For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಕೇಸ್: ರಿಯಾ ಚಕ್ರವರ್ತಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದ ವ್ಯಕ್ತಿ ಅರೆಸ್ಟ್

  |

  ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಡ್ರಗ್ ಪೆಡ್ಲರ್‌ನನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೌವಿಕ್ ಚಕ್ರವರ್ತಿಗೆ ಡ್ರಗ್ಸ್ ತಂದು ಕೊಡ್ತಿದ್ದ ಪೆಡ್ಲರ್ ರಗೆಲ್ ಮಹಕಲ್ ಎಂಬ ವ್ಯಕ್ತಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

  ಡ್ರಗ್ಸ್ ಪ್ರಕರಣ: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನು ಮಂಜೂರುಡ್ರಗ್ಸ್ ಪ್ರಕರಣ: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನು ಮಂಜೂರು

  ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಯಾಮದಲ್ಲಿ ತನಿಖೆ ಆರಂಭವಾದ ಮೇಲೆ ರಗೆಲ್ ಮಹಕಲ್ ತಲೆಮರೆಸಿಕೊಂಡಿದ್ದ. ಇದೀಗ, ಪೆಡ್ಲರ್ ಮಹಕಲ್‌ನನ್ನು ಮುಂಬೈನ ಪಶ್ಚಿಮ ಉಪನಗರದಲ್ಲಿ ಎನ್‌ಸಿಬಿ ಬಂಧಿಸಿದೆ.

  ಡ್ರಗ್ಸ್ ಚೈನ್ ಬೆನ್ನತ್ತಿದ್ದ ಪೊಲೀಸರಿಗೆ ರಗೆಲ್ ಮಹಕಲ್ ಪ್ರಮುಖ ಡ್ರಗ್ ಪೆಡ್ಲರ್‌ ಎಂದು ತಿಳಿದು ಬಂದಿತ್ತು. ರಗೆಲ್ ಮಹಕಲ್ ಕೇಶ್ವಾನಿಗೆ ಡ್ರಗ್ಸ್ ಪೂರೈಸುತ್ತಿದ್ದ, ನಂತರ ಅದನ್ನು ಕೈಜಾನ್ ಎಂಬ ವ್ಯಕ್ತಿಗೆ ಹಸ್ತಾಂತರಿಸುತ್ತಿದ್ದನು. ಕೈಜಾನ್ ಅದನ್ನು ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್‌ಗೆ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

  ಅಂದ್ಹಾಗೆ, ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಮತ್ತು ಸಹೋದರ ಶೌವಿಕ್ ಚಕ್ರವರ್ತಿ ಸೆಪ್ಟೆಂಬರ್‌ ತಿಂಗಳಲ್ಲಿ ಅರೆಸ್ಟ್ ಆಗಿದ್ದರು. ನಂತರ ರಿಯಾಗೆ ಅಕ್ಟೋಬರ್ 7 ರಂದು ಬಾಂಬೆ ಹೈ ಕೋರ್ಟ್‌ ಜಾಮೀನು ನೀಡಿತ್ತು, ಆ ಬಳಿಕ ರಿಯಾ ಸಹೋದರನಿಗೂ ಜಾಮೀನು ಸಿಕ್ಕಿತ್ತು.

  ಡ್ರಗ್ಸ್ ಪ್ರಕರಣ: ರಿಯಾ ಸಹೋದರನ ವಿರುದ್ಧ ಪ್ರಕರಣ ಸೂಕ್ತವಲ್ಲ ಎಂದ ನ್ಯಾಯಾಲಯಡ್ರಗ್ಸ್ ಪ್ರಕರಣ: ರಿಯಾ ಸಹೋದರನ ವಿರುದ್ಧ ಪ್ರಕರಣ ಸೂಕ್ತವಲ್ಲ ಎಂದ ನ್ಯಾಯಾಲಯ

  Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada

  ಜೂನ್ 14 ರಂದು ಮುಂಬೈನ ತನ್ನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದೇಹ ಸಿಕ್ಕಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ನಿರ್ಧರಿಸಿ ತನಿಖೆ ಆರಂಭಿಸಿದರು. ತನಿಖೆಯ ನಡುವೆ ಡ್ರಗ್ಸ್ ಅನುಮಾನವೂ ವ್ಯಕ್ತವಾದ ಹಿನ್ನೆಲೆ ಆ ಆಯಾಮದಲ್ಲೂ ಪೊಲೀಸರು ಹುಡುಕಾಟ ಶುರು ಮಾಡಿದ್ದರು.

  English summary
  Sushant singh rajput death case: NCB Arrests Drug Peddler Regel Mahakal who supplies drugs to Rhea and Showik chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X