twitter
    For Quick Alerts
    ALLOW NOTIFICATIONS  
    For Daily Alerts

    ಲೈಂಗಿಕ ದೌರ್ಜನ್ಯ ಪ್ರಕರಣ: 'ಐರಾವತ' ನಟಿ ಊರ್ವಶಿ, ಮಹೇಶ್ ಭಟ್‌ಗೆ ನೋಟಿಸ್

    |

    ಲೈಂಗಿ ದೌರ್ಜನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ನಟಿಯರಾದ ಊರ್ವಶಿ ರೌಟೇಲಾ, ಇಶಾ ಗುಪ್ತಾ, ಮೌನಿ ರಾಯ್ ಮತ್ತು ಕಿರುತೆರೆ ನಟ ಪ್ರಿನ್ಸ್ ನರುಲಾ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ನೋಟಿಸ್ ಜಾರಿ ಮಾಡಿದೆ.

    Recommended Video

    Kushee Ravi Alias Dia Soup Photoshoot | Filmibeat Kannada

    ಕ್ಯಾಸ್ಟಿಂಗ್ ಕೌಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಸಲ್ಲಿಸಿದ ದೂರಿ ಅನ್ವಯ ಈ ನೋಟಿಸ್ ನೀಡಲಾಗಿದೆ.

    ವರ್ಜಿನಿಟಿ ಎನ್ನುವುದು ಮಹಿಳೆಯ ಆಯ್ಕೆಯಾಗಬೇಕು ಎಂದ 'ಐರಾವತ' ನಟಿ ಊರ್ವಶಿವರ್ಜಿನಿಟಿ ಎನ್ನುವುದು ಮಹಿಳೆಯ ಆಯ್ಕೆಯಾಗಬೇಕು ಎಂದ 'ಐರಾವತ' ನಟಿ ಊರ್ವಶಿ

    ಮಾಡೆಲಿಂಗ್ ಆಫರ್‌ಗಳನ್ನು ನೀಡುವುದಾಗಿ ಕರೆಸಿಕೊಂಡು ಯುವತಿಯರ ಮೇಲೆ ಲೈಂಗಿಕ ಕಿರುಕುಳ ನೀಡುವ ಮತ್ತು ಅವರನ್ನು ಬ್ಲ್ಯಾಕ್ ಮೇಲ್ ಮಾಡುವ ಕತ್ಯ ಎಸಗಲಾಗುತ್ತಿದೆ ಎಂದು ಕಂಪೆನಿಯೊಂದರ ಮಾಲೀಕನ ವಿರುದ್ಧ ಭಯಾನಾ ದುರು ನೀಡಿದ್ದರು. ಐಎಂಜಿ ವೆಂಚರ್ಸ್ ಎಂಬ ಕಂಪೆನಿ ನಡೆಸುತ್ತಿದ್ದ ಸನ್ನಿ ವರ್ಮಾ ಮತ್ತು ಆತನ ಸಹವರ್ತಿಗಳು ವಿವಿಧ ಯುವತಿಯರ ಮೇಲೆ ಲೈಂಗಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗಿದ ಆರೋಪವಿದೆ. ಸನ್ನಿ ವರ್ಮಾನ ಕಂಪೆನಿಯ ಪ್ರಚಾರ ರಾಯಭಾರಿಗಳಾಗಿ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಬಾಲಿವುಡ್‌ನ ಈ ಮಂದಿ ಪಾಲ್ಗೊಂಡಿದ್ದರು. ಹೀಗಾಗಿ ಈ ನೋಟಿಸ್ ಜಾರಿ ಮಾಡಲಾಗಿದೆ. ಮುಂದೆ ಓದಿ.

    ಪ್ರತಿಕ್ರಿಯಿಸದ ಸ್ಟಾರ್‌ಗಳು

    ಪ್ರತಿಕ್ರಿಯಿಸದ ಸ್ಟಾರ್‌ಗಳು

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಮುಂದೆ ಹಾಜರಾಗುವಂತೆ ಈ ಎಲ್ಲ ವ್ಯಕ್ತಿಗಳಿಗೆ ಸೂಚನೆ ನೀಡಲಾಗಿತ್ತು. ಎಲ್ಲ ಬಗೆಯ ಸಂವಹನ ಸಾಧ್ಯತೆಗಳ ಮೂಲಕವೂ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಈ ಯಾವ ವ್ಯಕ್ತಿಗಳೂ ಅದಕ್ಕೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ ಮತ್ತು ನಿಗದಿತ ವಿಚಾರಣೆಗೂ ಹಾಜರಾಗಿಲ್ಲ ಎಂದು ಎನ್‌ಸಿಡಬ್ಲ್ಯೂ ಹೇಳಿದೆ.

