ನಟ ಅರ್ಮಾನ್ ಕೊಹ್ಲಿ ಮನೆ ಮೇಲೆ ಎನ್‌ಸಿಬಿ ದಾಳಿ: ಡ್ರಗ್ಸ್ ವಶ

ಸದಾ ವಿವಾದಗಳಿಂದ ಸುದ್ದಿಯಾಗುವ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಈಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಡ್ರಗ್ಸ್ ಸಂಬಂಧಿತ ಆರೋಪದಲ್ಲಿ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ಶನಿವಾರ (ಆಗಸ್ಟ್ 28) ಎನ್‌ಸಿಬಿ (Narcotics Control Bureau) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅರ್ಮಾನ್ ಮನೆಯಲ್ಲಿ ಮಾದಕ ದ್ರವ್ಯ ಸಿಕ್ಕಿದೆ ಎಂದು ವರದಿಯಾಗಿದೆ.

ಮನೆಯಲ್ಲಿ ಡ್ರಗ್ಸ್ ಪತ್ತೆಯಾದ ಹಿನ್ನೆಲೆ ನಟ ಅರ್ಮಾನ್ ಅವರನ್ನು ವಶಕ್ಕೆ ಪಡೆದ ಎನ್‌ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ದಕ್ಷಿಣ ಮುಂಬೈನ ಎನ್‌ಸಿಬಿ ಕಚೇರಿಗೆ ಕರೆತಂದಿದ್ದಾರೆ. ಇತ್ತೀಚಿಗಷ್ಟೆ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದ ಡ್ರಗ್ ಪೆಡ್ಲರ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನಿಗೆ ಅರ್ಮಾನ್ ಕೊಹ್ಲಿ ಜೊತೆ ಸಂಬಂಧವಿದ್ದಿದ್ದು ತಿಳಿದು ಬಂದಿದೆ. ಹಾಗಾಗಿ, ನಟನ ಮನೆ ಮೇಲೆ ದಾಳಿ ಮಾಡಲಾಗಿದೆ.

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಆರಂಭಿಸಿದ ಆಪರೇಷನ್ ರೋಲಿಂಗ್ ಥಂಡರ್‌ನ ಭಾಗವಾಗಿದ್ದು, ಈ ಕಾರ್ಯಾಚರಣೆಯ ಭಾಗವಾಗಿ ಮುಂಬೈನ 15 ಸ್ಥಳಗಳಲ್ಲಿ ಶನಿವಾರ ಬೆಳಿಗ್ಗೆ ದಾಳಿ ನಡೆಸಲಾಯಿತು. ಇನ್ನು ಹಲವು ಕಡೆ ದಾಳಿ ಮುಂದುವರಿದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮುಂದೆ ಓದಿ...

ಅರ್ಮಾನ್ ಕೊಹ್ಲಿಯ ವಿವಾದಗಳು

ಅರ್ಮಾನ್ ಕೊಹ್ಲಿಯ ವಿವಾದಗಳು

ಈ ಹಿಂದೆ 2018ರಲ್ಲಿ ಅರ್ಮಾನ್ ಕೊಹ್ಲಿ ಸುಮಾರು 41 ಬಾಟಲಿಗಳ ಸ್ಕಾಚ್ ವಿಸ್ಕಿ ಹೊಂದಿದ್ದಕ್ಕಾಗಿ ಅಬಕಾರಿ ಇಲಾಖೆ ಬಂಧಿಸಿತ್ತು. 12 ಆಲ್ಕೋಹಾಲ್ ಬಾಟಲಿಗಳನ್ನು ಮನೆಯಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅರ್ಮಾನ್ 41 ಬಾಟಲಿಗಳನ್ನು ಹೊಂದಿದ್ದರು. ಅವುಗಳಲ್ಲಿ ಹೆಚ್ಚಿನವು ವಿದೇಶಿ ಬ್ರಾಂಡ್‌ಗಳಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮೊದಲು ತನ್ನ ಗೆಳತಿ ನೀರು ರಾಂಧವಾ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಅರ್ಮಾನ್ ಬಂಧನವಾಗಿತ್ತು. ಕೇಸ್ ಸಹ ದಾಖಲಾಗಿತ್ತು. ಒಂದು ವಾರಗಳ ಕಾಲ ತಲೆಮರಿಸಿಕೊಂಡಿದ್ದ ಅರ್ಮಾನ್ ಕೊನೆಗೆ ಲೋನವಾಲದಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಗೆಳತಿ ನೀರು ರಾಂಧವಾ ಈ ಕೇಸ್‌ ಹಿಂಪಡೆದರು.

