ಕಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ದಾಳಿ
ಹಿಂದಿಯ ಖ್ಯಾತ ಕಮಿಡಿಯನ್, ನಿರೂಪಕಿ, ನಟಿ ಭಾರತಿ ಸಿಂಗ್ ನಿವಾಸದ ಮೇಲೆ ಎನ್‌ಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಭಾರತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾ ಮಾದಕ ವಸ್ತು ಸೇವಿಸುತ್ತಾರೆ ಹಾಗೂ ಮನೆಯಲ್ಲಿ ಮಾದಕ ವಸ್ತು ಶೇಖರಿಸಿಟ್ಟಿದ್ದಾರೆ ಎಂಬ ಅನುಮಾನದ ಮೇಲೆ ಎನ್‌ಸಿಬಿ ಅಧಿಕಾರಿಗಳು ಭಾರತಿ ಸಿಂಗ್-ಹರ್ಷ್ ಮನೆಯ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿದ್ದರು.
ಭಾರತಿ ಸಿಂಗ್ ಮನೆಯಲ್ಲಿ ಶೋಧ ಕಾರ್ಯವನ್ನು ಎನ್‌ಸಿಬಿ ಅಧಿಕಾರಿಗಳು ನಡೆಸಿದ್ದು, ಶೋಧದ ಫಲಿತಾಂಶದ ಬಗ್ಗೆ ಅಧಿಕಾರಿಗಳು ಇನ್ನಷ್ಟೆ ಮಾಹಿತಿ ನೀಡಬೇಕಿದೆ. ಭಾರತಿ ಸಿಂಗ್ ಕನ್ನಡದ 'ರಂಗನ್ ಸ್ಟೈಲ್' ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್‌ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್‌ಸಿಬಿಯು ಈ ವರೆಗೆ ಹಲವರನ್ನು ಬಂಧಿಸಿದ್ದು, ಖ್ಯಾತ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದೆ.ಭಾರತಿ ಕಾಮಿಡಿ ಸರ್ಕಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಹಲವು ವರ್ಷ ಕಾಮಿಡಿ ಶೋ ನಡೆಸಿದ್ದರು, ಪ್ರಸ್ತುತ ಭಾರತಿ ಮತ್ತು ಆಕೆಯ ಪತಿ 'ಗ್ರೇಟ್ ಇಂಡಿಯನ್ ಡಾನ್ಸರ್' ಶೋ ನಿರೂಪಿಸುತ್ತಾರೆ.ಭಾರತಿ ಕಪಿಲ್ ಶರ್ಮಾ ಶೋ ನ ಭಾಗವೂ ಆಗಿದ್ದಾರೆ.
Recommended Video
ಕೆಲವು ದಿನಗಳ ಹಿಂದಷ್ಟೆ ನಟ ಅರ್ಜುನ್ ರಾಮ್‌ಪಾಲ್ ಹಾಗೂ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಮನೆಯ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅರ್ಜುನ್ ರಾಮ್‌ಪಾಲ್ ಗೆಳತಿಯ ಸಹೋದರನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.


Click it and Unblock the Notifications