    ಗೈರಾದರೆ ಕಠಿಣ ಕ್ರಮ

    ಗೈರಾದರೆ ಕಠಿಣ ಕ್ರಮ

    ಈ ಪ್ರಕರಣದಲ್ಲಿ ತನ್ನ ಎದುರು ಹಾಜರಾಗದೆ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಆಯೋಗದ ಸಭೆಯನ್ನು ಆಗಸ್ಟ್ 18ರ ಬೆಳಿಗ್ಗೆ 11.30ಕ್ಕೆ ಮುಂದೂಡಲಾಗಿದೆ. ಈ ಅವಧಿಯಲ್ಲಿ ಎಲ್ಲರಿಗೂ ಮತ್ತೊಮ್ಮೆ ಔಪಚಾರಿಕವಾಗಿ ನೋಟಿಸ್ ನೀಡಲಾಗುತ್ತದೆ. ಆಗಲೂ ಗೈರಾದರೆ ನಿಯಮಗಳ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ನಗ್ನ ಚಿತ್ರ ನೀಡುವಂತೆ ಒತ್ತಾಯ

    ನಗ್ನ ಚಿತ್ರ ನೀಡುವಂತೆ ಒತ್ತಾಯ

    ಸನ್ನಿ ವರ್ಮಾ ತನ್ನ ಕಂಪೆನಿಯ ಮೂಲಕ ಮಿಸ್ ಏಷ್ಯಾ ಸ್ಪರ್ಧೆ ಆಯೋಜಿಸುವ ನೆಪದಲ್ಲಿ ಯುವತಿಯರಿಗೆ ಆಹ್ವಾನ ನೀಡುತ್ತಿದ್ದ. ಸ್ಪರ್ಧೆಯಲ್ಲಿ ಆಯ್ಕೆಯಾದ ಯುವತಿಯರನ್ನು ಮಾಡೆಲ್‌ಗಳಾಗಿ ಪರಿಚಯಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ಇದು ವಂಚನೆಯಂತೆ ಅನಿಸಬಾರದು ಎಂದು 2,950 ರೂ ಪ್ರವೇಶ ಶುಲ್ಕ ಪಡೆದುಕೊಳ್ಳುತ್ತಿದ್ದ. ಅಲ್ಲಿಗೆ ಹಾಜರಾಗುವ ಯುವತಿಯರಿಗೆ ಸನ್ನಿ ವರ್ಮಾನ ಮಹಿಳಾ ಸಹವರ್ತಿಗಳು ನಗ್ನ ಚಿತ್ರ ನೀಡುವಂತೆ ಸೂಚಿಸುತ್ತಿದ್ದರು. ನಗ್ನ ಚಿತ್ರ ನೀಡಿದರೆ ಸ್ಪರ್ಧೆಯಲ್ಲಿ ಉತ್ತಮ ಶ್ರೇಣಿ ಬರುತ್ತದೆ ಎಂದು ನಂಬಿಸುತ್ತಿದ್ದರು ಎಂದು ಜುಲೈ 31ರಂದು ಯೋಗಿತಾ ಭಯಾನಾ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

    ದೈಹಿಕ ಸಂಬಂಧ ಬೆಳೆಸಿ ಬ್ಲ್ಯಾಕ್‌ಮೇಲ್

    ದೈಹಿಕ ಸಂಬಂಧ ಬೆಳೆಸಿ ಬ್ಲ್ಯಾಕ್‌ಮೇಲ್

    ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳಲ್ಲಿ ಸನ್ನಿ ವರ್ಮಾ ಈ ಹಿಂದೆ ಕೂಡ ಬಂಧನಕ್ಕೆ ಒಳಗಾಗಿದ್ದ. ತನ್ನ ಕಂಪೆನಿಗೆ ಅವಕಾಶಕ್ಕಾಗಿ ಬರುವ ಯುವತಿಯರ ಜತೆ ದೈಹಿಕ ಸಂಬಂಧ ಬೆಳೆಸಿದ ಬಳಿಕ ಸನ್ನಿ ವರ್ಮಾ, ಅವರಿಗೆ ಲೈಂಗಿಕ ಸುಖ ನೀಡುವಂತೆ ನಿರಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ದೇಶದ ವಿವಿಧೆಡೆಯ ಅನೇಕ ಯುವತಿಯರು ಸನ್ನಿ ಹಾಗೂ ಆತನ ಸಹವರ್ತಿಗಳಿಂದ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ.

    English summary
    PNCW has issed fresh notice to Mahesh Bhatt, Urvashi Rautela, Mouni Roy and others for recording witness statement in sexual assault case.
    Saturday, August 8, 2020, 9:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X