿರ್ದೇಶಕ ಅಟ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಹಾಗೇ ದಳಪತಿ ವಿಜಯ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ಜವಾನ್' ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

More from Filmibeat

English summary
Nayanthara to wear Bikini For Shah Rukh Khan's Jawan Breaking her rule after 16 years, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X