Ganesh Chaturthi: ಅಂಬಾನಿ ಮನೆಯ ಗಣೇಶೋತ್ಸವದಲ್ಲಿ ಮಿಂಚಿದ ನಯನತಾರಾ, ವಿಘ್ನೇಶ್ ಶಿವನ್
ದೇಶದ ಪ್ರಮುಖ ಉದ್ಯಮಿಗಳಾದ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಮುಂಬೈನ ತಮ್ಮ ಮನೆ ಆಂಟಿಲಿಯಾದಲ್ಲಿ ಗಣೇಶ ಚತುರ್ಥಿ ಆಚರಣೆಯನ್ನು ಆಯೋಜಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಅಂಬಾನಿ ಮನೆಗೆ ಆಗಮಿಸಿದ್ದಾರೆ.
ಅಂಬಾನಿ ಕುಟುಂಬದ ಆಮಂತ್ರಣ ದಕ್ಷಿಣದ ಸ್ಟಾರ್ ದಂಪತಿ ನಯನತಾರ ಮತ್ತು ವಿಘ್ನೇಶ್ ಶಿವನ್ ಅವರಿಗೂ ತಲುಪಿದೆ. ಇದೇ ಕಾರಣದಿಂದ ಅಂಬಾನಿ ಮುಂಬೈ ಮನೆಗೆ ತೆರಳಿರುವ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ನಯನತಾರಾ ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂಬಾನಿ ಗಣೇಶೋತ್ಸವದಲ್ಲಿ ನಯನತಾರಾ-ವಿಘ್ನೇಶ್
'ಜವಾನ್' ಯಶಸ್ಸಿನಲ್ಲಿರು ನಟ ಶಾರುಖ್ ಖಾನ್ ಮತ್ತು ನಟಿ ನಯನತಾರಾ ಮುಂಬೈನ ಅಂಬಾನಿಯವರ ಗಣೇಶ ಚತುರ್ಥಿ ಆಚರಣೆಯಲ್ಲಿ ಮತ್ತೆ ಒಂದಾಗಿದ್ದಾರೆ. ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ನಯನತಾರ ವೈಟ್ ಚೂಡಿದಾರ್ ಧರಿಸಿ ಅದಕ್ಕೆ ಗೋಲ್ಡನ್ ಝರಿ ಇರುವ ದುಪಟ್ಟಾ ಧರಿಸಿದ್ದಾರೆ. ವಿಘ್ನೇಶ್ ಶಿವನ್ ಕುರ್ತಾ ಪೈಜಾಮದಲ್ಲಿ ಕಾಣಿಸಿಕೊಂಡಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಹೊರತುಪಡಿಸಿ, ಸಂಭ್ರಮಾಚರಣೆಯಲ್ಲಿ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಗ ಅಬ್ರಾಮ್, ಮಗಳು ಸುಹಾನಾ ಖಾನ್ ಮತ್ತು ಅತ್ತೆ ಸೇರಿದಂತೆ ಕುಟುಂಬದೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸೂಪರ್ ಹಿಟ್ ಚಿತ್ರ ನೀಡಿರುವ 'ಜವಾನ್' ನಿರ್ದೇಶಕ ಅಟ್ಲಿ ತಮ್ಮ ಪತ್ನಿ ಪ್ರಿಯಾ ಅವರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಸೆಪ್ಟೆಂಬರ್ 19 ರಂದು ಮುಂಬೈನ ತಮ್ಮ ನಿವಾಸ ಆಂಟಿಲಿಯಾದಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ವೈಭವದಿಂದ ಆಚರಿಸಿದ್ದಾರೆ. ಗಣೇಶ ಚತುರ್ಥಿ ಆಚರಣೆಗಾಗಿ ಅಂಬಾನಿ ನಿವಾಸವನ್ನು ಹೂವುಗಳು ಮತ್ತು ಅದ್ಧೂರಿ ಸೆಟ್‌ಗಳಿಂದ ಅಲಂಕರಿಸಲಾಗಿತ್ತು.

ಹಬ್ಬದಲ್ಲಿ ನೀತಾ ಅಂಬಾನಿ ಆರು ಗಜಗಳ ಭಾರವಾದ ಮತ್ತು ಹೆಚ್ಚು ವರ್ಕ್‌ಗಳಿರುವ ಕಿತ್ತಳೆ ರೇಷ್ಮೆ ಸೀರೆ ಧರಿಸಿದ್ದರು. ಜೊತೆಗೆ ಸುಂದರವಾರ ಪಚ್ಚೆ ಮತ್ತು ವಜ್ರದ ಆಭರಣಗಳನ್ನು ಧರಿಸಿದ್ದರು. ಮುಖೇಶ್ ಅಂಬಾನಿ ಕೂಡ ಗಣೇಶ ಚತುರ್ಥಿ ಆಚರಣೆಗಾಗಿ ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬಿಳಿ ಕುರ್ತಾ ಸೆಟ್ ಧರಿಸಿದ್ದರು. ಅದರ ಮೇಲೆ ಜಾಕೆಟ್ ಧರಿಸಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು.
'ಜವಾನ್'
'ಜವಾನ್' ಅಟ್ಲಿ ನಿರ್ದೇಶನದ ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಆಗಿದೆ. ವಿಕ್ರಮ್ ಸಿಂಗ್ ರಾಥೋಡ್ ಮತ್ತು ಆಜಾದ್ ಎಂಬ ಎರಡು ಪಾತ್ರಗಳಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಯನತಾರಾ ಜೊತೆಗೆ ಪ್ರಿಯಾಮಣಿ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಇದ್ದಾರೆ. ನಟಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ 'ಜವಾನ್' ಅಟ್ಲಿ, ನಯನತಾರಾ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಚೊಚ್ಚಲ ಬಾಲಿವುಡ್ ಸಿನಿಮಾವಾಗಿದೆ. ಛಾಯಾಗ್ರಾಹಕ ಜಿ.ಕೆ.ವಿಷ್ಣು, ಸಂಕಲನಕಾರ ರೂಬೆನ್ ಮತ್ತು ಕಲಾ ನಿರ್ದೇಶಕ ಮುತ್ತುರಾಜ್ ಕೂಡ 'ಜವಾನ್' ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.


Click it and Unblock the Notifications











