For Quick Alerts
  ALLOW NOTIFICATIONS  
  For Daily Alerts

  ಸುಶಾಂತ್‌ಗೆ ಮಾದಕ ವಸ್ತು ಕೊಟ್ಟಿದ್ದು ಪ್ರೇಯಸಿ ರಿಯಾ: ಎನ್‌ಸಿಬಿ

  |

  ನಟ ಸುಶಾಂತ್ ಸಿಂಗ್‌ ಸಾವಿನ ಬಳಿಕ ಹೊರಬಿದ್ದ ಮಾದಕ ಜಾಲದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಸಲ್ಲಿಸಿರುವ ಹೊಸ ಚಾರ್ಜ್‌ ಶೀಟ್‌ನಲ್ಲಿ, ಮಾದಕ ವ್ಯಸನಿಯಾಗಿದ್ದ ಸುಶಾಂತ್‌ ಸಿಂಗ್‌ಗೆ ಆತನ ಪ್ರೇಯಸಿ ರಿಯಾ ಚಕ್ರವರ್ತಿ ಮಾದಕ ವಸ್ತು (ಗಾಂಜಾ) ನೀಡಿದ್ದರು ಎಂದು ಆರೋಪಿಸಲಾಗಿದೆ.

  ಪ್ರಕರಣದ 35 ಆರೋಪಿಗಳ ವಿರುದ್ಧ ಈವರೆಗೆ 38 ಚಾರ್ಜ್‌ ಶೀಟ್‌ಗಳನ್ನು ಎನ್‌ಸಿಬಿಯು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದೀಗ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್‌ಗೆ ಗಾಂಜಾ ನೀಡುತ್ತಿದ್ದಳು ಎಂದು ಎನ್‌ಸಿಬಿ ಆರೋಪಿಸಿದೆ.

  ಆರೋಪಿ ನಂಬರ್ 10, ರಿಯಾ ಚಕ್ರವರ್ತಿ, ಸ್ಯಾಮುಯೆಲ್ ಮಿರಾಂಡಾ, ಶೋವಿಕ್ ಚಕ್ರವರ್ತಿ, ದೀಪೇಶ್ ಸಾವಂತ್ ಹಾಗೂ ಇತರರಿಂದ ಗಾಂಜಾ ಅನ್ನು ಪಡೆದು ಅದನ್ನು ಸುಶಾಂತ್‌ಗೆ ನೀಡುತ್ತಿದ್ದಳು. ಮಾರ್ಚ್ 2020 ರಲ್ಲಿ ಹಣ ಸಂದಾಯ ಸಹ ಮಾಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ ಎನ್‌ಸಿಬಿ.

  ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ತೀವ್ರ ಮಾದಕ ವ್ಯಸನಿ ಆಗಿದ್ದ ಎಂದು ಸಹ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ರಿಯಾ ಚಕ್ರವರ್ತಿ ಗಾಂಜಾ ಅಲ್ಲದೆ ಬೇರೆ ಮಾದಕ ವಸ್ತುಗಳನ್ನು ಸುಶಾಂತ್‌ಗೆ ನೀಡಿದ್ದರ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿಲ್ಲ.

  ಎಲ್ಲ ಆರೋಪಿಗಳ ಬಗ್ಗೆ ಸಾಮಾನ್ಯ ಟಿಪ್ಪಣಿ ಹೀಗಿದೆ

  ಎಲ್ಲ ಆರೋಪಿಗಳ ಬಗ್ಗೆ ಸಾಮಾನ್ಯ ಟಿಪ್ಪಣಿ ಹೀಗಿದೆ

  ಪ್ರಕರಣದ ಎಲ್ಲ 35 ಆರೋಪಿಗಳ ಬಗ್ಗೆ ಬರೆದ ಟಿಪ್ಪಣಿಯಲ್ಲಿ, ಮಾರ್ಚ್ 2020 ರಿಂದ ಡಿಸೆಂಬರ್ 2020 ರ ವರೆಗೆ ಇವರು ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಗಾಂಜಾ, ಕೊಕೇನ್, ಚರಸ್, ಎಲ್‌ಎಸ್‌ಡಿಗಳ ಸೇವನೆ, ಮಾರಾಟ, ದಾಸ್ತಾನುಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ರಿಯಾ ಚಕ್ರವರ್ತಿ, ಗಾಂಜಾ ಅಥವಾ ಇನ್ನಾವುದೇ ಮಾದಕ ವಸ್ತು ಸೇವಿಸಿರುವ ಬಗ್ಗೆಯಾಗಲಿ, ಸುಶಾಂತ್‌ಗೆ ಗಾಂಜಾ ಹೊರತಾಗಿ ಬೇರೆ ಮಾದಕ ವಸ್ತುಗಳನ್ನು ನೀಡಿರುವ ಬಗ್ಗೆಯಾಗಲಿ ಉಲ್ಲೇಖವಿಲ್ಲ.

