For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್‌ ರಜಪೂತ್ ಮನೆಗೆಲಸದವರಿಗೆ ಎನ್‌ಸಿಬಿ ನೊಟೀಸ್

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಹೊರ ಬಿದ್ದ ಬಾಲಿವುಡ್‌ ಡ್ರಗ್ಸ್ ಪ್ರಕರಣದ ತನಿಖೆ ವರ್ಷದಿಂದಲೂ ನಡೆಯುತ್ತಲೇ ಇದ್ದು ಈ ವರೆಗೆ ನೂರಾರು ಮಂದಿಯ ವಿಚಾರಣೆ, ಹಲವರ ಬಂಧನ ಆಗಿದೆ.

  ಸುಶಾಂತ್ ಸಿಂಗ್ ರಜಪೂತ್ ರೂಮ್‌ಮೇಟ್ ಆಗಿದ್ದ ಸಿದ್ಧಾರ್ಥ್ ಪಿತಾನಿ ಅನ್ನು ಕೆಲವೇ ದಿನಗಳ ಹಿಂದೆ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಸುಶಾಂತ್‌ ಸಿಂಗ್‌ರ ಮಾಜಿ ನೌಕರರಿಗೆ ಎನ್‌ಸಿಬಿಯು ನೊಟೀಸ್ ಜಾರಿ ಮಾಡಿದೆ.

  ಸುಶಾಂತ್ ಸಿಂಗ್ ರಜಪೂತ್‌ ಮನೆಯಲ್ಲಿ ನೌಕರರಾಗಿದ್ದ ನೀರಜ್ ಮತ್ತು ಕೇಶವ್ ಅವರುಗಳಿಗೆ ಎನ್‌ಸಿಬಿಯು ನೊಟೀಸ್ ನೀಡಿದ್ದು ಇಬ್ಬರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಮೇ 26 ರಂದು ಸುಶಾಂತ್ ಮಾಜಿ ರೂಮ್‌ಮೇಟ್ ಸಿದ್ಧಾರ್ಥ್ ಅನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು. ಈಗ ಸಿದ್ಧಾರ್ಥ್ ಹೇಳಿಕೆ ಆಧರಿಸಿ ನೀರಜ್ ಹಾಗೂ ಕೇಶವ್‌ಗೆ ನೊಟೀಸ್ ನೀಡಿದೆ ಎನ್‌ಸಿಬಿ.

  ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಡ್ರಗ್ಸ್ ಪ್ರಕರಣ ಹೊರಬಂದಿತ್ತು. ಡ್ರಗ್ಸ್ ಪ್ರಕರಣದ ವಿಚಾರಣೆ ಆರಂಭಿಸಿದ ಎನ್‌ಸಿಬಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ, ರಿಯಾ ಸಹೋದರ ಸೇರಿ ಇನ್ನೂ ಹಲವರನ್ನು ಬಂಧಿಸಿತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ, ಮಹೇಶ್ ಭಟ್, ಅರ್ಜುನ್ ರಾಮ್‌ಪಾಲ್ ಇನ್ನೂ ಹಲವರನ್ನು ಎನ್‌ಸಿಬಿಯು ವಿಚಾರಣೆ ನಡೆಸಿತು.

  Protima Bediಯ ಜೀವನ ಚರಿತ್ರೆ ವೆಬ್ ಸಿರೀಸ್ ನಲ್ಲಿ | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗದ ಸ್ಥಿತಿಯಲ್ಲಿ ಶವವಾಗಿ ದೊರೆತರು. ಸುಶಾಂತ್ ಸಿಂಗ್‌ರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜೋರು ದನಿ ಎದ್ದಿತ್ತು. ಸುಶಾಂತ್ ಕುಟುಂಬದವರು ಸಹ ರಿಯಾ ವಿರುದ್ಧ ದೂರು ದಾಖಲಿಸಿದರು. ಪ್ರಕರಣದ ತನಿಖೆ ನಡೆಸಿದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತಪಡಿಸಿದರು. ಪ್ರಕರಣ ಸಿಬಿಐಗೆ ಹೋಗಿದ್ದು ತನಿಖೆ ಜಾರಿಯಲ್ಲಿದೆ.

  English summary
  NCB gave notice to Sushant Singh Rajput's domestic helper Neeraj and Keshav.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X