For Quick Alerts
  ALLOW NOTIFICATIONS  
  For Daily Alerts

  BREAKING: ಶಾರುಖ್ ಖಾನ್ ನಿವಾಸದ ಮೇಲೆ ಮೇಲೆ ಎನ್‌ಸಿಬಿ ದಾಳಿ

  |

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಬಾಲಿವುಡ್ ಡ್ರಗ್ಸ್‌ ಕತೆಯ ಮತ್ತೊಂದು ಮಜಲು ತೆರೆದುಕೊಂಡಂತಿದೆ. ಇದೀಗ ಶಾರುಖ್ ಖಾನ್ ಮನೆಯ ಮೇಲೆ ಎನ್‌ಸಿಬಿ ದಾಳಿ ನಡೆಸಿದೆ. ಜೊತೆಗೆ ನಟಿ ಅನನ್ಯಾ ಪಾಂಡೆ ಮನೆ ಮೇಲೂ ದಾಳಿ ಮಾಡಲಾಗಿದೆ.

  ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಹಾಗೂ ಆತನ ಸಹೋದರಿ ಸುಹಾನಾ ಖಾನ್ ಅವರುಗಳಿಗೆ ಅನನ್ಯಾ ಪಾಂಡೆ ಬಹಳ ಆಪ್ತ ಗೆಳತಿ. ಆರ್ಯನ್ ಖಾನ್ ವಿಚಾರಣೆ ವೇಳೆ ಬಹಿರಂಗವಾಗಿರುವ ಮಾಹಿತಿ ಆಧರಿಸಿ ಶಾರುಖ್ ಖಾನ್ ಹಾಗೂ ಅನನ್ಯಾ ಪಾಂಡೆ ಮನೆಗಳ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ ಎನ್‌ಸಿಬಿ ವಿಚಾರಣೆಗೆ ಹಾಜರಾಗುವಂತೆ ಅನನ್ಯಾ ಪಾಂಡೆಗೆ ನೊಟೀಸ್ ಜಾರಿ ಮಾಡಿದೆ ಎನ್‌ಸಿಬಿ. ಅನನ್ಯಾ ಪಾಂಡೆ ಬಾಲಿವುಡ್‌ನ ಜನಪ್ರಿಯ ನಟಿ ಹಾಗೂ ಹಿರಿಯ ನಟ ಚಂಕಿ ಪಾಂಡೆಯ ಪುತ್ರಿ.

  ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಲು ಹಾಗೂ ಮಾದಕ ವಸ್ತು ಸಿಗಬಹುದೆಂಬ ಕಾರಣಕ್ಕೆ ಶಾರುಖ್ ಮನೆಯ ಮೇಲೆ ಎನ್‌ಸಿಬಿ ದಾಳಿ ಮಾಡಿದೆ. ಎನ್‌ಸಿಬಿ ಅಧಿಕಾರಿಗಳು ಶಾರುಖ್ ಖಾನ್‌ರ ಮುಂಬೈನ ಭವ್ಯ ಮನೆ 'ಮನ್ನತ್' ಒಳಗೆ ಹೋಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಆರ್ಯನ್ ಖಾನ್ ವಿಚಾರಣೆ ವೇಲೆ ಹೊರಬಿದ್ದ ಹೊಸ ಮಾಹಿತಿ ಅನುಸಾರ ಈ ದಾಳಿಗಳು ನಡೆಯುತ್ತಿವೆ ಎಂದು ಎನ್‌ಸಿಬಿ ಹೇಳಿದೆ.

  ಶಾರುಖ್ ಖಾನ್ ಇಂದು ಬೆಳಿಗ್ಗೆಯಷ್ಟೆ ಪುತ್ರ ಆರ್ಯನ್ ಖಾನ್ ಅನ್ನು ನೋಡಲು ಆರ್ಥರ್ ರಸ್ತೆಯ ಜೈಲಿಗೆ ಭೇಟಿ ನೀಡಿದ್ದರು.

  English summary
  NCB raids on Shah Rukh Khan and Ananya Pande's house. NCB takes Ananya Pande to questioning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X