For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಕರಣ್ ಜೋಹರ್‌ ಗೆ ಎನ್‌ಸಿಬಿ ನೊಟೀಸ್

  |

  ಬಾಲಿವುಡ್‌ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಕೊನೆಗೂ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮನೆ ಬಾಗಿಲು ಬಡಿದಿದೆ.

  ಸುಶಾಂತ್ ಸಾವಿನ ನಂತರ ಡ್ರಗ್ಸ್‌ ಪ್ರಕರಣ ತೆರೆದುಕೊಂಡಾಗಿನಿಂದಲೂ ಕರಣ್ ಜೋಹರ್ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಕೇಳಿಬರುತ್ತಲೇ ಇತ್ತು. ಆದರೆ ಕರಣ್‌ಗೆ ಈವರೆಗೆ ಯಾವುದೇ ನೊಟೀಸ್ ನೀಡಿರಲಿಲ್ಲ.

  ಆದರೆ ಇಂದು ಎನ್‌ಸಿಬಿಯು ಕರಣ್ ಜೋಹರ್‌ಗೆ ನೊಟೀಸ್ ನೀಡಿದೆ. ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡುವಂತೆ ಕರಣ್‌ಗೆ ಎನ್‌ಸಿಬಿ ಕೇಳಿದೆ.

  2019 ರ ಜುಲೈನಲ್ಲಿ ಕರಣ್ ಜೋಹರ್ ಮನೆಯಲ್ಲಿ ಆಯೋಜಿತವಾಗಿದ್ದ ಪಾರ್ಟಿಯೊಂದರ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಆ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ಅರ್ಜುನ್ ಕಪೂರ್, ಶಾಹಿದ್ ಕಪೂರ್, ರೋಹಿತ್ ಧವನ್, ವರುಣ್ ಧವನ್, ಜೋಯಾ ಅಖ್ತರ್, ವಿಕ್ಕಿ ಕೌಶಲ್, ನತಾಶಾ ದಲಾಲ್ ಇನ್ನೂ ಕೆಲವರು ಭಾಗವಹಿಸಿದ್ದರು.

  ಪಾರ್ಟಿಯಲ್ಲಿ ಈ ಸ್ಟಾರ್ ನಟ-ನಟಿಯರೆಲ್ಲಾ ಒಟ್ಟಿಗಿರುವ ವಿಡಿಯೋವನ್ನು ಕರಣ್ ಜೋಹರ್ ಅವರೇ ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಲಾಗಿದೆ ಎಂಬ ಆರೋಪ ಆಗಲೇ ಕೇಳಿಬಂದಿತ್ತು.

  ಹೊಸ ಉದ್ಯಮ ಶುರು ಮಾಡಿದ ಚಿಕ್ಕಣ್ಣ | Chikanna | Darshan | Filmibeat Kannada

  ಇದೀಗ ಇದೇ ವಿಡಿಯೋಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯು ಕರಣ್ ಜೋಹರ್‌ಗೆ ನೊಟೀಸ್ ನೀಡಿದ್ದು, ಆ ವಿಡಿಯೋದ ಬಗ್ಗೆ, ಕರಣ್ ಆಯೋಜಿಸಿದ್ದ ಪಾರ್ಟಿ ಬಗ್ಗೆ ಹಾಗೂ ಡ್ರಗ್ಸ್ ಪ್ರಕರಣದ ಬಗ್ಗೆ ಕರಣ್ ಅನ್ನು ಪ್ರಶ್ನೆ ಮಾಡಲಿದೆ.

  English summary
  NCB sends notice to Karan Johar asking about party video of 2019 which is circulating on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X