ನಟಿ ರಿಯಾ ಚಕ್ರವರ್ತಿ ಮನೆ ಮೇಲೆ NCB ಅಧಿಕಾರಿಗಳ ದಾಳಿ

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಂದು ಬೆಳ್ಳಂಬೆಳಗ್ಗೆ ಮಾದಕ ವಸ್ತು ನಿಯಂತ್ರಣ ಇಲಾಖೆ ಅಧಿಕಾರಿಗಳು, ನಟಿ ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ರಿಯಾ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.

Recommended Video

ರಾಗಿಣಿ ಮನೆಗೆ ಪೋಲೀಸರ ಎಂಟ್ರಿ | Filmibeat Kannada

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್ ಸೇರಿದ್ದಂತೆ ಅನೇಕ ಡ್ರಗ್ಸ್ ಪೆಡ್ಲರ್ ಗಳ ಜೊತೆಗಿನ ವಾಟ್ಸಪ್ ಚಾಟ್ ಬಹಿರಂಗವಾದ ಬಳಿಕ ಈ ದಾಳಿ ನಡೆದಿದೆ.

ನಟಿ ರಿಯಾ, ಆಕೆಯ ಸಹೋದರ ಮತ್ತು ಸುಶಾಂತ್ ಸಿಂಗ್ ವ್ಯವಸ್ಥಾಪಕ ಸ್ಯಾಮ್ಯುಲ್ ಮಿರಾಂಡಾಗೆ ಮಾದಕ ವಸ್ತು ಜಾಲದ ಜೊತೆ ಸಂಪರ್ಕವಿರುವುದು ಬಹಿರಂಗವಾಗಿದೆ. ಈ ಸಂಬಂಧ ಈಗಾಗಲೆ ಎನ್ ಸಿ ಬಿ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಬಂಧಿತರು ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಜೊತೆ ಸಂಪರ್ಕದಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ.

NCB Officers Raid On Actress Rhea Chakraborty House

ಸುಶಾಂತ್ ಸಿಂಗ್ ಪ್ರಕರಣವನ್ನು ಡ್ರಗ್ ಆ್ಯಂಗಲ್ ನಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಬಳಿಕ ಮಾದಕ ವಸ್ತು ನಿಯಂತ್ರಣ ಇಲಾಖೆ ಆಗಸ್ಟ್ 25ರಂದು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ, ಸಹೋದರ ಶೋವಿಕ್, ಗೌರವ್ ಆರ್ಯ, ಜಯ ಸಹಾ, ಶ್ರುತಿ ಮೋದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಸಿತ್ತು.

ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದವರು, ಸುಶಾಂತ್ ಸಿಂಗ್ ಮನೆಯ ಸಿಬ್ಬಂದಿ, ಸ್ನೇಹಿತರು ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಇಡಿ ಮತ್ತು ಸಿಬಿಐ ವಿಚಾರಣೆಯ ಜೊತೆಗೆ NCB ತನಿಖೆಯೂ ನಡೆಯುತ್ತಿದೆ.

More from Filmibeat

English summary
Narcotics Control Cureau officers raid on Actress Rhea Chakraborty house in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X