For Quick Alerts
  ALLOW NOTIFICATIONS  
  For Daily Alerts

  2ನೇ ಮದುವೆಯಾದ ಅಪ್ಪ, ಆತ್ಮಹತ್ಯೆಗೆ ಯತ್ನಿಸಿದ ಅಮ್ಮ, ಕಹಿ ಘಟನೆ ಬಿಚ್ಚಿಟ್ಟ ನೀನಾ ಗುಪ್ತಾ

  |

  ಬಾಲಿವುಡ್‌ನ ಖ್ಯಾತ ನಟಿ ನೀನಾ ಗುಪ್ತಾ ಅನೇಕ ವರ್ಷಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದ್ಭುತ ಪೋಷಕ ಪಾತ್ರಗಳ ಮೂಲಕ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನೀನಾ ಗುಪ್ತಾ ಇತ್ತೀಚಿಗೆ ತನ್ನ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದಾರೆ.

  'ಸಚ್ ಕಹೂನ್ ತೋಹ್: ಮೇರಿ ಆತ್ಮಕಥಾ'ವನ್ನು ನೈಜವಾಗಿಡಲು ನಿರ್ಧರಿಸಿದ್ದಾರೆ. ಆತ್ಮಕಥೆಯಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ಮದುವೆ, ಬ್ರೇಕಪ್ ಸೇರಿದಂತೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರತಿಭಾವಂತ ನಟಿಗಿಂತ ಹೆಚ್ಚಾಗಿ ವ್ಯಕ್ತಿಯಾಗಿ ನೀನಾ ಗುಪ್ತಾ ಎಲ್ಲರಿಗೂ ಹತ್ತಿರವಾಗುತ್ತಾರೆ. ಮುಂದೆ ಓದಿ...

  ಹೆತ್ತವರ ಬಗ್ಗೆ ನೀನಾ ಗುಪ್ತಾ ಹೇಳಿದ್ದೇನು?

  ಹೆತ್ತವರ ಬಗ್ಗೆ ನೀನಾ ಗುಪ್ತಾ ಹೇಳಿದ್ದೇನು?

  ಆತ್ಮಕಥೆಯಲ್ಲಿ ತನ್ನ ಹೆತ್ತವರ ಬಗ್ಗೆಯೂ ಬರೆದುಕೊಂಡಿದ್ದಾರೆ. ನೀನಾ ಚಿಕ್ಕವಳಾಗಿದ್ದಾಗ ತಂದೆ ಮತ್ತೊಂದು ಮದುವೆಯಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ನೀನಾ ತಾಯಿ ಶಕುಂತಲಾ ಪಂಜಾಬಿ ಮೂಲದವರು. ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾದರು. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ಧೈರ್ಯ ತಂದೆ ಅವರಿಗೂ ಇತ್ತು ಎಂದಿದ್ದಾರೆ ನೀನಾ ಗುಪ್ತಾ.

  ಅಪ್ಪನಿಗೆ ತುಂಬಾ ಧೈರ್ಯ

  ಅಪ್ಪನಿಗೆ ತುಂಬಾ ಧೈರ್ಯ

  ನೀನಾ ತನ್ನ ಆತ್ಮಕಥೆಯಲ್ಲಿ, "ನನ್ನ ತಂದೆ ಪ್ರೀತಿಗಾಗಿ ನನ್ನ ತಾಯಿಯನ್ನು ಮದುವೆಯಾಗುವ ಧೈರ್ಯ ಹೊಂದಿದ್ದರು. ಆದರೆ ಅವರೊಬ್ಬ ಕರ್ತವ್ಯನಿಷ್ಠ ಮಗನಾಗಿದ್ದರು. ಅವರ ತಂದೆ ತನ್ನ ಸಮುದಾಯದ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ ಅದನ್ನು ನಿರಾಕರಿಸಲಿಲ್ಲ" ಎಂದಿದ್ದಾರೆ.

  ಅಮ್ಮ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು

  ಅಮ್ಮ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು

  ತಂದೆ ಮತ್ತೊಂದು ಮದುವೆ ಆಗುತ್ತಿರುವ ವಿಚಾರ ಕೇಳಿ ನೀನಾ ತಾಯಿ ಕುಗ್ಗಿ ಹೋಗಿದ್ದರು. ಆತ್ಮಹತ್ಯೆ ಪ್ರಯತ್ನ ಕೂಡ ಮಾಡಿದ್ದರು. "ನನ್ನ ತಂದೆಯಿಂದ ಆದ ಈ ದ್ರೋಹವು ತಾಯಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತ್ತು. ಪ್ರತಿದಿನ ಸಂಜೆ ಊಟದ ನಂತರ ಯಾವುದು ಸಹಜವಾಗಿ ಇರುತ್ತಿರಲಿಲ್ಲ. ಸೀಮಾ ಆಂಟಿ (ನೀನಾ ತಂದೆಯ ಮತ್ತೋರ್ವ ಪತ್ನಿ) ಜೊತೆಯು ಸಮಯ ಕಳೆಯಲಿಲ್ಲ" ಎಂದು ಹೇಳಿದ್ದಾರೆ.

  Sudeep ಅವರು Chess ಆಡುವಾಗ ಮೋಸ ಮಾಡಿದ ಆರೋಪ | Filmibeat Kannada
  ಮೊದಲ ಮದುವೆ ರಹಸ್ಯ ಬಿಚ್ಚಿಟ್ಟ ನೀನಾ

  ಮೊದಲ ಮದುವೆ ರಹಸ್ಯ ಬಿಚ್ಚಿಟ್ಟ ನೀನಾ

  "ತಂದೆ ಎರಡು ಕುಟುಂಬದ ಜೊತೆಯೂ ನಿರಂತರವಾಗಿ ಓಡಾಡುತ್ತಿದ್ದರು. ಎರಡನೇ ಪತ್ನಿಗೆ ಇಬ್ಬರು ಗಂಡು ಮಕ್ಕಳು," ಎಂದು ನೀನಾ ಬಹಿರಂಗ ಪಡಿಸಿದ್ದಾರೆ. ಇನ್ನು ನೀನಾ ತನ್ನ ಮೊದಲ ಮದುವೆಯ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮದುವೆಯಾಗಿ ಪತಿಯಿಂದ ದೂರ ಆಗಿದ್ದ ಸತ್ಯವನ್ನು ತನ್ನ ಆತ್ಮಕಥೆಯಲ್ಲಿ ಬಿಚ್ಚಿಟ್ಟಿದ್ದಾರೆ.

  English summary
  Bollywood Actress Neena Gupta reveals her father's second marriage in Autobiography.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X