twitter
    For Quick Alerts
    ALLOW NOTIFICATIONS  
    For Daily Alerts

    Aryan Khan drugs case : ಆರ್ಯನ್ ಖಾನ್ ಪ್ರಕರಣ: ಕಾಲಾವಕಾಶ ಕೇಳಿದ ಎನ್‌ಸಿಬಿ

    |

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಹೊಸದೊಂದು ಬೆಳವಣಿಗೆ ಕಂಡು ಬಂದಿದೆ. ಪ್ರಕರಣ ನಡೆದು ತಿಂಗಳುಗಳೇ ಆದರು ದೋಷಾರೋಪ ಪಟ್ಟಿ ಸಲ್ಲಿಸದ ಎನ್‌ಸಿಬಿ, ದೋಷರೋಪ ಪಟ್ಟಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕೋರಿದೆ.

    ಎನ್‌ಸಿಬಿಯ ವಿಶೇಷ ತನಿಖಾ ದಳವು ಈಗ ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿದ್ದು, ದೋಷಾರೋಪ ಪಟ್ಟಿಯನ್ನು ಏಪ್ರಿಲ್‌ನಲ್ಲಿ ಸಲ್ಲಿಸಬೇಕಿತ್ತು. ಆದರೆ ತನಿಖೆ ಪೂರ್ಣವಾಗದ ಕಾರಣ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗದು ಎಂದು ಕಾಲಾವಕಾಶ ಪಡೆದುಕೊಂಡಿದೆ.

    ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯವೇ ಇಲ್ಲ! ಹಾಗಿದ್ದರೆ ಬಂಧಿಸಿದ್ದು ಏಕೆ? ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯವೇ ಇಲ್ಲ! ಹಾಗಿದ್ದರೆ ಬಂಧಿಸಿದ್ದು ಏಕೆ?

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರ್ಯನ್ ಖಾನ್ ಬಂಧನವಾಗಿತ್ತು, ಎಫ್‌ಐಆರ್ ದಾಖಲಾದ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬೇಕಿತ್ತು. ಆದರೆ ಈ ಪ್ರಕರಣ ವಿಐಪಿ ಪ್ರಕರಣವಾದ್ದರಿಂದ ಹೆಚ್ಚು ಜಾಗರೂಕ ತನಿಖೆಯ ಅವಶ್ಯಕತೆ ಇದೆಯೆಂದು ಹಾಗಾಗಿ ವಿವರವಾದ ತನಿಖೆ ನಡೆಸಿ ಚಾರ್ಜ್‌ ಶೀಟ್ ಸಲ್ಲಿಸಬೇಕಿದೆ ಎಂದು ಎನ್‌ಸಿಬಿಯ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹೇಳಿದೆ. ಅಲ್ಲದೆ, ಚಾರ್ಜ್‌ ಶೀಟ್ ಸಲ್ಲಿಕೆಗೆ ಇನ್ನೂ 90 ದಿನಗಳ ಕಾಲಾವಕಾಶ ನೀಡಿರೆಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.

    NCB Special Team Seek Time To File Charge Sheet Against Aryan Khan

    ಕಳೆದ ವರ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿದ್ದ ಪ್ರಕರಣವಾಗಿತ್ತು ಆರ್ಯನ್ ಖಾನ್ ಪ್ರಕರಣ. 2021 ರ ಅಕ್ಟೋಬರ್ 03 ರಂದು ಆರ್ಯನ್ ಖಾನ್ ಹಾಗೂ ಇನ್ನಿಬ್ಬರನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿತ್ತು. ಬಳಿಕ ಹಲವು ನಾಟಕೀಯ ಘಟನೆಗಳು ನಡೆದವು. ಎನ್‌ಸಿಬಿ ನಡೆಸಿದ ಆಪರೇಷನ್‌ನಲ್ಲಿ ಖಾಸಗಿ ವ್ಯಕ್ತಿ ಕಿರಣ್ ಗೋಸಾಯಿ ಶಾಮೀಲಾಗಿರುವುದು ಬೆಳಕಿಗೆ ಬಂದಿತು. ಕಿರಣ್ ಗೋಸಾಯಿ ಹಾಗೂ ಇನ್ನೊಬ್ಬ ಶಾರುಖ್ ಖಾನ್ ಪುತ್ರನನ್ನು ಬಿಡಿಸಲು ಅಥವಾ ಆತನ ಬಂಧನ ಆಗದಂತೆ ತಡೆಯಲು ಲಕ್ಷಾಂತರ ರುಪಾಯಿ ಹಣ ಕೇಳಿದ್ದ ಘಟನೆ ಹೊರ ಬಿತ್ತು. ಎನ್‌ಸಿಬಿಯು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆರೋಪಗಳು ಕೇಳಿ ಬಂದವು. ಬಳಿಕ ಕಿರಣ್ ಗೋಸಾಯಿಯ ಬಂಧನವಾಯ್ತು.

    ಅಕ್ಟೋಬರ್ 28 ರಂದು ಆರ್ಯನ್ ಖಾನ್ ಹಾಗೂ ಆತನೊಂದಿಗೆ ಬಂಧನಕ್ಕೆ ಒಳಗಾಗಿದ್ದ ಇನ್ನಿಬ್ಬರಿಗೆ ಜಾಮೀನು ದೊರಕಿತು. ಬಳಿಕ ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ ಎಂಬುದು ಖಾತ್ರಿಯಾಯಿತು. ಈಗಲೂ ವಿಚಾರಣೆ ಚಾಲ್ತಿಯಲ್ಲಿದೆ.

    English summary
    NCB special investigation team seek time to file charge sheet against Aryan Khan. They asked 90 days extra to file charge sheet.
    Tuesday, March 29, 2022, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X