ನಟ ಅರ್ಜುನ್ ರಾಂಪಲ್ ನಿವಾಸದ ಮೇಲೆ ಎನ್‌ಸಿಬಿ ದಾಳಿ

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿರುವ ಎನ್‌ಸಿಬಿ ಅಧಿಕಾರಿಗಳು ಸೋಮವಾರ ನಟ ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

ಇದಕ್ಕೂ ಮುಂಚೆ ಅರ್ಜುನ್ ರಾಂಪಾಲ್ ಅವರ ಗರ್ಲ್ ಫ್ರೆಂಡ್ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಸಹೋದರನನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೆ ಅರ್ಜುನ್ ಮನೆ ಪರಿಶೀಲನೆ ನಡೆಸಿರುವುದು ಅನುಮಾನ ಮೂಡಿಸಿದೆ.

ಇನ್ನು ಬಾಲಿವುಡ್ ನಿರ್ಮಾಪಕ ಫಿರೋಜ್ ನಾದಿಯಾಡ್ವಾಲಾ ಅವರ ಪತ್ನಿಯನ್ನು ಭಾನುವಾರ ಎನ್‌ಸಿಬಿ ಬಂಧಿಸಲಾಗಿದೆ. ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದರೂ ಹಾಜರಾಗಲಿಲ್ಲ. ನಂತರ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು.

NCB raid at The actor Arjun Rampal Residence in Mumbai

ನಿರ್ಮಾಪಕನ ಪತ್ನಿ ಶಬಾನಾ ಸಯೀದ್ ಅವರನ್ನು ಬಂಧಿಸಿ, ಅವರ ಮನೆಯಲ್ಲಿ ಸುಮಾರು 10 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

ಅಂದ್ಹಾಗೆ, ಅರ್ಜುನ್ ರಾಂಪಾಲ್ ಅವರ ಗರ್ಲ್ ಫ್ರೆಂಡ್ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಸಹೋದರನಿಗೆ ಶುಕ್ರವಾರ ಕೋರ್ಟ್ ಜಾಮೀನು ನೀಡಿದೆ. ಆದರೂ ಮತ್ತೊಂದು ಪ್ರಕರಣದಲ್ಲಿ ಗೇಬ್ರಿಯೆಲಾ ಸಹೋದರ ಅಗಿಸಿಲಾಸ್‌ನನ್ನು ಎನ್‌ಸಿಬಿ ವಶಕ್ಕೆ ಪಡೆದುಕೊಂಡಿದೆ.

ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಸಹೋದರ ದಕ್ಷಿಣ ಆಫ್ರಿಕಾದ ರಾಷ್ಟ್ರೀಯತೆ ಹೊಂದಿದ್ದಾರೆ.

More from Filmibeat

English summary
Narcotics Control Bureau conducts raid at the premises of actor Arjun Rampal in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X