ಗೌರವ ದೀಕ್ಷಿತ್ ಬಂಧನ

ಗೌರವ ದೀಕ್ಷಿತ್ ಬಂಧನ

ಕಳೆದ ಏಪ್ರಿಲ್‌ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ನಟ ಅಜಾಜ್ ಖಾನ್ ವಿಚಾರಣೆ ವೇಳೆ ಗೌರವ್ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ಪೊಲೀಸರು ಗೌರವ್ ಗಾಗಿ ಬಲೆ ಬೀಸಿದ್ದರು. ಗೌರವ್ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಅಪಾರ ಪ್ರಮಾಣದ ಮಾದಕದ್ರವ್ಯ ಪತ್ತೆಯಾಗಿತ್ತು. ಆದರೆ ಪೊಲೀಸರ ಕಂಡ ತಕ್ಷಣ ನಟ ಗೌರವ್ ಮತ್ತು ಆವರ ಸ್ನೇಹಿತರು ಓಡಿ ಹೋಗಿದ್ದರು. ಅಂದಿನಿಂದ ಮುಂಬೈ ಪೊಲೀಸರು ಗೌರವ್ ಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಗೌರವ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರಿಯಾ ಚಕ್ರವರ್ತಿ ಬಂಧನ ಆಗಿತ್ತು

ರಿಯಾ ಚಕ್ರವರ್ತಿ ಬಂಧನ ಆಗಿತ್ತು

ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣ ಬಹಳ ದೊಡ್ಡ ಸಂಚಲನ ಸೃಷ್ಟಿಸಿದೆ. ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಈ ಕೇಸ್ ಹೆಚ್ಚು ಸದ್ದು ಮಾಡಿದೆ. ಈ ಕೇಸ್ ಬೆನ್ನತ್ತಿದೆ ಎನ್‌ಸಿಬಿ ಹಲವು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದರು. ನಟಿ ಹಾಗೂ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಟಿ ರಿಯಾ ಒಂದು ತಿಂಗಳು ಜೈಲಿನಲ್ಲಿದ್ದರು. ತದನಂತರ ಜಾಮೀನು ಪಡೆದು ಹೊರಬಂದರು.

ಸ್ಟಾರ್ ಸೆಲೆಬ್ರಿಟಿಗಳ ವಿಚಾರಣೆ ಆಗಿದೆ

ಸ್ಟಾರ್ ಸೆಲೆಬ್ರಿಟಿಗಳ ವಿಚಾರಣೆ ಆಗಿದೆ

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್‌ನ ಹಲವು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕರನ್ನು ವಿಚಾರಣೆ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್ ಕೇಸ್ ವಿಚಾರಣೆಯಲ್ಲಿದ್ದು ನಟಿ ಸಂಜನಾ ಮತ್ತು ರಾಗಿಣಿ ಜೈಲು ವಾಸ ಅನುಭವಿಸಿ ಜಾಮೀನು ಪಡೆದು ಬಂದಿದ್ದಾರೆ. ಇನ್ನು ತೆಲುಗಿನಲ್ಲಿ ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ಇಡಿ ಇಲಾಖೆ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು, ರವಿತೇಜ, ರಕುಲ್ ಪ್ರೀತ್ ಸಿಂಗ್, ಚಾರ್ಮಿ ಕೌರ್, ರಾಣಾ ದಗ್ಗುಬಾಟಿ, ಪೂರಿ ಜಗನ್ನಾಥ್, ಮುಮೈತ್ ಖಾನ್ ಸೇರಿದಂತೆ ಪ್ರಮುಖ 12 ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಿದೆ.

More from Filmibeat

English summary
Drugs were recovered during the NCB raid at actor Armaan Kohli's residence in Mumbai. The actor will now be questioned in the agency's office: NCB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X