  ರಿಯಾ ವಿರುದ್ಧ ಎನ್‌ಸಿಬಿ ಆರೋಪ

  ರಿಯಾ ವಿರುದ್ಧ ಎನ್‌ಸಿಬಿ ಆರೋಪ

  ರಿಯಾ ಚಕ್ರವರ್ತಿ ವಿರುದ್ಧ ಸೆಕ್ಷನ್ 8[c] 20[b][ii]A, 27A,28, 29 & 30 of NDPS ಆಕ್ಟ್ 1985 ಗಳ ಅಡಿ ಆರೋಪ ಹೊರಿಸಲಾಗಿದೆ. ಎನ್‌ಡಿಪಿಎಸ್ ಸೆಕ್ಷನ್ 8 (ಸಿ)ಯು, ವೈದ್ಯಕೀಯ ಅಥವಾ ವೈಜ್ಞಾನಿಕ ಉದ್ದೇಶಗಳನ್ನು ಹೊರತುಪಡಿಸಿ, ಉತ್ಪಾದಿಸಿ, ತಯಾರಿಸಿ, ಸ್ವಾಧೀನಪಡಿಸಿಕೊಳ್ಳಿ, ಮಾರಾಟ ಮಾಡಿ, ಖರೀದಿಸಿ, ಸಾಗಣೆ, ಗೋದಾಮು, ಬಳಕೆ, ಬಳಕೆ, ಅಂತರ-ರಾಜ್ಯ ಆಮದು, ಅಂತರ-ರಾಜ್ಯ ರಫ್ತು, ಭಾರತಕ್ಕೆ ಆಮದು, ಭಾರತದಿಂದ ರಫ್ತು ಅಥವಾ ಯಾವುದೇ ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ವಸ್ತುವನ್ನು ಬಳಕೆ ವಿರುದ್ಧದ ಕಾಯಿದೆಯಾಗಿದೆ.

  ರಿಯಾ ಅನ್ನು ಆರೋಪಿ ಮಾಡಲಾಗಿತ್ತು

  ರಿಯಾ ಅನ್ನು ಆರೋಪಿ ಮಾಡಲಾಗಿತ್ತು

  ಬಾಲಿವುಡ್‌ನ ಖ್ಯಾತ ಯುವನಟ ಸುಶಾಂತ್ ಸಿಂಗ್ ರಜಪೂತ್ 2020 ರ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್‌ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದೂಷಿಸಲಾಯ್ತು. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‌ನ ನೆಪೊಟಿಸಮ್ ಕಾರಣವೆಂಬ ಚರ್ಚೆ ದೊಡ್ಡಮಟ್ಟದಲ್ಲಿ ಆರಂಭವಾಯ್ತು.

  ಬಾಲಿವುಡ್‌ ಅನ್ನು ಅಲುಗಾಡಿಸಿದ ಸುಶಾಂತ್ ಸಾವು

  ಬಾಲಿವುಡ್‌ ಅನ್ನು ಅಲುಗಾಡಿಸಿದ ಸುಶಾಂತ್ ಸಾವು

  ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್ ಪ್ರಕರಣ ಬಾಲಿವುಡ್‌ನ ದೊಡ್ಡ-ದೊಡ್ಡ ನಟ-ನಟಿಯರಿಗೆ ತೀವ್ರ ಮುಜುಗರ ಉಂಟು ಮಾಡಿತು. ದೀಪಿಕಾ ಪಡುಕೋಣೆಯಿಂದ ಆರಂಭಿಸಿ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಅರ್ಜುನ್ ರಾಮ್‌ಪಾಲ್, ಮಹೇಶ್ ಭಟ್ ಇನ್ನೂ ಹಲವರಿಗೆ ನೊಟೀಸ್ ನೀಡಿ ಎನ್‌ಸಿಬಿಯು ವಿಚಾರಣೆ ನಡೆಸಿತು. ರಿಯಾ ಚಕ್ರವರ್ತಿಯ ಬಂಧನವೂ ಆಯಿತು.

  English summary
  NCB charges Rhea Chakraborthy in Sushanth Singh drug case. NCB alleged that Rhea Chakraborthy gave drugs to Sushant Singh.
  Thursday, July 14, 2022, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X