twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಮನೆ ಸಹಾಯಕನ ಆರೋಪ ನಿರಾಕರಿಸಿದ ಎನ್‌ಸಿಬಿ

    |

    ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಇದುವರೆಗೂ ಸ್ಪಷ್ಟನೆ ಸಿಕ್ಕಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಈ ಸಾವಿನ ಕುರಿತಾದ ತನಿಖೆ ನಡೆಯುತ್ತಿದ್ದು, ಇಡೀ ದೇಶ ಗಮನಿಸಿದೆ. ಆರಂಭದಲ್ಲಿ ಮುಂಬೈ ಪೊಲೀಸರು, ನಂತರ ಎನ್‌ಸಿಬಿ ಪೊಲೀಸರು ಆಮೇಲೆ ಸಿಬಿಐ ಅಧಿಕಾರಿಗಳು ಈ ತನಿಖೆ ಮಾಡಿದ್ದಾರೆ.

    ಸುಶಾಂತ್ ಸಿಂಗ್ ಸಾವಿನ ತನಿಖೆಯಿಂದ ಬಿಟೌನ್ ಇಂಡಸ್ಟ್ರಿಯಲ್ಲಿದ್ದ ಡ್ರಗ್ಸ್ ಮಾಫಿಯಾ ಸಹ ಹೊರಬಿದ್ದಿದೆ. ಈ ಕೇಸ್‌ನಲ್ಲಿ ಹಲವರು ಬಂಧನವಾಗಿ ವಿಚಾರಣೆ ಎದುರಿಸಿದ್ದಾರೆ. ಈ ಮಧ್ಯೆ ಸುಶಾಂತ್ ಸಿಂಗ್ ಮನೆ ಸಹಾಯಕ ದೀಪೇಶ್ ಸಾವಂತ್ ಎನ್‌ಸಿಬಿ ಅಧಿಕಾರಿಗಳ ವಿರುದ್ಧವೇ ಕೇಸ್ ದಾಖಲಿಸಿದ್ದರು. ತನ್ನನ್ನು ಅಕ್ರಮವಾಗಿ ಬಂಧಿಸಿಲಾಗಿತ್ತು, ಅದಕ್ಕಾಗಿ 10 ಲಕ್ಷ ಪರಿಹಾರ ನೀಡಬೇಕೆಂದು ಕೇಳಿದ್ದರು. ಈ ಆರೋಪವನ್ನು ಎನ್‌ಸಿಬಿ ನಿರಾಕರಿಸಿದೆ. ಮುಂದೆ ಓದಿ...

    ದೀಪೇಶ್ ಮನವಿ ಮೇರೆಗೆ ಉಳಿಸಿಕೊಂಡೆವು

    ದೀಪೇಶ್ ಮನವಿ ಮೇರೆಗೆ ಉಳಿಸಿಕೊಂಡೆವು

    ಬಂಧನಕ್ಕೊಳಗಾದ 24 ಗಂಟೆಗಳ ಒಳಗೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು, ಆದ್ರೆ ಬಂಧಿಸಿದ 36 ಗಂಟೆಗಳ ಬಳಿಕ ದಿಪೇಶ್ ಸಾವಂತ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಎಂದು ವಕೀಲರು ಅರ್ಜಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಆರೋಪವನ್ನು ಎನ್‌ಸಿಬಿ ತಳ್ಳಿ ಹಾಕಿದ್ದು, 'ದೀಪೇಶ್ ಮನವಿ ಮೆರೆಗೆ ಉಳಿಸಿಕೊಂಡೆವು' ಎಂದು ತಿಳಿಸಿದ್ದಾರೆ.

    ಎನ್‌ಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕಎನ್‌ಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕ

    ಒಪ್ಪಿಗೆ ನಂತರವೇ ಠಾಣೆಯಲ್ಲಿದ್ದರು

    ಒಪ್ಪಿಗೆ ನಂತರವೇ ಠಾಣೆಯಲ್ಲಿದ್ದರು

    ಎನ್‌ಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಆರೋಪವನ್ನು ನಿರಾಕರಿಸಿದ್ದಾರೆ. ದೀಪೇಶ್ ಸಾವಂತ್ ಅವರು ರಾತ್ರಿಯಲ್ಲಿ ಕಚೇರಿಯಲ್ಲಿ ಉಳಿಯಲು ಅನುಮತಿ ನೀಡುವಂತೆ ಅಧಿಕಾರಿಗಳನ್ನು ಕೋರಿದರು, ಇದರಿಂದಾಗಿ ಅವರು ಮರುದಿನ ಬೆಳಿಗ್ಗೆ ಹೇಳಿಕೆಯನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಸ್ವಂತ ಇಚ್ಛೆಯಂತೆ ಅವರನ್ನು ಉಳಿಸಿಕೊಳ್ಳಲಾಗಿದೆ. ಅಧಿಕಾರಿಗಳಿಂದ ಉಪಾಹಾರ ಮತ್ತು ಇತರ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಆರೋಪ?

    ಏನಿದು ಆರೋಪ?

    ಸೆಪ್ಟೆಂಬರ್ 5 ರಂದು ರಾತ್ರಿ 8 ಗಂಟೆಗೆ ದೀಪೇಶ್ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ತಮ್ಮ ದಾಖಲೆಗಳಲ್ಲಿ ತೋರಿಸಿದ್ದಾರೆ. ಆದರೆ ಸೆಪ್ಟೆಂಬರ್ 4 ರಂದು ರಾತ್ರಿ 10 ಗಂಟೆಗೆ ಬಂಧನ ಮಾಡಲಾಗಿದೆ ಮತ್ತು ಸೆಪ್ಟೆಂಬರ್ 6 ರಂದು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ದೀಪೇಶ್ ಸಾವಂತ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ದೀಪೇಶ್ ಸಾವಂತ್ ಅವರನ್ನು ತಪ್ಪಾಗಿ ಬಂಧಿಸಿ ನಂತರ ಪ್ರೋಟೋಕಾಲ್ ಪಾಲಿಸದ ಕಾರಣ ಎನ್‌ಸಿಬಿಯಿಂದ 10 ಲಕ್ಷ ರೂ ಪರಿಹಾರ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ಬೇಡಿಕೆ ಇಡಲಾಗಿದೆ.

    ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್

    Recommended Video

    ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham
    ವಿಚಾರಣೆ ಮುಂದೂಡಿಕೆ

    ವಿಚಾರಣೆ ಮುಂದೂಡಿಕೆ

    ಸದ್ಯ ಎರಡು ಕಡೆ ವಕೀಲ ವಾದ ಆಲಿಸಿರುವ ಎಸ್.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್ ಅವರ ನ್ಯಾಯಪೀಠ ಈ ಕೇಸ್‌ಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದ್ದಾರೆ.

    English summary
    NCB Denies illegally detaining Sushant singh’s House Help Dipesh Sawant.
    Wednesday, November 25, 2020, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X